Kiccha Sudeep : ಕಿಚ್ಚ ಸುದೀಪ್ ನೆಕ್ಸ್ಟ್‌ ಸಿನಿಮಾಗೋಸ್ಕರ ಕಾಯ್ತಿದ್ದೀರಾ? ಇಲ್ಲಿದೆ ಎಕ್ಸೈಟಿಂಗ್ ಅಪ್ಡೇಟ್

Sudeep next movie : ವಿಕ್ರಾಂತ್‌ ರೋಣ ಬಳಿಕ ಕಿಚ್ಚ ಸುದೀಪ್‌ ಯಾವುದೇ ಸಿನಿಮಾ ಬಗ್ಗೆ ಘೋಷಿಸಿಲ್ಲ. ಕಳೆದ ವರ್ಷ ವಿಕ್ರಾಂತ್‌ ರೋಣ ಚಲನಚಿತ್ರ ತೆರೆಕಂಡಿತು. ಆ ಬಳಿಕ ಬಿಗ್ ಬಾಸ್‌ ಓಟಿಟಿ ಮತ್ತು ಟಿವಿ ಸೀಸನ್‌ಗಳಲ್ಲಿ ಸುದೀಪ್‌ ಬ್ಯುಸಿಯಾದರು. ಹೀಗಿರುವಾಗ ಸುದೀಪ್ ಮುಂದಿನ ಚಿತ್ರ ಯಾವುದು ಎಂಬ ಪ್ರಶ್ನೆ ಅವರ ಅಭಿಮಾನಿಗಳನ್ನು ಕಾಡುತ್ತಿತ್ತು. ಇದೀಗ ಅದಕ್ಕೆ ಉತ್ತರ ಸಿಕ್ಕಿದೆ. 

Written by - Chetana Devarmani | Last Updated : Jan 17, 2023, 03:24 PM IST
  • ಕಿಚ್ಚ ಸುದೀಪ್ ನೆಕ್ಸ್ಟ್‌ ಸಿನಿಮಾಗೋಸ್ಕರ ಕಾಯ್ತಿದ್ದೀರಾ?
  • ವಿಕ್ರಾಂತ್‌ ರೋಣ ಬಳಿಕ ಕಿಚ್ಚ ಸುದೀಪ್‌ ಈ ಸಿನಿಮಾದಲ್ಲಿ ನಟಿಸುತ್ತಾರಂತೆ!
  • ಪ್ರಸಿದ್ಧ ಪ್ರೊಡಕ್ಷನ್ ಹೌಸ್ ಜೊತೆ ಕಿಚ್ಚನ ಮುಂದಿನ ಸಿನಿಮಾ
Kiccha Sudeep : ಕಿಚ್ಚ ಸುದೀಪ್ ನೆಕ್ಸ್ಟ್‌ ಸಿನಿಮಾಗೋಸ್ಕರ ಕಾಯ್ತಿದ್ದೀರಾ? ಇಲ್ಲಿದೆ ಎಕ್ಸೈಟಿಂಗ್ ಅಪ್ಡೇಟ್  title=
Kiccha Sudeep

Kiccha Sudeep next movie with KRG Studios : ವಿಕ್ರಾಂತ್‌ ರೋಣ ಬಳಿಕ ಕಿಚ್ಚ ಸುದೀಪ್‌ ಯಾವುದೇ ಸಿನಿಮಾ ಬಗ್ಗೆ ಘೋಷಿಸಿಲ್ಲ. ಕಳೆದ ವರ್ಷ ವಿಕ್ರಾಂತ್‌ ರೋಣ ಚಲನಚಿತ್ರ ತೆರೆಕಂಡಿತು. ಆ ಬಳಿಕ ಬಿಗ್ ಬಾಸ್‌ ಓಟಿಟಿ ಮತ್ತು ಟಿವಿ ಸೀಸನ್‌ಗಳಲ್ಲಿ ಸುದೀಪ್‌ ಬ್ಯುಸಿಯಾದರು. ಉಪೇಂದ್ರ ನಟನೆಯ ಕಬ್ಜದಲ್ಲಿ ಸುದೀಪ್‌ ಕಾಣಿಸಿಕೊಳ್ಳಲಿದ್ದಾರೆ. ಇದನ್ನು ಬಿಟ್ಟು ಬೇರೆ ಯಾವ ಸಿನಿಮಾಗಳು ಸಹ ಸುದೀಪ್‌ ಕಡೆಯಿಂದ ಅನೌನ್ಸ್‌ ಆಗಿಲ್ಲ. ಹೀಗಿರುವಾಗ ಸುದೀಪ್ ಮುಂದಿನ ಚಿತ್ರ ಯಾವುದು ಎಂಬ ಪ್ರಶ್ನೆ ಅವರ ಅಭಿಮಾನಿಗಳನ್ನು ಕಾಡುತ್ತಿತ್ತು. ಇದೀಗ ಅದಕ್ಕೆ ಉತ್ತರ ಸಿಕ್ಕಿದೆ. 

ಇದನ್ನೂ ಓದಿ : ಸಪ್ತಮಿ ಗೌಡ ನಟನೆಯ ಹಿಂದಿ ಸಿನಿಮಾ ಶೂಟಿಂಗ್‌ ವೇಳೆ ಅವಘಡ, ನಟಿಗೆ ಗಾಯ!

ಸುದೀಪ್ ಪ್ರಸಿದ್ಧ ಪ್ರೊಡಕ್ಷನ್ ಹೌಸ್ ‘ಕೆಆರ್‌ಜಿ ಸ್ಟುಡಿಯೋಸ್’ ನೊಂದಿಗೆ ಮುಂದಿನ ಸಿನಿಮಾ ಮಾಡಲಿದ್ದಾರೆ ಎನ್ನಲಾಗಿದೆ. ಇದಕ್ಕೆ ಕಾರಣ ಕೆಆರ್‌ಜಿ  ಸ್ಟುಡಿಯೋಸ್‌ನ ಕಾರ್ತಿಕ್ ಗೌಡ ಜೊತೆ ಸುದೀಪ್ ಇರುವ ಹಲವು ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗುತ್ತಿವೆ. 

 

 

2017ರಲ್ಲಿ ಸ್ಥಾಪನೆ ಆದ ಕೆಆರ್‌ಜಿ ಸ್ಟುಡಿಯೋಸ್ ಹಲವು ಸಿನಿಮಾಗಳನ್ನು ಹಂಚಿಕೆ ಮಾಡಿದೆ. ಕೆಜಿಎಫ್ ಚಾಪ್ಟರ್ 1, ಕೆಜಿಎಫ್ ಚಾಪ್ಟರ್ 2 ಸಿನಿಮಾಗಳನ್ನು ಹಂಚಿಕೆ ಮಾಡಿದ ಖ್ಯಾತಿ ಕೆಆರ್‌ಜಿ ಸ್ಟುಡಿಯೋಸ್‌ಗೆ ಸಲ್ಲುತ್ತದೆ. ನಟ ಡಾಲಿ ಧನಂಜಯ್ ನಟನೆಯ ರತ್ನನ್ ಪ್ರಪಂಚ ಸಿನಿಮಾ ಮೂಲಕ ಕೆಆರ್‌ಜಿ ಸ್ಟುಡಿಯೋಸ್ ಫಿಲ್ಮ್‌ ಪ್ರೊಡ್ಯೂಸ್‌ ಮಾಡಲು ಆರಭಿಸಿದರು. ಈಗ ಸುದೀಪ್ ನಟಿಸಲಿರುವ ಚಿತ್ರವನ್ನು ಕೆಆರ್‌ಜಿ ಸ್ಟುಡಿಯೋಸ್ ಪ್ರೊಡ್ಯೂಸ್‌ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಈ ಸಿನಿಮಾವನ್ನು ನಂದ ಕಿಶೋರ್ ನಿರ್ದೇಶಿಸಲಿದ್ದಾರೆ ಎಂದು ಸಹ ಹೇಳಲಾಗುತ್ತಿದೆ. ಸುದೀಪ್‌ ಮತ್ತು ನಂದ ಕಿಶೋರ್‌ ಕಾಂಬಿನೇಷನ್‌ನಲ್ಲಿ ರನ್ನ, ಮುಕುಂದ ಮುರಾರಿ ಸಖತ್‌ ಹಿಟ್‌ ಕೊಟ್ಟಿದ್ದವು. 

ಇದನ್ನೂ ಓದಿ : Jr NTR with Cricketers : ಜೂ.ಎನ್‌ಟಿಆರ್‌ ಜೊತೆ ಟೀಂ ಇಂಡಿಯಾ ಆಟಗಾರರು.. ಈ ಭೇಟಿಯ ವಿಶೇಷವೇನು?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News