ʼತುನಿವುʼ ಸಿನಿಮಾ ನೋಡೋಕಾಗಿಲ್ಲ ಅಂತ ʼಅಜಿತ್ ಅಭಿಮಾನಿʼ ಆತ್ಮಹತ್ಯೆ..!
ಇತ್ತೀಚೆಗೆ ಸಣ್ಣ ವಿಷಯಕ್ಕೂ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ತಾಯಿ ಬೈದಿದ್ದಕ್ಕೆ, ತಂದೆ ಹೊಡೆದಿದ್ದಕ್ಕೆ, ಪ್ರೇಮಿ ಮಾತನಾಡದಕ್ಕೆ ಸಾವಿಗೆ ಶರಣಾಗುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಒಂದು ಕ್ಷಣಿಕ ನಿರ್ಧಾರ ಅವರನ್ನು ಹಾಗೂ ಅವರನ್ನೇ ನಂಬಿಕೊಂಡಿರುವ ಮನೆಮಂದಿಯನ್ನು ಸಂಕಷ್ಟದ ಕೂಪಕ್ಕೆ ತಳ್ಳಿ ಬಿಡುತ್ತದೆ. ತಮಿಳುನಾಡಿನಲ್ಲಿ ವ್ಯಕ್ತಿಯೊಬ್ಬ ತನ್ನ ನೆಚ್ಚಿನ ನಾಯಕನ ಸಿನಿಮಾ ನೋಡೋಕೆ ಆಗ್ಲಿಲ್ಲ ಅಂತ ಆತ್ಮಹತ್ಯೆ ಮಾಡಿಕೊಂಡಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ.
Ajith fan death : ಇತ್ತೀಚೆಗೆ ಸಣ್ಣ ವಿಷಯಕ್ಕೂ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ತಾಯಿ ಬೈದಿದ್ದಕ್ಕೆ, ತಂದೆ ಹೊಡೆದಿದ್ದಕ್ಕೆ, ಪ್ರೇಮಿ ಮಾತನಾಡದಕ್ಕೆ ಸಾವಿಗೆ ಶರಣಾಗುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಒಂದು ಕ್ಷಣಿಕ ನಿರ್ಧಾರ ಅವರನ್ನು ಹಾಗೂ ಅವರನ್ನೇ ನಂಬಿಕೊಂಡಿರುವ ಮನೆಮಂದಿಯನ್ನು ಸಂಕಷ್ಟದ ಕೂಪಕ್ಕೆ ತಳ್ಳಿ ಬಿಡುತ್ತದೆ. ತಮಿಳುನಾಡಿನಲ್ಲಿ ವ್ಯಕ್ತಿಯೊಬ್ಬ ತನ್ನ ನೆಚ್ಚಿನ ನಾಯಕನ ಸಿನಿಮಾ ನೋಡೋಕೆ ಆಗ್ಲಿಲ್ಲ ಅಂತ ಆತ್ಮಹತ್ಯೆ ಮಾಡಿಕೊಂಡಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಅಸಲಿಗೆ ಕಥೆ ಏನೆಂದರೆ, ತಮಿಳುನಾಡಿನ ತೂತುಕುಡಿಯಲ್ಲಿ ಅಜಿತ್ ಅಭಿಮಾನಿಯೊಬ್ಬರು ತಮ್ಮ ನೆಚ್ಚಿನ ನಾಯಕನ ʼತುನಿವುʼ ಚಿತ್ರವನ್ನು ವೀಕ್ಷಿಸಲು ಯತ್ನಿಸಿದ್ದಾರೆ. ಆದರೆ ಸಿನಿಮಾ ನೋಡಲು ಅವನನ್ನು ಚಿತ್ರಮಂದಿರದ ಒಳಗೆ ಬಿಡದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವೀರಬಾಹು ಅವರ ಹುಟ್ಟೂರು ತೂತುಕುಡಿ, ಅಜಿತ್ ಅವರ ಕಟ್ಟಾ ಅಭಿಮಾನಿ, ಅವರು ತಮ್ಮ ಕುಟುಂಬದೊಂದಿಗೆ ತುನಿವು ಚಿತ್ರ ವೀಕ್ಷಿಸಲು ಥಿಯೇಟರ್‌ಗೆ ಹೋಗಿದ್ದರು.
ಇದನ್ನೂ ಓದಿ: Pathaan kranti : ಕರುನಾಡಲ್ಲಿ ಕಿಂಗ್ ಖಾನ್ ʼಪಠಾಣ್ʼ ಕಲೆಕ್ಷನ್‌ಗೆ ದರ್ಶನ್ ʼಕ್ರಾಂತಿʼ ಕಿಚ್ಚು ತಟ್ಟುತ್ತಾ..!?
ಆದರೆ ವೀರಬಾಗು ಮದ್ಯ ಸೇವಿಸಿದ್ದರಿಂದ ಥಿಯೇಟರ್ ಸಿಬ್ಬಂದಿ ಒಳಗೆ ಬರಲು ಬಿಡಲಿಲ್ಲ. ಇದಲ್ಲದೇ ಅವರ ಮನೆಯವರ ಮುಂದೆಯೂ ಥಿಯೇಟರ್ ಸಿಬ್ಬಂದಿಯಿಂದ ಕೆಟ್ಟದಾಗಿ ಮಾತನಾಡಿದ್ದಾರೆ ಎನ್ನಲಾಗಿದೆ. ವಿವಾದದ ನಂತರ ವೀರಬಾಗು ಹೊರತುಪಡಿಸಿ ಅವರ ಕುಟುಂಬದ ಸದಸ್ಯರಿಗೆ ಮಾತ್ರ ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಿಸಲು ಅವಕಾಶ ನೀಡಲಾಗಿತ್ತು. ಇದರಿಂದ ಮನನೊಂದ ವೀರಬಾಹು ಮನೆಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಅಜಿತ್ ಅಭಿನಯದ ತುನಿವು ಜನವರಿ 11 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಯಿತು, ಅದೇ ಚಿತ್ರ ತೆಲುಗಿನಲ್ಲಿ ʼತೆಗಿಂಪುʼ ಎಂದು ಬಿಡುಗಡೆಯಾಯಿತು. ಹೆಚ್.ವಿನೋದ್ ನಿರ್ದೇಶನದ ಈ ಸಿನಿಮಾ ಬ್ಯಾಂಕ್ ದರೋಡೆಯ ಹಿನ್ನೆಲೆಯ ಕಥಾ ಹಂದರ ಹೊಂದಿದೆ. ಅಜಿತ್ ಜೊತೆಗೆ ಮಲಯಾಳಂ ನಟಿ ಮಂಜು ವಾರಿಯರ್ ಸಾಹಸ ದೃಶ್ಯಗಳಲ್ಲಿ ನಟಿಸಿದ್ದಾರೆ. ತುನಿವು ಚಿತ್ರ ಥಿಯೇಟರ್‌ಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.