ʼಶಾರುಖ್‌ ಖಾನ್‌ ಯಾರುʼ ಎಂದ ಅಸ್ಸಾಂ ಸಿಎಂಗೆ ಫೋನ್‌ ಕಾಲ್‌ ಮಾಡಿದ ಬಾದ್‌ ಶಾ..!

Shah Rukh Khan Himanta Biswa Sarma : ಕಳೆದ ಕೆಲವು ದಿನಗಳ ಹಿಂದೆ ಶಾರುಖ್‌ ಖಾನ್‌ ಯಾರು..? ಎಂದು ಪ್ರಶ್ನೆ ಮಾಡಿದ್ದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಇಂದು ಏಕಾಎಕಿ ತಮ್ಮ ಟ್ಟಿಟರ್‌ ಖಾತೆಯಲ್ಲಿ ಬಾಲಿವುಡ್‌ ನಟ ಶಾರುಖ್‌ ಖಾನ್‌ ಕರೆ ಮಾಡಿ ಮಾತನಾಡಿದ್ದಾರೆ. ಪಠಾಣ್‌ ಸಿನಿಮಾ ಬಿಡುಗಡೆಯಾಗುವ ಥಿಯೇಟರ್‌ಗಳಲ್ಲಿ ನಡೆದ ಹಿಂಸಾಚಾರದ ಬಗ್ಗೆ ಕಳವಳ ವ್ಯಕ್ತಪಡಿಸಿದರು. ನಾನು ಯಾವುದೇ ಅಹಿತಕರ ಘಟನೆಗಳು ಜರುಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದಾಗಿ ತಿಳಿಸಿದ್ದಾರೆ.

Written by - Krishna N K | Last Updated : Jan 22, 2023, 06:26 PM IST
  • ಕಳೆದ ಕೆಲವು ದಿನಗಳ ಹಿಂದೆ ಶಾರುಖ್‌ ಖಾನ್‌ ಯಾರು..? ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಪ್ರಶ್ನೆ ಮಾಡಿದ್ದರು.
  • ಇದಾದ ನಂತರ ಬಾಲಿವುಡ್‌ ನಟ ಶಾರುಖ್‌ ಖಾನ್‌ ಹಿಮಂತ ಬಿಸ್ವಾ ಅವರಿಗೆ ಕರೆ ಮಾಡಿ ಮಾತನಾಡಿದ್ದರು.
  • ಈ ಕುರಿತು ಟ್ವೀಟ್‌ ಮೂಲಕ ಸಿಎಂ ಶರ್ಮಾ ಅವರು ಮಾಹಿತಿ ನೀಡಿದ್ದಾರೆ.
ʼಶಾರುಖ್‌ ಖಾನ್‌ ಯಾರುʼ ಎಂದ ಅಸ್ಸಾಂ ಸಿಎಂಗೆ ಫೋನ್‌ ಕಾಲ್‌ ಮಾಡಿದ ಬಾದ್‌ ಶಾ..! title=

Shah Rukh Khan: ಕಳೆದ ಕೆಲವು ದಿನಗಳ ಹಿಂದೆ ಶಾರುಖ್‌ ಖಾನ್‌ ಯಾರು..? ಎಂದು ಪ್ರಶ್ನೆ ಮಾಡಿದ್ದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಇಂದು ಏಕಾಎಕಿ ತಮ್ಮ ಟ್ಟಿಟರ್‌ ಖಾತೆಯಲ್ಲಿ ಬಾಲಿವುಡ್‌ ನಟ ಶಾರುಖ್‌ ಖಾನ್‌ ಕರೆ ಮಾಡಿ ಮಾತನಾಡಿದ್ದಾರೆ. ಪಠಾಣ್‌ ಸಿನಿಮಾ ಬಿಡುಗಡೆಯಾಗುವ ಥಿಯೇಟರ್‌ಗಳಲ್ಲಿ ನಡೆದ ಹಿಂಸಾಚಾರದ ಬಗ್ಗೆ ಕಳವಳ ವ್ಯಕ್ತಪಡಿಸಿದರು. ನಾನು ಯಾವುದೇ ಅಹಿತಕರ ಘಟನೆಗಳು ಜರುಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದಾಗಿ ತಿಳಿಸಿದ್ದಾರೆ.

ಹೌದು.. ಇತ್ತೀಚಿಗೆ ಸಿಎಂ ಹಿಮಂತ್‌ ಅವರು, ಪಠಾಣ್‌ ಸಿನಿಮಾದ ವಿರುದ್ಧ ಸಂಘಟನೆಯೊಂದು ನಡೆಸಿದ ಹಿಂಸಾತ್ಮಕ ಪ್ರತಿಭಟನೆಯ ಬಗ್ಗೆ ವರದಿಗಾರರು ಪ್ರಶ್ನೆ ಕೇಳಿದ್ದರು. ಆಗ ಹಿಮಂತ್‌ ಅವರು ಶಾರುಖ್ ಖಾನ್ ಯಾರು? ಅವರ ಬಗ್ಗೆ ಅಥವಾ 'ಪಠಾಣ್' ಚಿತ್ರದ ಬಗ್ಗೆ ನನಗೆ ಏನೂ ತಿಳಿದಿಲ್ಲ ಎಂದು ಶರ್ಮಾ ನಿನ್ನೆ ಗುವಾಹಟಿಯಲ್ಲಿ ಹೇಳಿಕೆ ನೀಡಿದ್ದರು. ಇದಾದ ನಂತರ ಹಿಮಂತ ಬಿಸ್ವಾ ಶರ್ಮಾ ಅವರಿಗೆ ಶಾರುಖ್ ಖಾನ್ ಕರೆ ಮಾಡಿ ಮಾತನಾಡಿದ್ದರು ಎನ್ನಲಾಗಿದೆ.

ಇದನ್ನೂಓದಿ: ನಿಖಿಲ್‌ ಕುಮಾರಸ್ವಾಮಿ ಹುಟ್ಟುಹಬ್ಬಕ್ಕೆ ಭರ್ಜರಿ ಗಿಫ್ಟ್ : ʼಯುವರಾಜʼನ 4ನೇ ಸಿನಿಮಾ ಅನೌನ್ಸ್‌

ಈ ಕುರಿತು ಟ್ವೀಟ್‌ ಮೂಲಕ ಮಾಹಿತಿ ನೀಡಿರುವ ಸಿಎಂ ಶರ್ಮಾ ಅವರು, ʼಬಾಲಿವುಡ್ ನಟ ಶಾರುಖ್‌ ಖಾನ್‌ ಅವರು ಬೆಳಗಿನ ಜಾವ 2 ಗಂಟೆಗೆ ಕರೆ ಮಾಡಿದ್ದರು. ಅವರು ತಮ್ಮ ಚಿತ್ರದ ಪ್ರದರ್ಶನವಾಗಲಿರುವ ಗುವಾಹಟಿಯಲ್ಲಿ ನಡೆದ ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಕರ್ತವ್ಯ ಎಂದು ನಾನು ಅವರಿಗೆ ಭರವಸೆ ನೀಡಿದ್ದೇನೆ. ನಾವು ವಿಚಾರಿಸುತ್ತೇವೆ ಮತ್ತು ಅಂತಹ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾಗಿ ಮುಖ್ಯಮಂತ್ರಿ ಟ್ವೀಟ್‌ನಲ್ಲಿʼ ತಿಳಿಸಿದ್ದಾರೆ. 

ಶುಕ್ರವಾರ ಗುವಾಹಟಿ ನಗರದ ನರೇಂಗಿಯಲ್ಲಿ ಪಠಾಣ್ ಚಿತ್ರ ಪ್ರದರ್ಶನಗೊಳ್ಳಲಿದ್ದು, ಪೋಸ್ಟರ್‌ ಹಚ್ಚಲಾಗಿದೆ. ನಿನ್ನೆ ಭಜರಂಗದಳದ ಕಾರ್ಯಕರ್ತರು ಥಿಯೇಟರ್​ಗೆ ನುಗ್ಗಿ ಪೋಸ್ಟರ್​ಗಳನ್ನು ಹರಿದು, ಸುಟ್ಟು ಹಾಕಿ ಪ್ರತಿಭಟನೆ ನಡೆಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News