Bigg Boss OTT 2 Mahesh Bhatt Controversy: ಚಿತ್ರ ನಿರ್ಮಾಪಕ ಮಹೇಶ್ ಭಟ್ ಬಿಗ್ ಬಾಸ್ OTT 2 ರ ಅಭಿಮಾನಿಗಳಿಗೆ ಆಘಾತ ಮತ್ತು ಅಸಮಾಧಾನವನ್ನುಂಟು ಮಾಡಿದ್ದಾರೆ. ಬಿಗ್ ಬಾಸ್ OTT ಸೀಸನ್ 2 ರ ಸ್ಪರ್ಧಿ ಮನಿಶಾ ರಾಣಿಯನ್ನು ಮಹೇಶ್ ಭಟ್ ನಡೆಸಿಕೊಂಡ ರೀತಿಯನ್ನು ಜನರು ಇಷ್ಟಪಡುತ್ತಿಲ್ಲ. ಸಲ್ಮಾನ್ ಖಾನ್ ಅವರ ಕಾರ್ಯಕ್ರಮದ ಹಲವು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಇದರಲ್ಲಿ ಚಲನಚಿತ್ರ ನಿರ್ಮಾಪಕ ಮಹೇಶ್ ಭಟ್ ತಮ್ಮ ಮಗಳು ಪೂಜಾ ಭಟ್ ಅವರನ್ನು ಭೇಟಿ ಮಾಡಲು ಬಿಗ್ ಬಾಸ್ ಮನೆಗೆ ಪ್ರವೇಶಿಸಿದ್ದಾರೆ. ಪೂಜಾ ಭಟ್ ಮತ್ತು ಮಹೇಶ್ ಭಟ್ ಭೇಟಿ ಜಗತ್ತನ್ನೇ ಅಚ್ಚರಿಗೊಳಿಸಿದ್ದರೆ, ಇತರ ಸ್ಪರ್ಧಿಗಳೊಂದಿಗೆ ಮಹೇಶ್ ಭಟ್ ವರ್ತನೆಯನ್ನು ಜನರು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಜವಾರಿ ಭಾಷೆಯ ಬಯಲುಸೀಮೆ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿದ ಜೂ.ರೆಬಲ್ ಸ್ಟಾರ್...!


ಬಿಗ್ ಬಾಸ್ OTT 2 ರ ಹಿಂದಿನ ದಿನದ ಲೈವ್ ಫೀಡ್‌ನಲ್ಲಿ, ಪೂಜಾ ಭಟ್ ಅವರ ತಂದೆ ಮಹೇಶ್ ಭಟ್ ಫ್ಯಾಮಿಲಿ ವೀಕ್‌ಗಾಗಿ ಬಿಗ್‌ ಬಾಸ್‌ ಮನೆಗೆ ಪ್ರವೇಶಿಸಿರುವುದು ಕಂಡುಬಂದಿದೆ. ಇದೇ ವೇಳೆ ಮಹೇಶ್ ಭಟ್ ಮನಿಷಾರನ್ನು ಭೇಟಿಯಾದಾಗ ಆಕೆಯ ನಡುವಳಿಕೆ ತುಂಬಾ ವಿಚಿತ್ರವಾಗಿತ್ತು. ಮನಿಷಾ ಮಹೇಶ್ ಭಟ್ ಅವರ ಪಾದಗಳನ್ನು ಮುಟ್ಟಿದಾಗ, ಚಿತ್ರ ನಿರ್ಮಾಪಕರು ಮೊದಲು ಅವಳನ್ನು ತಡೆದು ಎರಡೂ ಕೈಗಳನ್ನು ಹಿಡಿದು ನನ್ನ ಕಣ್ಣುಗಳನ್ನು ನೋಡಿ ಸುಮ್ಮನಿರಿ ಎಂದರು. ಸ್ವಲ್ಪ ಸಮಯದ ನಂತರ ಮಹೇಶ್ ಭಟ್ ಮನಿಷಾ ತಲೆಗೆ ಹೊಡೆದರು. ಈ ವೇಳೆ ಮನಿಷಾ ರಾಣಿ ತುಂಬಾ ನರ್ವಸ್ ಆಗಿ ಕಾಣಿಸಿಕೊಂಡಿದ್ದರು. 


 


"ಯಶ್ ನಿಜಕ್ಕೂ ಗ್ರೇಟ್..ನಾನು ಆತನ ಕಾಲಿಗೆ ಬೀಳ್ತೀನಿ" ತಮಿಳು ನಿರ್ಮಾಪಕ ಹೀಗಂದಿದ್ದೇಕೆ..?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.