Rocking Star Yash : ಕರ್ನಾಟಕದಲ್ಲಿ ಮಾತ್ರವಲ್ಲ ನೆರೆಯ ರಾಜ್ಯಗಳಲ್ಲಿಯೂ ರಾಕಿಬಾಯ್ ಕ್ರೇಜ್ ಹೆಚ್ಚುತ್ತಿದೆ. ಸಾಕಷ್ಟು ನಟರು ಇವರ ಆರ್ಭಟ ನೋಡಿ ದಂಗಾಗಿದ್ದರು. ಸದ್ಯಕ್ಕಂತೂ ಬಾಲಿವುಡ್ ಫಿಲ್ಮ್ ಮೇಕರ್ಸ್ ಕೂಡ ಯಶ್ ಜೊತೆ ಸಿನಿಮಾ ಮಾಡೋಕೆ ಅವಕಾಶಗಳಿಗಾಗಿ ಕಾಯುತ್ತಿದ್ದಾರೆ. ಕಾರಣ 'KGF' ಸಿನಿಮಾ ಅಷ್ಟು ದೊಡ್ಡಮಟ್ಟದಲ್ಲಿ ಹಿಟ್ ಆಗಿದ್ದು.
ಪರಭಾಷೆಯವರು ನಮ್ಮ ಸಿನಿಮಾವನ್ನು ತಿರುಗಿ ನೋಡಬೇಕು ಅಂತಹ ಅದ್ಭುತ ಸಿನಿಮಾಗಳನ್ನು ಮಾಡೋದು ಯಶ್ ಸಂಕಲ್ಪವಾಗಿತ್ತು. ಅದರಂತೆಯೇ ನಟ ದೊಡ್ಡಮಟ್ಟದಲ್ಲಿ 'KGF' ಸಿನಿಮಾ ರಿಲೀಸ್ ಮಾಡೋ ಪಟ್ಟು ಹಿಡಿದು, ಇದಕ್ಕಾಗಿ ಸಾಕಷ್ಟು ವಿಚಾರಗಳಲ್ಲಿ ರಾಜಿ ಮಾಡಿಕೊಂಡು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಸದ್ದು ಮಾಡುವಂತೆ ಮಾಡಿಯೇ ಬಿಟ್ಟರು. ಈ ಬಗ್ಗೆ ತಮಿಳಿನ ಹಿರಿಯ ನಿರ್ಮಾಪಕರೊಬ್ಬರ ಹೇಳಿಕೆ ಸದ್ಯ ವೈರಲ್ ಆಗುತ್ತಿದೆ.
ನಾಯಕ ನಟರ ಸಂಭಾವಣೆಯಿಂದಲೇ ತೆಲುಗು, ತಮಿಳು ಚಿತ್ರರಂಗ ಹಿನ್ನಡೆಯನುಭವಿಸುತ್ತಿದೆ. 100 ಕೋಟಿ ಬಜೆಟ್ ಸಿನಿಮಾ ಮಾಡಿದರೇ ಅದರಲ್ಲಿ 60 ರಿಂದ 70 ಕೋಟಿ ಸಿನಿಮಾ ನಾಯಕರಿಗೆ ಕೊಡಬೇಕು ಉಳಿದಿರುವ 30 ಕೋಟಿ ವೆಚ್ಚದಲ್ಲಿ ಹೇಗೆ ಸಿನಿಮಾ ಮಾಡುವುದು..? ಎಂದು ತಮಿಳಿನ ನಿರ್ಮಾಪಕ ಕೆ. ರಾಜನ್ ಈ ಹಿಂದೆ ಪ್ರಶ್ನಿಸಿದ್ದರು.
ಇದನ್ನೂ ಓದಿ-ಜೈಲರ್ ರಿಲೀಸ್ ನಂತರ ಹಿಮಾಲಯ ಯಾತ್ರೆ ಮಾಡಲಿರುವ ರಜನೀಕಾಂತ್..ಕಾರಣವೇನು ಗೊತ್ತಾ?
ಆದರೆ ತನ್ನ ಸಿನಿಮಾ ದೊಡ್ಡ ಮಟ್ಟದಲ್ಲಿ ತೆರೆಕಾಣಬೇಕು ಎಂದು ಸಂಕಲ್ಪ ಇಟ್ಟುಕೊಂಡು ಸಿನಿಮಾ ಮಾಡುವ ಯಶ್ ರೀತಿಯ ನಟರು ನಮ್ಮ ಸಿನಿರಂಗಕ್ಕೆ ಬರಬೇಕು. ಯಶ್ ಚಿಕ್ಕವರಾದರೂ ನಾನು ಅವರ ಕಾಲಿಗೆ ಬೀಳ್ತಿನಿ ಎಂದಿದ್ದರು.
ಇನ್ನು ತಮಿಳು ಸಿನಿರಂಗದಲ್ಲಿ ಬಜೆಟ್ಟಿನ ಶೇ. 60 ರಿಂದ 70ರಷ್ಟು ಭಾಗ ನಟರ ಸಂಭಾವನೆಯಾಗಿ ಹೋದರೆ ಉಳಿದ ಶೇ.30 ರಿಂದ 40ರಷ್ಟು ಹಣದಲ್ಲಿ ಸಿನಿಮಾ ನಿರ್ಮಾಣ ಮಾಡಿದರೆ ಆ ಸಿನಿಮಾ ಪರಿಪೂರ್ಣವಾಗುವುದಿಲ್ಲ. ಅಂತಹ ಸಿನಿಮಾ ಹೇಗೆ ಗೆಲ್ಲುತ್ತದೆ? ಹೇಳಿ. ಕನ್ನಡದಲ್ಲಿರುವ ಯಶ್ ಎನ್ನುವ ಒಬ್ಬ ನಟ KGF-2 ಸಿನಿಮಾ ಮಾಡುವಾಗ ನಿರ್ಮಾಪಕರು ಸಂಭಾವನೆ ಎಷ್ಟು ಎಂದು ಕೇಳಿದರಂತೆ. ದಕ್ಕೆ ಯಶ್ ಬೇಡ ಎಂದು ಹೇಳಿದ್ದರಂತೆ"
"ನನ್ನ ಹಣವನ್ನೇ ಹಾಕಿ ಸಿನಿಮಾ ನಿರ್ಮಾಣ ಮಾಡಿ.. ಸಿನಿಮಾ ಚೆನ್ನಾಗಿ ಮೂಡಿಬಂದರೇ ನನಗೆ ಪಾಲು ಕೊಡಿ ಎಂದಿದ್ದರಂತೆ" ವಯಸ್ಸಿನಲ್ಲಿ ಚಿಕ್ಕವರಾದರೂ ಆತನ ಕಾಲಿಗೆ ಬೀಳಬೇಕು ಅಂತ ಅನಿಸುತ್ತದೆ. ಏಕೆಂದರೆ ಅಲ್ಲಿ ಯಶ್ ನಿರ್ಮಾಪಕರು ಉಳಿಯಬೇಕು ಎನ್ನುವ ಉದ್ದೇಶವನ್ನು ಹೊಂದಿದ್ದಾರೆ" ಎಂದು ಯಶ್ ಅವರನ್ನು ಹೊಗಳಿರುವ ಹಳೇ ವಿಡಿಯೋ ಈಗ ವೈರಲ್ ಆಗುತ್ತಿದೆ.
ಇದನ್ನೂ ಓದಿ-ಅತಿಯಾದ ಅಹಂಕಾರ ಈ ಸ್ಟಾರ್ ನಟನ ಜೀವನವನ್ನೇ ಹಾಳು ಮಾಡಿತು!?
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.