Pushpa 2 : ಸ್ಟೈಲಿಶ್‌ ಐಕಾನ್‌ ನಟ ಅಲ್ಲು ಅರ್ಜುನ್‌ ನಟನೆಯ ಬ್ಲಾಕ್ಬಸ್ಟರ್‌ ಸಿನಿಮಾ ಪುಷ್ಪಾ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಹಿಟ್‌ ಗಳಿಸಿತ್ತು. ಪುಷ್ಪಾ 2 ಸಖತ್‌ ಸದ್ದು ಮಾಡುತ್ತಿದೆ. ಇದೀಗ ಅಲ್ಲು ಅರ್ಜುನ್‌ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಅದರಲ್ಲಿ ಅಲ್ಲು ಹೇರ್‌ಸ್ಟೈಲ್‌ ನೋಡಿದ ಅಭಿಮಾನಿಗಳು ಪುಷ್ಪಾ 2 ಲುಕ್‌ ಸೂಪರ್‌ ಎಂದು ಹೇಳುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಹೌದು.. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ನಟನೆಯ ʼಪುಷ್ಪಾʼ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿತ್ತು. ಈ ಚಿತ್ರದ ಸಾಮಿ... ಸಾಮಿ.. ಹಾಡು ಟ್ರೆಂಡಿಂಗ್‌ ಆಗಿತ್ತು. ಸೋಷಿಯಲ್‌ ಮೀಡಿಯಾದಲ್ಲಿ ಎಲ್ಲಿ ನೋಡಿದ್ರೂ ಸಾಮಿ ಸಾಮಿ ಹಾಡು ಕೇಳಿ ಬರುತ್ತಿತ್ತು. ಈ ಸಿನಿಮಾದಿಂದಲೇ ರಶ್ಮಿಕಾ ಮಂದಣ್ಣ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಮಿಂಚಿದರು. ಅಲ್ಲದೆ, 2022 ರ ಅತ್ಯುತ್ತಮ ಚಿತ್ರಗಳ ಸಾಲಿನಲ್ಲಿ ಪುಷ್ಟಾ ಗುರುತಿಸಿಕೊಂಡಿತ್ತು.


ಇದನ್ನೂ ಓದಿ: ಚಂದನವನದಲ್ಲಿ ಮಿಂಚಿ ಮರೆಯಾದ ಸಂಗೀತ ಮಾಂತ್ರಿಕ ಟಿ.ಜಿ.ಲಿಂಗಪ್ಪ


ಇದೀಗ ಪುಷ್ಪಾ 2 ಬಿಡುಗಡೆಗೂ ಮುನ್ನವೇ ಭಾರೀ ಸೌಂಡ್‌ ಮಾಡುತ್ತಿದೆ. ಕನ್ನಡ, ತೆಲುಗು ಪ್ರೇಕ್ಷಕರು ಸೇರಿದಂತೆ ಇಂಡಿಯಾ ಲೆವೆಲ್‌ನಲ್ಲಿ ಈ ಚಿತ್ರವನ್ನು ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ. ಪುಷ್ಪಾ ಚಿತ್ರದ ಎರಡನೇ ಭಾಗವಾದ ʼಪುಷ್ಪ: ದಿ ರೂಲ್ʼ 2023 ವರ್ಷದ ನಿರೀಕ್ಷಿತ ಚಲನಚಿತ್ರಗಳಲ್ಲಿ ಒಂದಾಗಿದೆ. ಚಿತ್ರದ ಹೊಸ ಶೆಡ್ಯೂಲ್ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಇತ್ತೀಚಿಗೆ ವಿಶಾಖಪಟ್ಟಣಕ್ಕೆ ಭೇಟಿ ನೀಡಿದ್ದ ಅಲ್ಲು ಅರ್ಜುನ್‌ ಅವರಿಗೆ ಅವರ ಪ್ಯಾನ್ಸ್‌ ಅದ್ಧೂರಿ ಸ್ವಾಗತ ಕೋರಿದರು. 


ವಿಶಾಖಪಟ್ಟಣದಲ್ಲಿ ಅಲ್ಲು ರೋಡ್‌ ಶೋ ನಡೆಸಿದರು. ಅವರ ಅಭಿಮಾನಿಗಳು ಹೂ ಮಳೆ ಸುರಿಸಿ ನೆಚ್ಚಿನ ನಟನನ್ನು ಸ್ವಾಗತಿಸಿದರು. ಈ ಕುರಿತ ವಿಡಿಯೋಗಳು ಮತ್ತು ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಅಲ್ಲದೆ, ವಿಶೇಷವಾಗಿ ಅಲ್ಲು ಹೇರ್‌ಸ್ಟೈಲ್‌ ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ. ಪುಷ್ಪಾ 2 ಚಿತ್ರಕ್ಕಾಗಿ ಅರ್ಜುನ್‌ ಈ ಸ್ಟೈಲ್‌ನಲ್ಲಿದ್ದಾರೆ ಎಂದು ಹೇಳಲಾಗಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.