Mission Majnu review : ʼಮಿಷನ್ ಮಜ್ನುʼ ನೋಡಿ ಸಿದ್ಧಾರ್ಥ್‌ ʼಮಾಸ್ಟರ್‌ ಪೀಸ್‌ʼ ಎಂದ ಪ್ಯಾನ್ಸ್‌..!

ಬಾಲಿವುಡ್‌ ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರ ʼಮಿಷನ್ ಮಜ್ನುʼ ಸಿನಿಮಾ ಓಟಿಟಿಯಲ್ಲಿ ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ಸಿದ್ಧಾರ್ಥ್‌ ಏಜೆಂಟ್ ಆಗಿ ಕಾಣಿಸಿಕೊಂಡಿದ್ದು, ಚಿತ್ರ ನೋಡಿದ ಪ್ರೇಕ್ಷಕರು ʼಮಾಸ್ಟರ್‌ ಪೀಸ್‌ʼ ಸಿನಿಮಾ ಅಂತ ಕರೆದಿದ್ದಾರೆ. ಈ ಸಿನಿಮಾ ನೆಟ್‍ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗಿದ್ದು, ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. 

Written by - Krishna N K | Last Updated : Jan 20, 2023, 04:39 PM IST
  • ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರ ʼಮಿಷನ್ ಮಜ್ನುʼ ಸಿನಿಮಾ ಓಟಿಟಿಯಲ್ಲಿ ಬಿಡುಗಡೆ.
  • ಚಿತ್ರ ನೋಡಿದ ಪ್ರೇಕ್ಷಕರು ʼಮಾಸ್ಟರ್‌ ಪೀಸ್‌ʼ ಸಿನಿಮಾ ಅಂತ ಕರೆದಿದ್ದಾರೆ.
  • ಈ ಚಿತ್ರ ವೀಕ್ಷಕರಿಂದ 4.5 ಕ್ಕೂ ಹೆಚ್ಚು ಸ್ಟಾರ್‌ಗಳನ್ನು ಪಡೆದುಕೊಂಡಿದೆ.
Mission Majnu review : ʼಮಿಷನ್ ಮಜ್ನುʼ ನೋಡಿ ಸಿದ್ಧಾರ್ಥ್‌ ʼಮಾಸ್ಟರ್‌ ಪೀಸ್‌ʼ ಎಂದ ಪ್ಯಾನ್ಸ್‌..! title=

Mission Majnu review : ಬಾಲಿವುಡ್‌ ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರ ʼಮಿಷನ್ ಮಜ್ನುʼ ಸಿನಿಮಾ ಓಟಿಟಿಯಲ್ಲಿ ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ಸಿದ್ಧಾರ್ಥ್‌ ಏಜೆಂಟ್ ಆಗಿ ಕಾಣಿಸಿಕೊಂಡಿದ್ದು, ಚಿತ್ರ ನೋಡಿದ ಪ್ರೇಕ್ಷಕರು ʼಮಾಸ್ಟರ್‌ ಪೀಸ್‌ʼ ಸಿನಿಮಾ ಅಂತ ಕರೆದಿದ್ದಾರೆ. ಈ ಸಿನಿಮಾ ನೆಟ್‍ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗಿದ್ದು, ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. 

ʼಮಿಷನ್‌ ಮಜ್ನುʼ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿ ಚಿತ್ರದ ಮೇಲೆ ಕ್ಯೂರಿಯಾಸಿಟಿ ಹೆಚ್ಚಿಸಿತ್ತು. ಇದೀಗ ಸಿನಿಮಾ ಬಿಡುಗಡೆಯಾಗಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಸಿದ್ಧಾರ್ಥ್‌ ಅವರನ್ನು ಅತ್ಯುತ್ತಮ ನಟ ಎಂದು ಕರೆಯುತ್ತಿದ್ದಾರೆ. ಈ ಚಿತ್ರವು ನೆಟಿಜನ್‌ಗಳನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಸಿದ್ದು ಫ್ಯಾನ್ಸ್‌ ಮಿಷನ್‌ ಮಜ್ನು ಮಾಸ್ಟರ್‌ಪೀಸ್ ಎಂದು ಕರೆಯುತ್ತಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಆಕ್ಟಿಂಗ್‌ ಕೂಡ ಸೂಪರ್ ಆಗಿದೆ. ಈ ಚಿತ್ರ ವೀಕ್ಷಕರಿಂದ 4.5 ಕ್ಕೂ ಹೆಚ್ಚು ಸ್ಟಾರ್‌ಗಳನ್ನು ಪಡೆದುಕೊಂಡಿದೆ. ಕುಟುಂಬದೊಂದಿಗೆ ಮನೆಯಲ್ಲಿ ಕುಳಿತು ನೋಡಬಹುದಾದ ಉತ್ತಮ ಸಿನಿಮಾ ಎಂದು ವೀಕ್ಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Vijay Antony : ಕೋಮಾಗೆ ಜಾರಿದ ತಮಿಳು ಸ್ಟಾರ್‌ ನಟ.. ಆತಂಕದಲ್ಲಿ ವಿಜಯ್‌ ಫ್ಯಾನ್ಸ್‌..!

1974 ರಲ್ಲಿ, ಪೋಖರಾನ್‌ನಲ್ಲಿ ಭಾರತದ ಮೊದಲ ಪರಮಾಣು ಸ್ಫೋಟವು, ದಿ ಸ್ಮೈಲಿಂಗ್ ಬುದ್ಧವನ್ನು ಪ್ರಯೋಗಿಸಲಾಯಿತು. ಇದು ಪ್ರಪಂಚದಾದ್ಯಂತ ಅಲೆಗಳನ್ನು ಸೃಷ್ಟಿಸಿತು. ಪಾಕಿಸ್ತಾನವನ್ನು ಕೆಣಕುವಂತೆ ಮಾಡಿತು. ಇದಕ್ಕೆ ಪಾಕ್‌ ಪ್ರತೀಕಾರವಾಗಿ ತನ್ನದೇ ಆದ ರಹಸ್ಯ N-ಕಾರ್ಯಾಚರಣೆ ಪ್ರಾರಂಭಿಸಿತು. ಈ ಸುದ್ದಿಯನ್ನು ಭಾರತೀಯ ಏಜೆಂಟರು ಬಹಿರಂಗ ಪಡಿಸಿದ್ದರು. ಅದನ್ನು ಹೇಗೆ ನಿಲ್ಲಿಸಲಾಯಿತು ಎಂಬ ನಿಜವಾದ ಘಟನೆಗಳಿಂದ ಪ್ರೇರಿತವಾದ ಕಥೆಯೇ ಮಿಷನ್ ಮಜ್ನು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News