ಬೆಂಗಳೂರು : ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ಸುಕುಮಾರ್ ಜೋಡಿಯ ಪುಷ್ಪ ಸಿನಿಮಾ ಬಾಕ್ಸಾಫೀಸ್ ನಲ್ಲಿ ಧೂಳ್ ಎಬ್ಬಿಸಿತ್ತು. ಕಳೆದ ವರ್ಷದ ತೆರೆಗೆ ಬಂದ ಈ ಚಿತ್ರ ವಿಶ್ವಾದ್ಯಂತ 400 ಕೋಟಿಗೂ ಅಧಿಕ ಮೊತ್ತದ ಕಲೆಕ್ಷನ್ ಮಾಡಿತ್ತು. ರಕ್ತಚಂದನ ಕಳ್ಳ ಸಾಗಾಣಿಕೆ ಕಥಾಹಂದರದ ಪುಷ್ಪ ಸಿನಿಮಾದಲ್ಲಿ ಅಲ್ಲು ಅರ್ಜುನ್ ಅಬ್ಬರಿಸಿದ್ದರು. ಅಲ್ಲು ಅರ್ಜುನ್ ನಟನೆಗೆ ಪ್ರೇಕ್ಷಕರೂ ತಲೆದೂಗಿದ್ದರು. ಇದೀಗ ಪುಷ್ಪ ಪಾರ್ಟ್-2 ಮೇಲೆ ಪ್ರೇಕ್ಷಕರ ನಿರೀಕ್ಷೆ ಹೆಚ್ಚಿದೆ. ಪುಷ್ಪ ಸೀಕ್ವೆಲ್ ಹೇಗಿರುತ್ತದೆ ಎಂಬ ಕೌತಕದ ನಡುವೆ ಪುಷ್ಪ-2 ಅಂಗಳದಿಂದ ಹೊಸ ಅಪ್ ಡೇಟ್ ರಿಲೀಸ್ ಆಗಿದೆ.


COMMERCIAL BREAK
SCROLL TO CONTINUE READING

ಪುಷ್ಪ-2 ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದ್ದು, ಅಲ್ಲು ಅರ್ಜುನ್ ಹುಟ್ಟುಹಬ್ಬಕ್ಕೆ ಸರ್ ಪ್ರೈಸ್ ಗಿಫ್ಟ್ ಕೊಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ. ಅದಕ್ಕೂ ಮುನ್ನವೇ ಸುಕುಮಾರ್ ತಂಡ ಸಣ್ಣದೊಂದು ವಿಡಿಯೋ ತುಣುಕು ರಿವೀಲ್ ಮಾಡಿ ಚಿತ್ರದ ಮೇಲಿನ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದ್ದಾರೆ. ಬುಲೆಟ್ ನಿಂದ ಗಾಯಗೊಂಡ ಪುಷ್ಪ ತಿರುಪತಿ ಜೈಲಿನಿಂದ ಎಸ್ಕೇಪ್ ಆಗಿರುತ್ತಾನೆ. ಎಲ್ಲೆಡೆ ಪುಷ್ಪನಿಗಾಗಿ ಹುಡುಗಾಟ ನಡೆಸಲಾಗುತ್ತದೆ. ಏಪ್ರಿಲ್ 7ರಂದು ಅಲ್ಲು ಅರ್ಜುನ್ ಬರ್ತ್ ಡೇಗೆ ಫುಲ್ ಟೀಸರ್ ರಿಲೀಸ್ ಆಗಲಿದ್ದು, ಐಕಾನ್ ಸ್ಟಾರ್ ಫ್ಯಾನ್ಸ್ ಪಿಕ್ಚರ್ ಅಭಿ ಬಾಕಿ ಹೈ ಎನ್ನುತ್ತಿದ್ದಾರೆ.


ಇದನ್ನೂ ಓದಿ Kiccha Sudeep: ಖಾಸಗಿ ವಿಡಿಯೋ ಲೀಕ್ ಮಾಡುವುದಾಗಿ ನಟ ಸುದೀಪ್‍ಗೆ ಬೆದರಿಕೆ ಪತ್ರ!


ಪುಷ್ಪ-2 ಸಿನಿಮಾದಲ್ಲಿ ಅಲ್ಲು ಅರ್ಜುನ್ ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದು, ಫಹಾದ್ ಫಾಸಿಲ್, ಅನುಸೂಯ, ಸುನಿಲ್ ಮತ್ತು ಇತರರು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಮೈತ್ರಿ ಮೂವೀ ಮೇಕರ್ಸ್ ಪ್ರೊಡಕ್ಷನ್ ನಡಿ ಮೂಡಿಬರುತ್ತಿರುಅ ಪುಷ್ಪ-2 ಸಿನಿಮಾಗೆ ರಾಕ್ ಸ್ಟಾರ್ ದೇವಿಶ್ರೀ ಪ್ರಸಾದ್ ಸಂಗೀತ ನಿರ್ದೇಶನವಿದೆ.


 


ನೀಲಿ ಬಿಕಿನಿಯಲ್ಲಿ 'ಸೀತಾ ರಾಮಂ' ಬೆಡಗಿ ಸೀತಾ ಮಹಾಲಕ್ಷ್ಮಿಅಲಿಯಾಸ್‌ ಮೃಣಾಲ್​ ಠಾಕೂರ್..


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.