Amitabh Bachchan: ಇತ್ತೀಚಿನ ದಿನಗಳಲ್ಲಿ ಅಮಿತಾಬ್‌ ಬಚ್ಚನ್‌ ಅವರು ʻಕೌನ್‌ ಬನೇಗಾ ಕರೋಡ್ಪತಿ 16ʼ ನಲ್ಲಿ ಬ್ಯುಸಿಯಾಗಿದ್ದಾರೆ. ಈ ಕಾರ್ಯಕ್ರಮದ ಮೂಲಕ ಅವರು ಇನ್‌ಟ್ರೆಸ್ಟಿಂಗ್‌ ಮಾಹಿತಿಯನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಇದೀಗ ಇತ್ತೀಚಿನ ಸಂಚಿಕೆಯಲ್ಲಿಯೂ ಕೂಡ ಅಮಿತಾಬ್‌ ಬಚ್ಚನ್‌ ಅವರು ಇನ್‌ಟ್ರೆಸ್ಟಿಂಗ್‌ ಮಾಹಿತಿಯೊಂದನ್ನು ತಮ್ಮ ಅಭಿಮಾನಿಗಳ ಮುಂದೆ ಹಂಚಿಕೊಂಡಿದ್ದು, ಈ ವಿಚಾರ ಕೇಳಿ ಅಭಿಮಾನಿಗಳು ಶಾಕ್‌ ಆಗಿದ್ದಾರೆ. 


COMMERCIAL BREAK
SCROLL TO CONTINUE READING

ಸಿನಿಮಾ ಕುರಿತ ವಿಚಾರಗಳನ್ನು ಅಷ್ಟೆ ಅಲ್ಲದೆ ಅಮಿತಾಬ್‌ ಬಚ್ಚನ್‌ ಅವರು ತಮ್ಮ ವೈಯಕ್ತಿಕ ಜೀವನದ ಕುರಿತಾದ ಮಾಹಿತಿಗಳನ್ನು ಹಂಚಿಕೊಳ್ಳುವುದರೊಂದಿಗೆ ಅಭಿಮಾನಿಗಳನ್ನು ಅಚ್ಚರಿಗೊಳಿಸುತ್ತಾ ಇರುತ್ತಾರೆ. ಅದರಲ್ಲೂ ತಮ್ಮ ಪತ್ನಿ ಜಯಾ ಬಚ್ಚನ್‌ ಅವರ ಕುರಿತು ಸದಾ ಮಾತನಾಡುವ ಅಮಿತಾಬ್‌ ಅವರು, ತಮ್ಮ ಮುದ್ದಾದ ಮಡದಿಯ ಕುರಿತಾದ ಮತ್ತೊಂದು ಇನ್‌ಟ್ರೆಸ್ಟಿಂಗ್‌ ಸುದ್ದಿಯನ್ನು ಕೂಡ ಹಂಚಿಕೊಂಡಿದ್ದಾರೆ.


ಸದ್ಯ, ಇತ್ತೀಚೆಗೆ ಸಂಚಿಕೆಯೊಂದರಲ್ಲಿ ಮಾತನಾಡಿದ ಅಮಿತಾಬ್‌ ಬಚ್ಚನ್‌ ಅವರು "ನನಗೆ ಎಟಿಎಂನಲ್ಲಿ ಹಣ ತೆಗೆದುಕೊಳ್ಳುವುದು ಹೇಗೆ ಎಂಬುದು ಇಂದಿಗೂ ಕೂಡ ಗೊತ್ತಿಲ್ಲ. ಆದ್ದರಿಂದ ನನಗೆ ಹಣದ ಅವಶ್ಯಕತೆ ಇರುವಾಗಲೆಲ್ಲಾ ನಾನು ನನ್ನ ಪತ್ನಿ ಜಯಾ ಬಚ್ಚನ್‌ ಅವರ ಬಳಿಯೇ ಹಣವನ್ನು ಕೇಳುತ್ತೇನೆ" ಎಂದಿದ್ದಾರೆ. 


ಇತ್ತೀಚಿನ ಎಪಿಸೋಡ್‌ನಲ್ಲಿ ಪ್ರಿಯಾಂಕ ಎಂಬ ಸ್ಪರ್ಧಿ ʻಕೌನ್‌ ಬನೇಗ ಕರೋಡ್‌ಪತಿʼ ಕಾರ್ಯಕ್ರಮಕ್ಕೆ ಭಾಗವಹಿಸಲು ಬಂದಿದ್ದರು. ಈ ಸಂದರ್ಭದಲ್ಲಿ ಪ್ರಿಯಾಂಕ ಎಂಬ ಸ್ಪರ್ಧಿ " ಸರ್‌, ನೀವು ಎಂದಾದರೂ ಎಟಿಎಂನಿಂದ ಹಣ ಡ್ರಾ ಮಾಡಿ ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡಿದ್ದೀರಾ" ಎಂದು ಕೇಳಿದಾಗ, ಅಮಿತಾಬ್‌ ಬಚ್ಚನ್‌ ಅವರು "ನಾನು ನನ್ನ ಬಳಿ ಸಾಮನ್ಯವಾಗಿ ಹಣವನ್ನು ಇಟ್ಟುಕೊಳ್ಳುವುದಿಲ್ಲ, ಎಟಿಎಂಗೂ ಕೂಡ ಹೋಗುವುದಿಲ್ಲ. ಏಕೆಂದರೆ ನನಗೆ ಎಟಿಎಂ ಹೇಗೆ ಬಳಸಬೇಕು ಎಂಬ ಅರಿವು ಇಲ್ಲ. ಇದೇ ಕಾರಣಕ್ಕಾಗಿ ನಾನು ಜಯಾ ಜಿ ಅವರ ಬಳಿ ಹಣವನ್ನು ಕೇಳಿ ಪಡೆಯುತ್ತೇನೆ ಎಂದಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.