Amitabh Bachchan: ಪಾನ್ ಮಸಾಲ ಬ್ರಾಂಡ್ಗೆ ಲೀಗಲ್ ನೋಟಿಸ್ ನೀಡಿದ ಅಮಿತಾಬ್ ಬಚ್ಚನ್..!
ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರು ಒಪ್ಪಂದದ ಮುಕ್ತಾಯದ ಹೊರತಾಗಿಯೂ ಅವರನ್ನು ಒಳಗೊಂಡ ಟಿವಿ ಜಾಹೀರಾತುಗಳನ್ನು ಪ್ರಸಾರ ಮಾಡುವುದನ್ನು ಮುಂದುವರೆಸಿದ ಪಾನ್ ಮಸಾಲಾ ಬ್ರ್ಯಾಂಡ್‌ಗೆ ಕಾನೂನು ನೋಟಿಸ್ ಕಳುಹಿಸಿದ್ದಾರೆ.
ನವದೆಹಲಿ: ಬಾಲಿವುಡ್ ಸೂಪರ್ ಸ್ಟಾರ್, ಬಿಗ್ ಬಿ ಅಮಿತಾಬ್ ಬಚ್ಚನ್(Amitabh Bachchan) ಅವರು ಪಾನ್ ಮಸಾಲ ಕಂಪನಿಯೊಂದಕ್ಕೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಒಪ್ಪಂದ ಮುಕ್ತಾಯದ ಹೊರತಾಗಿಯೂ ‘ಕಮಲಾ ಪಸಂದ್’ ಕಂಪನಿಯು ಅಮಿತಾಬ್ ಅವರನ್ನೊಳಗೊಂಡ ಜಾಹೀರಾತುಗಳನ್ನು ಟಿವಿಯಲ್ಲಿ ಪ್ರಸಾರ ಮಾಡುತ್ತಿತ್ತು. ಇದನ್ನು ಪ್ರಶ್ನಿಸಿ ಬಿಗ್ ಬಿ ಪಾನ್ ಮಸಾಲ ಬ್ರ್ಯಾಂಡ್‌ಗೆ ನೋಟಿಸ್ ಕಳುಹಿಸಿದ್ದಾರೆ.
ಅಮಿತಾಬ್ ಬಚ್ಚನ್ ಅವರು ಈ ಹಿಂದೆ ತಂಬಾಕು ಕಂಪನಿ ‘ಕಮಲಾ ಪಸಂದ್’(Pan Masala Brand) ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಇದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಯುವಕರು ತಂಬಾಕಿಗೆ ವ್ಯಸನಿಯಾಗುವುದನ್ನು ತಡೆಯಲು ಪಾನ್ ಮಸಾಲ ಬ್ರಾಂಡ್ ಗೆ ಪ್ರಚಾರ ನೀಡುವುದನ್ನು ನಿಲ್ಲಿಸುವಂತೆ ರಾಷ್ಟ್ರೀಯ ತಂಬಾಕು ವಿರೋಧಿ ಸಂಘಟನೆಯೊಂದು ವಿನಂತಿಸಿದ ಬಳಿಕ ಅವರು ಅಕ್ಟೋಬರ್‌ನಲ್ಲಿ ಈ ಜಾಹೀರಾತಿನಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದರು. ಪಾನ್ ಮಸಾಲ ಬ್ರ್ಯಾಂಡ್ ನ ಉತ್ಪನ್ನದ ಪ್ರಚಾರ ಮಾಡಿದಕ್ಕಾಗಿ ಬಚ್ಚನ್ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ಗೆ ಒಳಗಾಗಿದ್ದರು.
ಆದರೆ ಒಪ್ಪಂದ ಮುಗಿದರೂ ಕಮಲಾ ಪಸಂದ್(Kamla Pasand) ಕಂಪನಿಯು ಅಮಿತಾಬ್ ಅವರ ಜಾಹೀರಾತುಗಳನ್ನು ಟಿವಿಯಲ್ಲಿ ಪ್ರಸಾರ ಮಾಡುವುದನ್ನು ಮುಂದುವರೆಸಿತ್ತು. ಈ ಕಾರಣಕ್ಕೆ ಬಿಗ್ ಬಿ ಪಾನ್ ಮಸಾಲ ಬ್ರ್ಯಾಂಡ್‌ಗೆ ಲೀಗಲ್ ನೋಟಿಸ್(Legal Notice) ಕಳುಹಿಸಿದ್ದಾರೆ. ‘ಕಮಲಾ ಪಸಂದ್ ಕಂಪನಿಗೆ ಅಮಿತಾಬ್ ಬಚ್ಚನ್ ನೋಟಿಸ್ ಕಳುಹಿಸಿದ್ದಾರೆ. ಬಚ್ಚನ್ ಅವರು ಇರುವ ಟಿವಿ ಜಾಹೀರಾತುಗಳನ್ನು ಪ್ರಸಾರ ಮಾಡುವುದನ್ನು ತಕ್ಷಣವೇ ನಿಲ್ಲಿಸುವಂತೆ ಸೂಚಿಸಲಾಗಿದೆ. ಒಪ್ಪಂದ ಮುಕ್ತಾಯಗೊಂಡಿದ್ದರೂ ಪಾನ್ ಮಸಾಲ ಕಂಪನಿ ಅಮಿತಾಬ್ ಇರುವ ಜಾಹೀರಾತನ್ನು ಪ್ರಸಾರ ಮಾಡಿದೆ’ ಎಂದು ಬಚ್ಚನ್ ಕಾನೂನು ತಂಡದ ಮೂಲಗಳು ತಿಳಿಸಿವೆ.
‘ಪಾನ್ ಮಸಾಲ ಸೇವನೆಯಿಂದ ಬಾಯಿಯ ಕ್ಯಾನ್ಸರ್ಗೆ ಕಾರಣವಾಗಬಹುದು ಎಂದು ಇತ್ತೀಚಿನ ಹಲವು ಸಂಶೋಧನೆಗಳು ತಿಳಿಸಿವೆ. ಇದನ್ನು ಇಂಟರ್ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್ (IARC) ಮತ್ತು ವಿಶ್ವ ಆರೋಗ್ಯ ಸಂಸ್ಥೆ (WHO) ವರದಿಗಳು ಸಹ ಒಪ್ಪಿವೆ. ಆದ್ದರಿಂದ ಅಮಿತಾಬ್ ತಮ್ಮ ನಿರ್ಧಾರದ ಕುರಿತು ಆಲೋಚಿಸಬೇಕು. ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್, ರಣವೀರ್ ಸಿಂಗ್, ಹೃತಿಕ್ ರೋಷನ್ ಮೊದಲಾದವರು ಪಾನ್ ಮಸಾಲ ಜಾಹಿರಾತಿನಲ್ಲಿ ಕಾಣಿಸಿಕೊಂಡಿರುವುದು ವಿದ್ಯಾರ್ಥಿಗಳಲ್ಲಿ ತಂಬಾಕು ಬಳಕೆ ಹೆಚ್ಚಲು ಕಾರಣವಾಗಿದೆ. ಇದು ಆತಂಕಕಾರಿ ವಿಷಯ. ನಟರಾಗಿ ಸಮಾಜಕ್ಕೆ ಉತ್ತಮ ಸಂದೇಶ ನೀಡಬೇಕೇ ಹೊರತು ಈ ರೀತಿ ತಪ್ಪು ಸಂದೇಶವನ್ನಲ್ಲ. ಈ ಕುರಿತು ನನಗೆ ಬೇಸರವಿದೆ’ ಎಂದು ರಾಷ್ಟ್ರೀಯ ತಂಬಾಕು ವಿರೋಧಿ ಸಂಘಟನೆ (NOTE) ಅಧ್ಯಕ್ಷ ಡಾ.ಶೇಖರ್ ಸಲ್ಕರ್ ಅಮಿತಾಬ್ ರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದರು. ಇದರ ಬೆನ್ನಲ್ಲಿಯೇ ತಮ್ಮ 79ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಬಚ್ಚನ್ ಅವರು ಜಾಹೀರಾತು ಪ್ರಚಾರದಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದರು.
ಇದನ್ನೂ ಓದಿ: Viral Video: ಸಪ್ನಾ ಚೌಧರಿಗೆ ಪೈಪೋಟಿ ನೀಡುವಂತಿದೆ ಪುಟ್ಟ ಪೋರಿಯ ಡ್ಯಾನ್ಸ್..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.