/kannada/photo-gallery/shikanji-buttermilk-is-helpful-in-dissolving-stubborn-obesity-around-the-waist-249358 ಒಂದು ಗ್ಲಾಸ್‌ ಮಜ್ಜಿಗೆಗೆ ಈ ಪದಾರ್ಥ ಬೆರೆಸಿ ಕುಡಿಯಿರಿ ಸಾಕು: ಸೊಂಟದ ಸುತ್ತ ತುಂಬಿರುವ ಹಠಮಾರಿ ಬೊಜ್ಜು ಮಂಜು ಕರಗಿದಂತೆ ಕರಗುತ್ತೆ! ಒಂದು ಗ್ಲಾಸ್‌ ಮಜ್ಜಿಗೆಗೆ ಈ ಪದಾರ್ಥ ಬೆರೆಸಿ ಕುಡಿಯಿರಿ ಸಾಕು: ಸೊಂಟದ ಸುತ್ತ ತುಂಬಿರುವ ಹಠಮಾರಿ ಬೊಜ್ಜು ಮಂಜು ಕರಗಿದಂತೆ ಕರಗುತ್ತೆ! 249358

ಟಿಆರ್‌ಪಿ ಹೊಡೆತಕ್ಕೆ ಬಿಗ್ ಬಾಸ್ ತೊರೆದ್ರಾ ಸಲ್ಮಾನ್ ಖಾನ್?: ಈ ವಾರದ ಶೋಗೆ ಗುಡ್ ಬೈ!

ವರದಿಗಳ ಪ್ರಕಾರ ಈ ಬಾರಿ ‘ವೀಕೆಂಡ್ ಕಾ ವಾರ್’ ಅನ್ನು ಮಹೇಶ್ ಮಂಜ್ರೇಕರ್ ಹೋಸ್ಟ್ ಮಾಡಲಿದ್ದಾರಂತೆ.

Written by - Puttaraj K Alur | Last Updated : Nov 20, 2021, 09:54 AM IST
  • ಸಮಯ ಕಳೆದಂತೆ ಹದಗೆಡುತ್ತಿರುವ ‘ಬಿಗ್ ಬಾಸ್ 15’ರ ಟಿಆರ್‌ಪಿ ರೇಟಿಂಗ್
  • ಶೋನ ರೇಟಿಂಗ್‌ನಲ್ಲಿ ಯಾವುದೇ ಬದಲಾವಣೆ ತರದ ಸಲ್ಮಾನ್ ಖಾನ್ ಸ್ಟಾರ್‌ಡಮ್
  • ಈ ಬಾರಿಯ ‘ವೀಕೆಂಡ್ ಕಾ ವಾರ್’ ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್ ಕಾಣಿಸಿಕೊಳ್ಳುವುದಿಲ್ಲ
ಟಿಆರ್‌ಪಿ ಹೊಡೆತಕ್ಕೆ ಬಿಗ್ ಬಾಸ್ ತೊರೆದ್ರಾ ಸಲ್ಮಾನ್ ಖಾನ್?: ಈ ವಾರದ ಶೋಗೆ ಗುಡ್ ಬೈ! title=
ಬಿಗ್ ಬಾಸ್ 15ರ ಟಿಆರ್‌ಪಿಗೆ ಹೊಡೆತ

ನವದೆಹಲಿ: ‘ಬಿಗ್ ಬಾಸ್ 15’ರ ರೇಟಿಂಗ್(Bigg Boss 15 TRP) ಸಮಯ ಕಳೆದಂತೆ ಹದಗೆಡುತ್ತಿದೆ. ಸಲ್ಮಾನ್ ಖಾನ್(Salman Khan) ಅವರ ಸ್ಟಾರ್‌ಡಮ್ ಈ ಶೋನ ರೇಟಿಂಗ್‌ನಲ್ಲಿ ಯಾವುದೇ ಬದಲಾವಣೆಯನ್ನು ತರಲು ಸಾಧ್ಯವಾಗುತ್ತಿಲ್ಲ. ಈಗ ಈ ವಾರ ಸಲ್ಮಾನ್ ಖಾನ್ ಬಿಗ್ ಬಾಸ್ ನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂಬ ಸುದ್ದಿ ಬರುತ್ತಿದೆ. ಈ ಸುದ್ದಿಯ ನಂತರ ಈಗ ಸಲ್ಮಾನ್ ಕೂಡ ಈ ಕಾರ್ಯಕ್ರಮಕ್ಕೆ ಗುಡ್ ಬೈ ಹೇಳುತ್ತಾರಾ ಅನ್ನೋ ಗಾಳಿಸುದ್ದಿಗಳು ಹರಡಿವೆ.

ಈ ಬಾರಿ ಸಲ್ಮಾನ್ ಕಾಣಿಸುವುದಿಲ್ಲ

ಬಿಗ್ ಬಾಸ್‌ನ ಪ್ರತಿ ಸೀಸನ್‌ನಲ್ಲಿ ಸ್ಪರ್ಧಿಗಳು ಬದಲಾಗುತ್ತಲೇ ಇರುತ್ತಾರೆ, ಆದರೆ ಅಭಿಮಾನಿಗಳನ್ನು ರಂಜಿಸಲು ಪ್ರತಿ ಬಾರಿಯೂ ಒಬ್ಬ ಸಲ್ಮಾನ್(Salman Khan) ಮಾತ್ರ ಇರುತ್ತಾರೆ. ಈ ಕಾರ್ಯಕ್ರಮವನ್ನು ಮತ್ತಷ್ಟು ಆಸಕ್ತಿದಾಯಕವಾಗಿಸಲು ತಯಾರಕರು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಆದರೆ TRPನಲ್ಲಿ ಯಾವುದೇ ಸುಧಾರಣೆ ಕಂಡುಬಂದಿಲ್ಲ. ಈ ಬಾರಿಯ ಬಿಗ್ ಬಾಸ್ ನ ‘ವೀಕೆಂಡ್ ಕಾ ವಾರ್’ ಕಾರ್ಯಕ್ರಮ(Bigg Boss  Weekend Ka Vaar)ದಲ್ಲಿ ಸಲ್ಮಾನ್ ಖಾನ್ ಕಾಣಿಸಿಕೊಳ್ಳುವುದಿಲ್ಲ ಎಂಬ ಸುದ್ದಿ ಬಂದಿದೆ.  

ಇದನ್ನೂ ಓದಿ: Kangana Ranaut on Farm Laws: ಭಾರತವನ್ನು ಜಿಹಾದಿ ರಾಷ್ಟ್ರ ಎಂದು ಕರೆದ ಕಂಗನಾ ರಣಾವತ್, ಬೀದಿಗಳಲ್ಲಿ ಕಾನೂನುಗಳು ರೂಪಗೊಂಡರೆ...!

ಸಲ್ಮಾನ್‌ಗೆ ಅನಾರೋಗ್ಯ

ಈ ವಾರಾಂತ್ಯದಲ್ಲಿ ಸಲ್ಮಾನ್ ಖಾನ್ ಕಾಣಿಸಿಕೊಳ್ಳದಿರಲು ಕಾರಣ ಬಿಗ್ ಬಾಸ್ ನ ಟಿಆರ್‌ಪಿ(Bigg Boss Bad TRP)ಕುಸಿದಿರುವುದು ಅಲ್ಲ, ಅವರ ಅನಾರೋಗ್ಯ. ಸಲ್ಮಾನ್ ಖಾನ್ ಬಹಳ ದಿನಗಳಿಂದ ಬ್ಯುಸಿಯಾಗಿದ್ದಾರೆ. ಅವರ ವೇಳಾಪಟ್ಟಿ ತುಂಬಾ ಬಿಗಿಯಾಗಿತ್ತು, ಬಹುಶಃ ಈ ಕಾರಣದಿಂದಾಗಿ ಅವರ ಆರೋಗ್ಯವು ಹದಗೆಟ್ಟಿರಬಹುದು. ವರದಿಗಳ ಪ್ರಕಾರ ಈ ಬಾರಿ ‘ವೀಕೆಂಡ್ ಕಾ ವಾರ್’ ಅನ್ನು ಮಹೇಶ್ ಮಂಜ್ರೇಕರ್ ಹೋಸ್ಟ್ ಮಾಡಲಿದ್ದಾರಂತೆ.

ವೈಲ್ಡ್ ಕಾರ್ಡ್ ಸ್ಪರ್ಧಿಗಳ ಎಂಟ್ರಿ  

ಈ ಸೀಸನ್‌ನಲ್ಲಿಯೂ ಕಾರ್ಯಕ್ರಮದ ಟಿಆರ್‌ಪಿ ಅಷ್ಟೊಂದು ಚೆನ್ನಾಗಿಲ್ಲ. ಬಿಗ್ ಬಾಸ್ ಶೋಗೆ ಟಾಪ್-10 ಪಟ್ಟಿಯಲ್ಲಿ ಸ್ಥಾನ ಪಡೆಯಲು ಸಾಧ್ಯವಾಗದ ಸ್ಥಿತಿ. ತಯಾರಕರು ಈಗ ಈ ಸಮಸ್ಯೆಯನ್ನು ಹಳೆಯ ರೀತಿಯಲ್ಲಿ ಪರಿಹರಿಸಲು ಪ್ರಯತ್ನಿಸುತ್ತಿದ್ದಾರೆ. ವೈಲ್ಡ್ ಕಾರ್ಡ್(Bigg Boss Wildcard Entry) ಸ್ಪರ್ಧಿಗಳಾಗಿ ರಶ್ಮಿ ದೇಸಾಯಿ ಮತ್ತು ದೇವೋಲೀನಾ ಭಟ್ಟಾಚಾರ್ಜಿ ಕಾರ್ಯಕ್ರಮಕ್ಕೆ ಹೊಸದಾಗಿ ಪ್ರವೇಶಿಸಬಹುದು.

ಇದನ್ನೂ ಓದಿ: ನಿನ್ನೆಯಷ್ಟೇ OTTಯಲ್ಲಿ ಬಿಡುಗಡೆಯಾದ 14 ಚಿತ್ರಗಳ ಪಟ್ಟಿ ಇಲ್ಲಿದೆ!

3 ಜನರು ಮನೆಯೊಳಗೆ ಪ್ರವೇಶಿಸುತ್ತಾರೆ

ವರದಿಗಳ ಪ್ರಕಾರ ರಶ್ಮಿ ದೇಸಾಯಿ(Rashmi Desai) ಮತ್ತು ದೇವೋಲೀನಾ ಭಟ್ಟಾಚಾರ್ಜಿ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮನೆಗೆ ಪ್ರವೇಶಿಸಬಹುದು. ಮೂಲಗ ಪ್ರಕಾರ ರಶ್ಮಿ ದೇಸಾಯಿ, ದೇವೋಲೀನಾ ಭಟ್ಟಾಚಾರ್ಜಿ ಮತ್ತು ಅಭಿಜಿತ್ ಬಿಚುಕಳೆ ಮುಂದಿನ ವಾರ ಅಥವಾ ಈ ವಾರದ ಕೊನೆಯಲ್ಲಿ ಮನೆಗೆ ಪ್ರವೇಶಿಸಲಿದ್ದಾರೆ. ಅವರು ಕುಟುಂಬ ಸದಸ್ಯರೊಂದಿಗೆ ನೇರವಾಗಿ ಸ್ಪರ್ಧಿಸುತ್ತಾರೆ. ಕಾರ್ಯಕ್ರಮಕ್ಕೆ ರಶ್ಮಿ ದೇಸಾಯಿ ಉತ್ತಮ ಟಿಆರ್‌ಪಿ ಗಳಿಕೆಯನ್ನು ಹೆಚ್ಚು ಮಾಡಲಿದ್ದಾರೆಂದು ನಿರೀಕ್ಷಿಸಲಾಗಿದೆ.   

ರಶ್ಮಿಯೇ ಕಾರ್ಯಕ್ರಮದ ಜೀವಾಳ

ಸಿದ್ಧಾರ್ಥ್ ಶುಕ್ಲಾ ಅವರೊಂದಿಗಿನ ರಶ್ಮಿ ದೇಸಾಯಿ(Rashmi Desai) ಅವರ ವೈಷಮ್ಯವು ಇಲ್ಲಿಯವರೆಗಿನ ಪ್ರದರ್ಶನದಲ್ಲಿಯೇ ದೊಡ್ಡ ಸುದ್ದಿಯಾಗಿತ್ತು. ಜಗಳದ ಸಮಯದಲ್ಲಿ ರಶ್ಮಿ ದೇಸಾಯಿ ಸಿದ್ಧಾರ್ಥ್ ಮೇಲೆ ಬಿಸಿ ಕಾಫಿ ಎರಚಿದ್ದರು. ಅಷ್ಟೇ ಅಲ್ಲ ರಶ್ಮಿ ಅವರ ವೈಯಕ್ತಿಕ ಜೀವನದ ಬಗ್ಗೆ ಮನೆಯೊಳಗೆ ಹಲವು ಸಂಗತಿಗಳು ಬಹಿರಂಗವಾಗಿದ್ದು, ಅಭಿಮಾನಿಗಳ ಗಮನ ಸಂಪೂರ್ಣವಾಗಿ ರಶ್ಮಿಯತ್ತ ಹೋಗಿತ್ತು. ಆದರೆ ರಶ್ಮಿಯವರು ಇಷ್ಟೆಲ್ಲಾ ಸರ್ಕಸ್ ಮಾಡಿದರೂ ಬಿಗ್ ಬಾಸ್ ವಿಜೇತರಾಗಲು ಸಾಧ್ಯವಾಗಲಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.