Anasuya Bharadwaj : ಅನಸೂಯಾ ಭಾರದ್ವಾಜ್.. ತೆಲುಗು ಪ್ರೇಕ್ಷಕರಿಗೆ ಹೆಚ್ಚು ಪರಿಚಯ ಅಗತ್ಯವಿಲ್ಲದ ಹೆಸರು. ಆ್ಯಂಕರ್ ಆಗಿ ನಟಿಯಾಗಿ ವಿಶೇಷ ಮನ್ನಣೆ ಗಳಿಸಿದ್ದಾರೆ. ತಮ್ಮ ಮನಮೋಹಕ ಫೋಟೋಗಳು ಮತ್ತು ವೈಯಕ್ತಿಕ ಕಥೆಗಳನ್ನು ಆಗಾಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುವ ಅನಸೂಯಾ ಉತ್ತಮ ಫ್ಯಾನ್ಸ್‌ ಫಾಲೋಯಿಂಗ್‌ ಹೊಂದಿದ್ದಾರೆ. 


COMMERCIAL BREAK
SCROLL TO CONTINUE READING

ʼರಂಗಸ್ಥಳʼ ಮತ್ತು ʼಪುಷ್ಪಾʼ ಸಿನಿಮಾ ಮೂಲಕ ಪ್ಯಾನ್ಸ್‌ ಇಂಡಿಯಾ ಲೆವೆಲ್‌ನಲ್ಲಿ ಆಂಕರ್‌ ಅನಸೂಯಾ ಚಿರಪರಿಚಿತರಾಗಿದ್ದಾರೆ. ಎಷ್ಟು ಅಭಿಮಾನಿಗಳಿದ್ದಾರೋ ಈಕೆಯ ನೇರ ಮಾತುಗಳಿಗೆ ಅಷ್ಟೇ ವಿರೋಧಿಗಳೂ ಇದ್ದಾರೆ. ಟ್ರೋಲ್‌ಗಳಿಗೆ ತಲೆ ಕೆಡಿಸಿಕೊಳ್ಳದ ನಟಿ ಡೈರೆಕ್ಟ್‌ ಟು ಡೈರೆಕ್ಟ್‌ ಎನ್ನುವಂತೆ ಮಾತನಾಡುತ್ತಾರೆ. ಇದೀಗ ಅಂತಹುದೇ ವಿಡಿಯೋ  ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. 



ಇದನ್ನೂ ಓದಿ: Flash Back : ವಿಷ್ಣುವರ್ಧನ್‌ ಪಕ್ಕದಲ್ಲೇ ಇರುವಾಗ ಅಣ್ಣಾವ್ರ ಮೇಲೆ ಚಪ್ಪಲಿ ಎಸೆದಿದ್ರು!


ಟ್ರೋಲ್‌ಗೆ ಒಳಗಾಗಿ ಅನುಸುಯಾ ಆಗಾಗ ಸುದ್ದಿಯಾಗುತ್ತಿರುತ್ತಾರೆ. ಇತ್ತೀಚೆಗೆ ಅವರು ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ತಾನು ಅಸ್ವಸ್ಥತೆಯಿಂದ ಬಳಲುತ್ತಿರುವುದಾಗಿ ಹೇಳಿದ್ದಾರೆ. "ನನ್ನ ಬಗ್ಗೆ ನಕಾರಾತ್ಮಕವಾಗಿ ಮಾತನಾಡುವವರಿಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಅವರ ಬಗ್ಗೆ ಕಾಳಜಿ ವಹಿಸದೇ ಇರುವುದು ನನ್ನ ಅಸ್ವಸ್ಥತೆ' ಎಂದು ರೀಲ್ ವಿಡಿಯೋ ಶೇರ್ ಮಾಡಿ ಟ್ರೋಲ್‌ ಮಾಡುವವರಿಗೆ ಗುನ್ನ ಇಟ್ಟಿದ್ದಾರೆ. ಸದ್ಯ ಆಕೆಯ ಪೋಸ್ಟ್ ಟ್ರೋಲಿಗರಿಗೆ ಉರಿ ತಂದಿದೆ.


ರಾಮ್‌ ಚರಣ್‌ ನಟನೆಯ ʼರಂಗಸ್ಥಳಂ’ ಸಿನಿಮಾದ ಮೂಲಕ ಬೆಳ್ಳಿತೆರೆಯಲ್ಲಿ ಮೇಲೆ ಮಿಂಚಿ ಅನುಸೂಯಾ ಚಿರಪರಿಚಿತರಾದರು. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರು ಪ್ಯಾನ್ ಇಂಡಿಯಾ ಚಿತ್ರ ಪುಷ್ಪದಲ್ಲಿ ದ್ರಾಕ್ಷಾಯಣಿಯಾಗಿ ವಿಲನ್‌ ಪಾತ್ರದಲ್ಲಿ ಕಾಣಿಸಿಕೊಂಡು ಸೈ ಎನಿಸಿಕೊಂಡರು. ಪ್ರಸ್ತುತ ಅವರ ಕೈಯಲ್ಲಿ ಪುಷ್ಪ 2 ಮತ್ತು ಕೃಷ್ಣವಂಶಿ ರಂಗಮಾರ್ತಾಂಡ ಚಿತ್ರಗಳಿವೆ. ಗುರಜಾಡ ಅಪ್ಪರಾವ್ ಅವರ ‘ಕನ್ಯಾಶುಲ್ಕಂ’ ನಾಟಕದ ಕಾದಂಬರಿಯನ್ನು ಆಧರಿಸಿದ ಕನ್ಯಾಶುಲ್ಕಂ ಎಂಬ ವೆಬ್ ಸರಣಿಯಲ್ಲಿಯೂ ಅವರು ನಟಿಸುತ್ತಿದ್ದಾರೆ. ಇದರಲ್ಲಿ ಅನಸೂಯಾ ವೇಶ್ಯೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ತೋರುತ್ತದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.