VD12 : ವಿಜಯ್ ದೇವರಕೊಂಡ ನ್ಯೂ ಫಿಲ್ಮ್‌ ಅನೌನ್ಸ್‌..! ಕ್ಯೂರಿಯಾಸಿಟಿ ಹುಟ್ಟಿಸಿದ ಪೋಸ್ಟರ್‌

ಟಾಲಿವುಡ್‌ ಸ್ಟಾರ್ ನಟ ವಿಜಯ್ ದೇವರಕೊಂಡ ಅವರು ತಮ್ಮ ಮುಂಬರುವ ಚಿತ್ರಕ್ಕೆ ಜೆರ್ಸಿ ನಿರ್ದೇಶಕ ಗೌತಮ್ ತಿನ್ನೌರಿ ಆಕ್ಷನ್‌ ಕಟ್‌ ಹೇಳಲಿದ್ದಾರೆ. ತಮ್ಮ ಮುಂಬರುವ ಸಿನಿಮಾ ಪೋಸ್ಟರ್‌ ಹಂಚಿಕೊಂಡು ಪ್ಯಾನ್ಸ್‌ಗೆ ವಿಜಯ್‌ ಅಪ್‌ಡೇಟ್‌ ನೀಡಿದ್ದಾರೆ. ಈ ಚಿತ್ರಕ್ಕೆ ತಾತ್ಕಾಲಿಕವಾಗಿ VD12 ಎಂದು ಹೆಸರಿಡಲಾಗಿದೆ. ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಮತ್ತು ಫಾರ್ಚೂನ್ ಫೋರ್ ಸಿನಿಮಾಸ್ ಈ ಚಿತ್ರವನ್ನು ನಿರ್ಮಾಣ ಮಾಡಲಿದೆ.

Written by - Krishna N K | Last Updated : Jan 13, 2023, 09:57 PM IST
  • ವಿಜಯ್ ದೇವರಕೊಂಡ ಹೊಸ ಸಿನಿಮಾ ಅನೌಸ್ಸ್‌.
  • ವಿಜಯ್‌ಗೆ ಆಕ್ಷನ್‌ ಕಟ್‌ ಹೇಳಲಿದ್ದಾರೆ ಜೆರ್ಸಿ ನಿರ್ದೇಶಕ ಗೌತಮ್ ತಿನ್ನೌರಿ.
  • ಕ್ಯೂರಿಯಾಸಿಟಿ ಹುಟ್ಟಿಸುತ್ತಿದೆ ವಿಜಯ್‌ ದೇವರಕೊಂಡ ಹೊಸ ಚಿತ್ರದ ಪೋಸ್ಟರ್‌.
VD12 : ವಿಜಯ್ ದೇವರಕೊಂಡ ನ್ಯೂ ಫಿಲ್ಮ್‌ ಅನೌನ್ಸ್‌..! ಕ್ಯೂರಿಯಾಸಿಟಿ ಹುಟ್ಟಿಸಿದ ಪೋಸ್ಟರ್‌ title=

Vijay Devarakonda new movie : ಟಾಲಿವುಡ್‌ ಸ್ಟಾರ್ ನಟ ವಿಜಯ್ ದೇವರಕೊಂಡ ಅವರು ತಮ್ಮ ಮುಂಬರುವ ಚಿತ್ರಕ್ಕೆ ಜೆರ್ಸಿ ನಿರ್ದೇಶಕ ಗೌತಮ್ ತಿನ್ನೌರಿ ಆಕ್ಷನ್‌ ಕಟ್‌ ಹೇಳಲಿದ್ದಾರೆ. ತಮ್ಮ ಮುಂಬರುವ ಸಿನಿಮಾ ಪೋಸ್ಟರ್‌ ಹಂಚಿಕೊಂಡು ಪ್ಯಾನ್ಸ್‌ಗೆ ವಿಜಯ್‌ ಅಪ್‌ಡೇಟ್‌ ನೀಡಿದ್ದಾರೆ. ಈ ಚಿತ್ರಕ್ಕೆ ತಾತ್ಕಾಲಿಕವಾಗಿ VD12 ಎಂದು ಹೆಸರಿಡಲಾಗಿದೆ. ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಮತ್ತು ಫಾರ್ಚೂನ್ ಫೋರ್ ಸಿನಿಮಾಸ್ ಈ ಚಿತ್ರವನ್ನು ನಿರ್ಮಾಣ ಮಾಡಲಿದೆ.

ಚಿತ್ರದ ಪೋಸ್ಟರ್‌ನಲ್ಲಿ ಒಬ್ಬ ಪೋಲೀಸ್ ಅಧಿಕಾರಿಯನ್ನು ತೋರಿಸಲಾಗಿದೆ. ಆದ್ರೆ ಮುಖವನ್ನು ಬಟ್ಟೆಯಿಂದ ಮುಚ್ಚಲಾಗಿದೆ. ಪೋಸ್ಟರ್‌ ನೋಡಿದ್ರೆ ವಿಜಯ್‌ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಾ ಎಂಬ ಡೌಟ್‌ ಮೂಡುವಂತಿದೆ. ಇನ್ನು ವಿಜಯ್ ದೇವರಕೊಂಡ ಅವರು ತಮ್ಮ ಟ್ಟೀಟರ್‌ ಖಾತೆಯಲ್ಲಿ  ವಿಡಿ12 ರ ಪೋಸ್ಟರ್‌ ಹಂಚಿಕೊಂಡಿದ್ದಾರೆ. ಅಲ್ಲದೆ, ʼಕಥೆಯನ್ನು ಕೇಳಿದಾಗ ನನ್ನ ಹೃದಯ ಬಡಿತ ತಪ್ಪಿತುʼ ಎಂಬ ಶಿರ್ಷಿಕೆ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಮಧ್ಯರಾತ್ರಿ 2 ಗಂಟೆಗೆ ಶಾರುಖ್‌ಖಾನ್‌ ಭೇಟಿಯಾಗಿ ಕಿಸ್‌ ಮಾಡಿದ ಪ್ಯಾನ್‌..!

ವಿಜಯ್‌ ಸಿನಿಮಾ ಕುರಿತು ಸಿತಾರಾ ಎಂಟರ್‌ಟೈನ್‌ಮೆಂಟ್‌ನ ತನ್ನ ಅಧಿಕೃತ ಟ್ಟೀಟರ್‌ ಖಾತೆಯಲ್ಲಿ ಪೋಸ್ಟರ್‌ ಹಂಚಿಕೊಂಡು ಮಾಹಿತಿ ನೀಡಿದೆ. ಲೈಗರ್‌ ಸೋಲಿನ ಬಳಿಕ ಲಾಂಗ್‌ ಗ್ಯಾಪ್‌ ತೆಗೆದುಕೊಂಡಿದ್ದ ವಿಜಯ್‌ ಇದೀಗ ಹೊಸ ಪ್ರಾಜೆಕ್ಟ್‌ ಜೊತೆ ಮರಳಿದ್ದಾರೆ. ಇನ್ನು ಚಿತ್ರದಲ್ಲಿ ಪೊಲೀಸ್‌ ಅಧಿಕಾರಿಯ ಪಾತ್ರದಲ್ಲಿ ದೇವರಕೊಂಡ ಕಾಣಿಸಿಕೊಳ್ಳಲಿದ್ದಾರಾ ಎಂಬ ಅನುಮಾನ ಶುರುವಾಗಿದೆ. ಚಿತ್ರದ ನಾಯಕಿ ಸೇರಿದಂತೆ ಉಳಿದ ಕಲಾವಿದರ ಕುರಿತು ಚಿತ್ರತಂಡ ಅಪ್‌ಡೇಟ್ಸ್‌ ನೀಡಬೇಕಿದೆ.

ವಿಜಯ್ ದೇವರಕೊಂಡ ಸದ್ಯ ಖುಷಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸಮಂತಾ ಜೊತೆ ವಿಜಯ್‌ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಲ್ಲದೆ, ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಿರುವ ಪುರಿ ಜಗನ್ನಾಥ್ ಅವರ ಜನ ಗಣ ಮನ (ಜೆಜಿಎಂ)  ಸಿನಿಮಾದಲ್ಲಿ ವಿಜಯ್‌ ನಟಿಸಬೇಕಿತ್ತು. ಆದರೆ ಲೈಗರ್‌ ಚಿತ್ರದ ಸೋಲಿನ ನಂತರ ಈ ಚಿತ್ರವನ್ನು ತಡೆಹಿಡಿಯಲಾಗಿದೆ. ವಿಜಯ್ ಸಿನಿ ಕಿಟ್‌ನಲ್ಲಿ ಸುಕುಮಾರ್ ಜೊತೆ ಒಂದು ಸಿನಿಮಾ ಕೂಡ ಇದೆ. ನಿರ್ದೇಶಕ ಹರೀಶ್ ಶಂಕರ್ ಜೊತೆಗೂ ವಿಜಯ್‌ ಕೈಜೋಡಿಸುವ ಬಗ್ಗೆಯೂ ಮಾತುಕತೆ ನಡೆದಿದೆ ಎನ್ನಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News