ನವದೆಹಲಿ: ಮುಂಬೈಯನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿದ ಕಂಗನಾ ರನೌತ್ ವಿರುದ್ಧ ವ್ಯಾಪಕ ವಿರೋಧ ವ್ಯಕ್ತವಾದ ಬೆನ್ನಲ್ಲೇ ಈಗ ಬಿಜೆಪಿ ನೇತೃತ್ವದ ಹರಿಯಾಣ ಸರ್ಕಾರದ ಗೃಹ ಸಚಿವ ಅನಿಲ್ ವಿಜ್ ಅವರು ನಟಿ ಪರವಾಗಿ ಬ್ಯಾಟ್ ಬೀಸಿ ಪೋಲಿಸ್ ರಕ್ಷಣೆ ಒದಗಿಸಬೇಕೆಂದು ಕೋರಿದ್ದಾರೆ.


COMMERCIAL BREAK
SCROLL TO CONTINUE READING

'ಕಂಗನಾ ರನೌತ್ ಅವರಿಗೆ ಪೊಲೀಸ್ ರಕ್ಷಣೆ ನೀಡಬೇಕು.ಆಕೆಗೆ ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ಮುಕ್ತವಾಗಿ ಬಹಿರಂಗಪಡಿಸಲು ಅವಕಾಶ ನೀಡಬೇಕು "ಎಂದು ಹರಿಯಾಣ ಸಚಿವ ಅನಿಲ್ ವಿಜ್ ಎಎನ್ಐಗೆ ತಿಳಿಸಿದ್ದಾರೆ.


ಸೆಪ್ಟೆಂಬರ್ 9 ರಂದು ಮುಂಬೈಗೆ ಬಂದರೆ ಶಿವಸೇನೆ ಮಹಿಳಾ ಸದಸ್ಯರು ನಟಿಗೆ ಕಪಾಳಮೋಕ್ಷ ಮಾಡಬೇಕೆಂದು ಶಿವಸೇನೆ ಶಾಸಕ ಪ್ರತಾಪ್ ಸರ್ನಾಯಕ್ ಹೇಳಿದ ಒಂದು ದಿನದ ನಂತರ ಬಿಜೆಪಿ ಸಚಿವರ ಮನವಿ ಬಂದಿದೆ. ಇನ್ನೊಂದೆಡೆಗೆ ರಾಷ್ಟ್ರೀಯ ಮಹಿಳಾ ಆಯೋಗದ ಮುಖ್ಯಸ್ಥೆ ರೇಖಾ ಶರ್ಮಾ ಅವರು ಶ್ರೀ ಸರ್ನಾಯಕ್ ಅವರನ್ನು ಬಂಧಿಸಬೇಕೆಂದು ಒತ್ತಾಯಿಸಿದರು.


ಸೆಪ್ಟೆಂಬರ್ 9ಕ್ಕೆ ಮುಂಬೈಗೆ ಬರುವೆ, ಯಾರಪ್ಪನಲ್ಲಿ ಧೈರ್ಯ ಇದ್ದರೆ ತಡೆದು ತೋರಿಸಲಿ: Kangana Ranaut


ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ವಿಚಾರವಾಗಿ ಬಿಜೆಪಿಯ ಬೆಂಬಲಿಗರು ಹಾಗೂ  ನಟಿ ಕಂಗನಾ ರನೌತ್ ಅವರು ಮಹಾರಾಷ್ಟ್ರದ ಕಾಂಗ್ರೆಸ್-ಶಿವಸೇನೆ-ಎನ್‌ಸಿಪಿ ಸರ್ಕಾರದ ಮೇಲೆ ನಿರಂತರವಾಗಿ ವಾರಗಟ್ಟಲೆ ದಾಳಿ ನಡೆಸುತ್ತಿದ್ದಾರೆ.


ಇದಕ್ಕೆ ಪ್ರತಿಕ್ರಿಯೆಯಾಗಿ ಶಿವಸೇನೆ ಸಂಸದ ಸಂಜಯ್ ರೌತ್ ಅವರು ಇತ್ತೀಚೆಗೆ ಪಕ್ಷದ ಮುಖವಾಣಿಯಲ್ಲಿ  "ನಾವು ಅವಳನ್ನು ಮುಂಬೈಗೆ ಬರದಂತೆ ವಿನಂತಿಸುತ್ತೇವೆ. ಇದು ಮುಂಬೈ ಪೊಲೀಸರಿಗೆ ಮಾಡಿದ ಅವಮಾನವಲ್ಲ. ಗೃಹ ಸಚಿವಾಲಯ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು." ಎಂದು ಪ್ರತಿಕ್ರಿಯಿಸಿದ್ದರು


ಇದಕ್ಕೆ ಪ್ರತಿಕ್ರಿಯಿಸಿದ  ಕಂಗನಾ "ಶಿವಸೇನೆ ಮುಖಂಡ ಸಂಜಯ್ ರೌತ್ ನನಗೆ ಮುಕ್ತ ಬೆದರಿಕೆ ಹಾಕಿದ್ದಾರೆ ಮತ್ತು ಮುಂಬೈಗೆ ಹಿಂತಿರುಗಬಾರದೆಂದು ಕೇಳಿಕೊಂಡಿದ್ದಾರೆ, ಮುಂಬೈ ಈಗ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಆಗಿ ಅನಿಸುತ್ತಿದೆ ಎಂದು ಹೇಳಿದ್ದಾರೆ.