ಮುಂಬೈ: ಶಿವಸೇನೆ ಮುಖಂಡ ಸಂಜಯ್ ರೌತ್ ಅವರ ಎಚ್ಚರಿಕೆಗೆ ಬಾಲಿವುಡ್ ನಟಿ ಕಂಗನಾ ರಣಾವತ್(Kangana Ranaut) ಪ್ರತಿಕ್ರಿಯಿಸಿದ್ದಾರೆ. ತಮ್ಮ ಎಚ್ಚರಿಕೆಯಲ್ಲಿ ರಾವುತ್ ಮುಂಗೈಗೆ ಬರಬಾರದೆಂದು ಕಂಗನಾ ಅವರಿಗೆ ತಿಳಿಸಿದ್ದರು. ಇದೀಗ ಕಂಗನಾ, ಸಂಜಯ್ ರಾವುತ್ ಅವರ ಎಚ್ಚರಿಕೆಗೆ ಸೂಕ್ತ ಉತ್ತರ ನೀಡಿದ್ದಾರೆ. ಸೆಪ್ಟೆಂಬರ್ 9 ರಂದು ತಾನು ಮತ್ತೆ ಮುಂಬೈಗೆ ಬರುತ್ತಿದ್ದೇನೆ ಎಂದು ಅವರು ಟ್ವೀಟ್ ಮಾಡಿದ್ದಾರೆ, ಯಾರಪ್ಪನಲ್ಲಿ ಧೈರ್ಯ ಇದ್ದರೆ ತಡೆದು ತೋರಿಸಲಿಎಂದು ಗುಡುಗಿದ್ದಾಳೆ.
ಈ ಕುರಿತು ತನ್ನ ಟ್ವೀಟ್ ನಲ್ಲಿ ಬರೆದುಕೊಂಡಿರುವ ಕಂಗನಾ, "ಹಲವು ಜನರು ನನಗೆ ಮುಂಬೈಗೆ ಬರದಿರಲು ಹೇಳುತ್ತಿದ್ದಾರೆ. ಇದೆ ವಾರ ಸೆಪ್ಟೆಂಬರ್ 9ರಂದು ನಾನು ಮುಂಬೈಗೆ ಬರುವ ನಿರ್ಣಯ ಕೈಗೊಂಡಿರುವೆನು ಹಾಗೂ ಏರ್ ಪೋರ್ಟ್ ನಲ್ಲಿ ಇಳಿದ ಬಳಿಕ ಟೈಮ್ ಕೂಡ ಹೇಳುವೆನು. ಯಾರಪ್ಪನಲ್ಲಿ ಧೈರ್ಯ ಇದ್ದರೆ ತಡೆದು ತೋರಿಸಲಿ" ಎಂದು ಬರೆದು ಅದರ ಜೊತೆಗೆ ಅನುಮೊಗದ ಇಮೊಜಿ ಕೂಡ ಕಂಗನಾ ಹಂಚಿಕೊಂಡಿದ್ದಾರೆ.
ಉದ್ಧವ್ ಠಾಕ್ರೆಯನ್ನು ಪ್ರಶ್ನಿಸಿದ ಕಂಗನಾ
ಬಿಜೆಪಿ ಮುಖಂಡ ಪ್ರವೇಶ ಸಾಹೇಬ್ ಸಿಂಗ್ ಅವರ ಟ್ವೀಟ್ ಗೆ ರೀಟ್ವೀಟ್ ಮಾಡುವ ಮೂಲಕ ಕಂಗನಾ ಈ ರೀತಿ ಹೇಳಿದ್ದಾರೆ. ತನ್ನ ಟ್ವೀಟ್ ನಲ್ಲಿ ಬರೆದುಕೊಂಡಿದ್ದಾ ಸಾಹೇಬ್ ಸಿಂಗ್, " ಮುಂಬೈ ಯಾರ ತಂದೆಯ ಆಸ್ತಿಯೇ? ಮುಂಬೈನಲ್ಲಿ ನಡೆಯುತ್ತಿರುವುದ್ದರು ಏನು? ಎಂದು ಪ್ರಶ್ನಇಸಿದ್ದರು. ಕಂಗನಾ ರಣಾವತ್ ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ಮಾಡಿದ್ದ ಒಂದು ಟ್ವೀಟ್ ಗೆ ಉತ್ತರ ನೀಡಿದ್ದ ಸಾಹೇಬ್ ಸಿಂಗ್ ತಮ್ಮ ಟ್ವೀಟ್ ಮಾಡಿ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಪ್ರಶ್ನಿಸಿದ್ದರು.
ಸಂಜಯ್ ರಾವುತ್ ನೀಡಿದ್ದ ಧಮ್ಕಿ ಏನು?
ತನ್ನ ಟ್ವೀಟ್ ನಲ್ಲಿ ಬರೆದುಕೊಂಡಿದ್ದ ಕಂಗನಾ ರಣಾವತ್, " ಶಿವಸೇನಾ ಮುಖಂಡ ಸಂಜಯ್ ರಾವುತ್ ನನಗೆ ಬಹಿರಂಗವಾಗಿ ಧಮ್ಕಿ ನೀಡಿದ್ದು, ನನಗೆ ಮುಂಬೈಗೆ ಬರದಿರಲು ಹೇಳಿದ್ದಾರೆ. ಮೊದಲು ಮುಂಬೈ ರಸ್ತೆಗಳ ಮೇಲೆ ಸ್ವಾತಂತ್ರ್ಯ ಕೋರಿ ಘೋಷಣೆಗಳು ಕೇಳಿಬಂದಿವೆ. ಇದೀಗ ಬಹಿರಂಗ ಧಮ್ಕಿ ಕೇಳಿಬರುತ್ತಿದೆ. ಮುಂಬೈ ಪಾಕ್ ಆಕ್ರಮಿತ ಕಾಶ್ಮೀರ್ ಎಂಬಂತೆ ಏಕೆ ಅನ್ನಿಸುತ್ತಿದೆ?" ಎಂದಿದ್ದರು. ಕಂಗನಾ ಅವರ ಈ ಟ್ವೀಟ್ ಇದೀಗ ಭಾರಿ ಮೈಲೇಜ್ ಪಡೆದುಕೊಂಡಿದ್ದು, ಜನರಿಂದ ಪರ-ವಿರೋಧ ಹೇಳಿಕೆಗಳು ಕೇಳಿಬರುತ್ತಿವೆ.