ನವದೆಹಲಿ: ಕಳೆದ ವರ್ಷದ ಅತ್ಯಂತ ವಿವಾದಾತ್ಮಕ ಚಿತ್ರಗಳಲ್ಲಿ ಒಂದಾದ ರಣಬೀರ್ ಕಪೂರ್ ಅಭಿನಯದ 'ಅನಿಮಲ್' ಚಿತ್ರ  ಈ ತಿಂಗಳು ಓಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ.  ಈ ಚಿತ್ರವು ಇನ್ನೂ ಕೂಡ ಗಲ್ಲಾ ಪೆಟ್ಟಿಗೆಯಲ್ಲಿ ಭಾರಿ ಕಲೇಕ್ಷನ್ ಮುಂದುವರೆಸಿದ್ದು,  ಭಾರತದಲ್ಲಿ 550 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ. ಒಟಿಟಿಯಲ್ಲಿ ಈ ಚಿತ್ರದ ಬಿಡುಗಡೆಗಾಗಿ ಹೆಚ್ಚಿನ ಸಂಖ್ಯೆಯ ವೀಕ್ಷಕರು ಕಾಯುತ್ತಿದ್ದಾರೆ. 'X' ವೇದಿಕೆಯ ಮೇಲಿನ ಮಾಧ್ಯಮ ವರದಿಗಳು ಮತ್ತು ಪೋಸ್ಟ್‌ಗಳನ್ನು ನಂಬುವುದಾದರೆ, ಈ ಗಣರಾಜ್ಯೋತ್ಸವದಂದು ಅಂದರೆ ಜನವರಿ 26 ರಂದು ಅನಿಮಲ್ ಓಟಿಟಿ ವೇದಿಕೆಯ ಮೇಲೆ ಬಿಡುಗಡೆಯಾಗಲಿದೆ ಎನ್ನಲಾಗುತ್ತಿದೆ. (Bollywood News In Kannada)


COMMERCIAL BREAK
SCROLL TO CONTINUE READING

ಆಂಗ್ಲ ಮಾಧ್ಯಮದ ವಾಣಿಜ್ಯ ಪತ್ರಿಕೆಯೊಂದರಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, OTTGuru ಹೆಸರಿನ ಟ್ವಿಟರ್ ಹ್ಯಾಂಡಲ್ ಅನಿಮಲ್‌ನ ಓಟಿಟಿ ಬಿಡುಗಡೆಯ ಸಂಭವನೀಯ ದಿನಾಂಕವನ್ನು ಬಹಿರಂಗಪಡಿಸಲಾಗಿದೆ.  ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿನ ಅದರ ಒಂದು ಪೋಸ್ಟ್‌ನಲ್ಲಿ, ಜನವರಿ 26 ರಿಂದ ಅನಿಮಲ್ ಸ್ಟ್ರೀಮಿಂಗ್ ಆರಂಭವಾಗಲಿದೆ ಎನ್ನಲಾಗಿದೆ.


ಇದನ್ನೂ ಓದಿ-Viral Video: ರೈಲು ಪ್ರಯಾಣದ ವೇಳೆ ಐಆರ್ಸಿಟಿಸಿ ಸ್ಟಾಲ್ ನಿಂದ ಆಹಾರ ಆರ್ಡರ್ ಮಾಡುವ ಮುನ್ನ ಈ ವಿಡಿಯೋ ಒಮ್ಮೆ ಖಂಡಿತ ನೋಡಿ!
 
ವರದಿಯ ಪ್ರಕಾರ, ಚಿತ್ರದ ಓಟಿಟಿ  ಹಕ್ಕುಗಳನ್ನು ನೆಟ್‌ಫ್ಲಿಕ್ಸ್ ಖರೀದಿಸಿದೆ ಎಂದೂ ಕೂಡ ಹೇಳಲಾಗಿದೆ. ಕುತೂಹಲಕಾರಿಯಾಗಿ, ಚಿತ್ರದ ಓಟಿಟಿ ಆವೃತ್ತಿಯು ಅದರ ಥಿಯೇಟ್ರಿಕಲ್ ಆವೃತ್ತಿಗಿಂತ ದೊಡ್ಡದಾಗಿದೆ. ಚಲನಚಿತ್ರ ವಿಶ್ಲೇಷಕ ಕೋಮಲ್ ನಹತಾ ಅವರೊಂದಿಗಿನ ಸಂದರ್ಶನದಲ್ಲಿ, ಅನಿಮಲ್ ನಿರ್ದೇಶಕರು ಥಿಯೇಟರ್ ಬಿಡುಗಡೆಯಿಂದ ತೆಗೆದು ಹಾಕಲಾದ ಕೆಲ ದೃಶ್ಯಗಳನ್ನು ಓಟಿಟಿ ಆವೃತ್ತಿಯಲ್ಲಿ ಸೇರಿಸಲಾಗುವುದು ಎಂದು ಹೇಳಿದ್ದರು, 


ಇದನ್ನೂ ಓದಿ-Viral Video: 'ನನಗೆ ಒಂದು ಮುತ್ತು ಬೇಕು' ಎಂದು ಹುಡುಗ ಹುಡುಗಿಗೆ ಕೇಳಿದ್ದೆ ತಡ, ನೆಟ್ಟಿಗರ ರಿಯಾಕ್ಷನ್ ಹೇಗಿದೆ ನೋಡಿ!


ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ಅನಿಮಲ್‌ನ ಓಟಿಟಿ ಬಿಡುಗಡೆಗೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಮಾಹಿತಿ ಇನ್ನೂ ಬಹಿರಂಗಗೊಂಡಿಲ್ಲ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಈ ಚಿತ್ರ ಇನ್ನೂ ಹಣ ಗಳಿಸುತ್ತಿದೆ. ಕಳೆದ ಭಾನುವಾರ ಅನಿಮಲ್ ಭಾರತದಲ್ಲಿ 1 ಕೋಟಿ ರೂ.ಗಿಂತ ಹೆಚ್ಚು ಸಂಗ್ರಹಿಸಿದೆ ಎಂದು ಉದ್ಯಮ ಟ್ರ್ಯಾಕರ್ ಸ್ಯಾಕ್‌ನಿಲ್ಕ್‌ನ ಡೇಟಾ ಬಹಿರಂಗಪಡಿಸಿದೆ. ಸೋಮವಾರದಂದು ಚಿತ್ರ ಸುಮಾರು 35 ಲಕ್ಷ ರೂ. ಗಳಿಕೆ ಮಾಡಿದೆ. ಭಾರತದಲ್ಲಿ ಅನಿಮಲ್ ಒಟ್ಟು ಗಳಿಕೆ 550.85 ಕೋಟಿ ರೂ.ಗೆ ತಲುಪಿದೆ. ಎನ್ನಲಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ