Amruta Subhash : ಬಾಲಿವುಡ್‌ ನಟಿ ಅಮೃತಾ ಸುಭಾಷ್ ತಮ್ಮ ಮೊದಲ ಲೈಂಗಿಕ ದೃಶ್ಯದ ಚಿತ್ರೀಕರಣದ ಬಗ್ಗೆ ಬೋಲ್ಡ್‌ ಆಗಿ ಮಾತನಾಡಿದ್ದಾರೆ. ಲಸ್ಟ್ ಸ್ಟೋರೀಸ್ 2 ಸಿನಿಮಾದಲ್ಲಿ ನಟಿಸಿರುವ ನಟಿ ಇದೀಗ ತಮ್ಮ ಬೋಲ್ಡ್‌ ಹೇಳಿಕೆಯಿಂದ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದ್ದಾರೆ.


COMMERCIAL BREAK
SCROLL TO CONTINUE READING

ಹೌದು.. ಅನುರಾಗ್ ಕಶ್ಯಪ್ ನಿರ್ದೇಶಿಸಿದ ʼಸೇಕ್ರೆಡ್ ಗೇಮ್ಸ್ 2ʼ ಸರಣಿಯಲ್ಲಿ ಕಾಣಿಸಿಕೊಂಡಿದ್ದ ನಟಿ ಅಮೃತಾ ತಮ್ಮ ಮೊದಲ ಸೆಕ್ಸ್‌ ಸೀಸ್‌ ಚಿತ್ರೀಕರಣದ ಬಗ್ಗೆ ಓಪನ್‌ ಆಗಿ ಮಾತನಾಡಿದ್ದಾರೆ. ಲೈಂಗಿಕ ದೃಶ್ಯವನ್ನು ಚಿತ್ರೀಕರಿಸುವ ಮೊದಲು ನಿರ್ದೇಶಕ ಕಶ್ಯಪ್‌ ಅವರು ತಮ್ಮ ಪಿರಿಯಡ್‌ ದಿನಾಂಕದ ಬಗ್ಗೆ ಕೇಳಿದ್ದರು ಎಂದು ಬಹಿರಂಗಪಡಿಸಿದ್ದಾರೆ. ಅಲ್ಲದೆ, ತಮ್ಮ ಪಿರಿಯಡ್‌ ಸಮಯದಲ್ಲಿ ಲೈಂಗಿಕ ದೃಶ್ಯಗಳ ಚಿತ್ರೀಕರಣ ಮಾಡಲು ತಂಡ ಬಯಸುವುದಿಲ್ಲ ಎಂದು ವಿವರಿಸಿದ್ದಾರೆ.


ಇದನ್ನೂ ಓದಿ: ಭಾರಿ ಸದ್ದು ಮಾಡುತ್ತಿದೆ ʼರಾನಿʼ ಟೀಸರ್..ಅಭಿಮಾನಿಗಳಿಗೆ ಚಿರಋಣಿ ಎಂದ ಕಿರಣ್‌ ರಾಜ್..!‌


ನಾನು ಸೇಕ್ರೆಡ್ ಗೇಮ್ಸ್ 2 ರಲ್ಲಿ ನನ್ನ ಮೊದಲ ಲೈಂಗಿಕ ದೃಶ್ಯವನ್ನು ಮಾಡಿದ್ದೇನೆ. ಪುರುಷ ಅಥವಾ ಮಹಿಳೆ ಎಂಬ ಪ್ರಶ್ನೆಯೇ ಇರಲಿಲ್ಲ. ಅನುರಾಗ್‌ ಕಶ್ಯಪ್‌ ಅವರು ಅತ್ಯಂತ ಸಂವೇದನಾಶೀಲರಾಗಿದ್ದರು. ಅವರು ನನ್ನ ಪಿರಿಯಡ್ಸ್‌ ಸಮಯವನ್ನು ಕೇಳಿದ್ದರು. ಅಲ್ಲದೆ ಅಂತಹ ದಿನಗಳಲ್ಲಿ ಲೈಂಗಿಕ ದೃಶ್ಯಗಳನ್ನು ನಿಗದಿಪಡಿಸುವುದಿಲ್ಲ ಎಂದಿದ್ದರು. ಹಾಗೂ 'ನಿಮ್ಮ ಅವಧಿಯ ಸಮಯದಲ್ಲಿ ನೀವು ಇಂತಹ ದೃಶ್ಯಗಳನ್ನು ಮಾಡುತ್ತೀರಾ?' ಎಂದು ಬಹಿರಂಗವಾಗಿ ಕೇಳಿದ್ದರು ಎಂದು ನೆಟ್‌ಫ್ಲಿಕ್ಸ್ ಇಂಡಿಯಾದ ಸಂದರ್ಶನದಲ್ಲಿ ಹೇಳಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.