ʼಹಿಡನ್‌ ಡ್ರ್ಯಾಗನ್‌ʼ, ʼಮುಲಾನ್‌ʼ ಖ್ಯಾತಿಯ ಗಾಯಕಿ, ನಟಿ ಕೊಕೊ ಲೀ ಆತ್ಮಹತ್ಯೆ..!

Singer Coco Lee passes away : ಹಾಂಗ್ ಕಾಂಗ್‌ನಲ್ಲಿ ಜನಿಸಿದ ಲೀ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಬೆಳೆದರು. ನಂತರ ಅವರು ಪಾಪ್ ಗಾಯಕಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. 1996 ರಲ್ಲಿ, ಅವರು ಸೋನಿ ಮ್ಯೂಸಿಕ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದರು. ಈ ಗೌರವವನ್ನು ಪಡೆದ ಮೊದಲ ಚೀನೀ ಅಮೇರಿಕನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Written by - Krishna N K | Last Updated : Jul 6, 2023, 04:29 PM IST
  • ಖ್ಯಾತ ಗಾಯಕಿ, ಗೀತರಚನೆಗಾರ್ತಿ ಹಾಗೂ ನಟಿ ಕೊಕೊ ಲೀ ನಿಧನ.
  • ಆತ್ಮಹತ್ಯೆಗೆ ಶರಣಾದ ಚೀನೀ ಅಮೇರಿಕನ್ ಗಾಯಕಿ ಲೀ.
  • ಲೀ ಸಾವಿನ ಕುರಿತು ಅವರ ಸಹೋದರಿಂದ ಮಾಹಿತಿ.
ʼಹಿಡನ್‌ ಡ್ರ್ಯಾಗನ್‌ʼ, ʼಮುಲಾನ್‌ʼ ಖ್ಯಾತಿಯ ಗಾಯಕಿ, ನಟಿ ಕೊಕೊ ಲೀ ಆತ್ಮಹತ್ಯೆ..! title=

Coco Lee death : ಖ್ಯಾತ ಗಾಯಕಿ, ಗೀತರಚನೆಗಾರ್ತಿ ಹಾಗೂ ನಟಿ ಕೊಕೊ ಲೀ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 48 ವರ್ಷ ಲೀ ಸಾವಿನ ಬಗ್ಗೆ ಅವರ ಸಹೋದರರಾದ ಕರೋಲ್ ಮತ್ತು ನ್ಯಾನ್ಸಿ ಸಾಮಾಜಿಕ ಮಾಧ್ಯಮ ಮೂಲಕ ಬಹಿರಂಗಪಡಿಸಿದ್ದಾರೆ.

ಕೊಕೊ ಲೀ ಅವರು ಕಳೆದ ಕೆಲವು ವರ್ಷಗಳಿಂದ ತೀವ್ರ ಖಿನ್ನತೆಯಿಂದ ಬಳಲುತ್ತಿದ್ದರು ಮತ್ತು ಇತ್ತೀಚೆಗೆ ಅವರ ಸ್ಥಿತಿಯು ಹದಗೆಟ್ಟಿದೆ ಎಂದು ಹೇಳಲಾಗಿದೆ. ಇದರಿಂದ ಹೊರಬರಲು ಹರಸಾಹಸ ಪಟ್ಟರೂ ಫಲ ಸಿಕ್ಕಿಲ್ಲ ಎಂದು ಅಳಲು ಲೀ ಸಹೋದರರು ನೋವನ್ನು ತೋಡಿಕೊಂಡಿದ್ದಾರೆ. 

ಇದನ್ನೂ ಓದಿ: ಮೊಟ್ಟೆ ಲುಕ್‌ನಲ್ಲಿ ಶಾಕ್‌ ಕೊಟ್ಟ ಧನುಷ್‌..ಚಿತ್ರದ ಟೈಟಲ್‌ ಏನು..?

ಲೀ ಈ ತಿಂಗಳ 2ರಂದು ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದರು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಆಕೆಯನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಆಕೆ ಕೋಮಾಗೆ ಹೋಗಿದ್ದಳು. ಕೊನೆಗೂ ನ.5ರಂದು ಕೊನೆಯುಸಿರೆಳೆದಿದ್ದಾಳೆ ಎಂದು ವರದಿಯಾಗಿದೆ. 

ಹಾಂಗ್ ಕಾಂಗ್‌ನಲ್ಲಿ ಜನಿಸಿದ ಲೀ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಬೆಳೆದರು. ನಂತರ ಅವರು ಪಾಪ್ ಗಾಯಕಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. 1996 ರಲ್ಲಿ, ಅವರು ಸೋನಿ ಮ್ಯೂಸಿಕ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದರು ಮತ್ತು ಆ ಗೌರವವನ್ನು ಪಡೆದ ಮೊದಲ ಚೀನೀ ಅಮೇರಿಕನ್ ಆದರು. 1998 ರಲ್ಲಿ, ಅವಳ ಮ್ಯಾಂಡರಿನ್ ಆಲ್ಬಂ ಡಿ ಡಾ ಡಿ ಮೂರು ತಿಂಗಳೊಳಗೆ ಒಂದು ಮಿಲಿಯನ್ ಪ್ರತಿಗಳನ್ನು ಮಾರಾಟವಾಗಿತ್ತು. 

ಇದನ್ನೂ ಓದಿ: Eega: ʻಈಗʼ ಕತೆ ಹುಟ್ಟಿದ್ದೇ ರೋಚಕ.. ಸುದೀಪ್ ಸೆಲೆಕ್ಟ್ ಆಗಿದ್ದು ಹೀಗೆ.!

'ಹಿಡನ್ ಡ್ರ್ಯಾಗನ್' ನ 'ಎ ಲವ್ ಬಿಫೋರ್ ಟೈಮ್' ಹಾಡು 2001 ರಲ್ಲಿ ಅತ್ಯುತ್ತಮ ಮೂಲ ಗೀತೆಯ ವಿಭಾಗದಲ್ಲಿ ಆಸ್ಕರ್‌ಗೆ ನಾಮನಿರ್ದೇಶನಗೊಂಡಿತು. ಪ್ರಶಸ್ತಿ ಸಮಾರಂಭದಲ್ಲಿ ಪ್ರದರ್ಶನ ನೀಡಿದ ಮೊದಲ ಚೀನೀ ಅಮೇರಿಕನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇದೀಗ ಲೀ ಸಾವು ಅವರ ಅಭಿಮಾನಿಗಳಿಗೆ ದುಃಖ ತಂದಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News