VIDEO : ವಿರಾಟ್ ಕೊಹ್ಲಿಯನ್ನು ಲಿಫ್ಟ್ ಮಾಡಿದ ಅನುಷ್ಕ ; ಫ್ಯಾನ್ಸ್ ನೀಡಿದ ಪ್ರತಿಕ್ರಿಯೆ ಹೀಗಿತ್ತು
ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಈ ಮುದ್ದಾದ ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸುತ್ತಿದೆ. ಈ ವಿಡಿಯೋದಲ್ಲಿ ಅನುಷ್ಕಾ ವಿರಾಟ್ ಅವರನ್ನು ಹಿಡಿದು ಎತ್ತಿರುವುದು ಕಂಡು ಬಂದಿದೆ.
ನವದೆಹಲಿ : ಬಾಲಿವುಡ್ ನಟಿ ಅನುಷ್ಕಾ ಶರ್ಮಾ (Anushka Sharma) ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ (Virat Kohli) ಎಲ್ಲರ ನೆಚ್ಚಿನ ಜೋಡಿಗಳಲ್ಲಿ ಒಂದು. ಅನುಷ್ಕಾ ಇತ್ತೀಚೆಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಅನುಷ್ಕ ವಿರಾಟ್ ನಂತೆಯೇ ಅವರ ಪುತ್ರಿ ಕೂಡಾ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿದ್ದರು. ಇದೀಗ ಅನುಷ್ಕಾ ಶರ್ಮಾ ತಮ್ಮ ಮಸಲ್ ಪವರ್ ತೋರಿಸುವ ವೀಡಿಯೊ ವೈರಲ್ ( Viral video) ಆಗಿದೆ. ಈ ವಿಡಿಯೋದಲ್ಲಿ ಅನುಷ್ಕ ಪತಿ ವಿರಾಟ್ ಕೊಹ್ಲಿಯನ್ನು ಎತ್ತಿರುವ ವಿಡಿಯೋಗೆ ಅಭಿಮಾನಿಗಳಿಂದಲೂ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಅನುಷ್ಕಾ ಶರ್ಮಾ (Anushka Sharma) ಮತ್ತು ವಿರಾಟ್ ಕೊಹ್ಲಿ (Virat Kohli) ಅವರ ಈ ಮುದ್ದಾದ ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಸಾಕಷ್ಟು ಸಂಚಲನ ಸೃಷ್ಟಿಸುತ್ತಿದೆ. ಈ ವಿಡಿಯೋದಲ್ಲಿ ಅನುಷ್ಕಾ ವಿರಾಟ್ ಅವರನ್ನು ಹಿಡಿದು ಎತ್ತಿರುವುದು ಕಂಡು ಬಂದಿದೆ. ಅನುಷ್ಕಾ ಹೀಗೆ ಎರಡು ಬಾರಿ ವಿರಾಟ್ ಕೊಹ್ಲಿಯನ್ನು ಎತ್ತಿದ್ದಾರೆ.
Kareena Kapoor Baby Boy: ಕರೀನಾ ಕಪೂರ್ ಎರಡನೇ ಮಗು ಎಷ್ಟು 'ಕ್ಯೂಟ್' ಇದೆ ಗೊತ್ತಾ?
ಅನುಷ್ಕಾ ವಿರಾಟ್ ಕೊಹ್ಲಿಯನ್ನು (Virat Kohli) ಹಿಂದಿನಿಂದ ತಬ್ಬಿಕೊಳ್ಳುತ್ತಿರುವ ವಿಡಿಯೋ ಇದೆ. ಈ ವಿಡಿಯೋದಲ್ಲಿ (Video) ಅನುಷ್ಕಾ ಒಮ್ಮೆಲೇ ವಿರಾಟ್ ನನ್ನು ಎತ್ತಿ ಬಿಡುತ್ತಾರೆ. ಆಶ್ಚರ್ಯಗೊಂಡ ವಿರಾಟ್ ಬಾಯಿಯಿಂದ 'ಓ ತೇರಿ' ಎಂಬ ಮಾತು ಕೇಳಿ ಬರುತ್ತದೆ. ಇದಾದ ನಂತರ ವಿರಾಟ್ ಕೊಹ್ಲಿ ಮತ್ತೆ ತನ್ನನ್ನು ಎತ್ತುವಂತೆ ಹೇಳುತ್ತಾರೆ. ಇದಾದ ಮೇಲೆ ಮತ್ತೆ ಅನುಷ್ಕಾ ತನ್ನ ಪತಿಯನ್ನು ಎತ್ತುತ್ತಾರೆ. ಈ ವೀಡಿಯೊವನ್ನು ನೋಡಿದ ಅಭಿಮಾನಿಗಳು ಅನುಷ್ಕಾ ಅವರನ್ನು ಶಕ್ತಿಮಾನ್ ಅಲ್ಟ್ರಾ ಪ್ರೊ ಮ್ಯಾಕ್ಸ್ ಎಂದು ಕರೆದಿದ್ದಾರೆ.
ಈ ವೀಡಿಯೊ ನೋಡಿದ ಅಭಿಮಾನಿಗಳು ಬೆರಗಾಗಿದ್ದಾರೆ. ಅಭಿಮಾನಿಗಳಷ್ಟೇ ಅಲ್ಲ, ಸ್ವತಃ ಅನುಷ್ಕಾ (Anushka) ಕೂಡಾ ತನ್ನ ವೀಡಿಯೊ ನೋಡಿ ತಾನೇ ಆಶ್ಚರ್ಯ ಪಟ್ಟಿದ್ದಾರೆ.
ಇದನ್ನೂ ಓದಿ : Deepika Padukone:'ಪಿಕು' ನಂತರ ಮತ್ತೆ ಅಮಿತಾಬ್ ಬಚ್ಚನ್ ಜೊತೆ ದೀಪಿಕಾ ಪಡುಕೋಣೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.