Virat-Anushka Daughter: ಮಗಳ ಛಾಯಾಚಿತ್ರ ಕ್ಲಿಕ್ಕಿಸದಿರಲು ಮಾಧ್ಯಮ ವೃಂದಕ್ಕೆ Virushka ದಂಪತಿ ಮನವಿ

Anushka-Virat Baby - ಎರಡು ದಿನಗಳ ಹಿಂದೆಯಷ್ಟೇ ಮುದ್ದಾದ ಹಣ್ಣು ಮಗುವಿಗೆ ಪೋಷಕರಾಗಿರುವ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಅವರ ಪುತ್ರಿಯ ಒಂದು ಝಲಕ್ ನೋಡಲು ಉಭಯ  ತಾರೆಯರ ಅಭಿಮಾನಿಗಳು ಕಾತರರಾಗಿದ್ದಾರೆ. 

Written by - Nitin Tabib | Last Updated : Jan 13, 2021, 04:49 PM IST
  • ಇತೀಚೆಗಷ್ಟೇ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಮುದ್ದಾದ ಮಗುವಿನ ಪೋಷಕರಾಗಿದ್ದಾರೆ.
  • ಈ ಕುರಿತು ಛಾಯಾಗ್ರಾಹಕರಿಗೆ ಅವರು ಮನವಿ ಮಾಡಿದ್ದಾರೆ.
  • ತಮ್ಮ ಮಗುವಿನ ಖಾಸಗಿತನವನ್ನು ಸುನಿಶ್ಚಿತಗೊಳಿಸಲು ಸಹಕರಿಸುವಂತೆ ಅವರು ಮನವಿ ಮಾಡಿದ್ದಾರೆ.
Virat-Anushka Daughter: ಮಗಳ ಛಾಯಾಚಿತ್ರ ಕ್ಲಿಕ್ಕಿಸದಿರಲು ಮಾಧ್ಯಮ ವೃಂದಕ್ಕೆ Virushka ದಂಪತಿ ಮನವಿ title=
Virat-Anushka Baby (File Photo)

Anushka-Virat Baby - ಎರಡು ದಿನಗಳ ಹಿಂದೆಯಷ್ಟೇ ಮುದ್ದಾದ ಹಣ್ಣು ಮಗುವಿಗೆ ಪೋಷಕರಾಗಿರುವ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಅವರ ಪುತ್ರಿಯ ಒಂದು ಝಲಕ್ ನೋಡಲು ಉಭಯ  ತಾರೆಯರ ಅಭಿಮಾನಿಗಳು ಕಾತರರಾಗಿದ್ದಾರೆ. ಮುದ್ದಾದ ಮಗಳನ್ನು ಹೆತ್ತ ಸುದ್ದಿಯನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಹಂಚಿಕೊಂಡ ವಿರಾಟ್ (Virat Kholi) ಆಗಲಿ ಅಥವಾ ಅನುಷ್ಕಾ ಆಗಲಿ ಯಾವಾಗ ತಮ್ಮ ಮುದ್ದು ಮಗಳ ಛಾಯಾಚಿತ್ರವನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಳ್ಳುತ್ತಾರೆ ಎಂಬ ನಿರೀಕ್ಷೆ ಎಲ್ಲರಲ್ಲಿ ಕುತೂಹಲ ಮೂಡಿಸಿದೆ. ಮೂಲಗಳಿಂದ ದೊರೆತ ಮಾಹಿತಿ ಪ್ರಕಾರ. ಅಭಿಮಾನಿಗಳ ಈ ನಿರೀಕ್ಷೆಯ ನಡುವೆ. ವಿರಾಟ್ ಕೊಹ್ಲಿ ಹಾಗೂ ಮಗಳನ್ನು ಹೆತ್ತ ಬಳಿಕ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಲ್ಲಿ ದಾಖಲಾಗಿರುವ ಅನುಷ್ಕಾ ಎಲ್ಲ ಮಾಧ್ಯಮ ವೃಂದದವರಿಗೆ ಅದರಲ್ಲೂ ವಿಶೇಷವಾಗಿ ಛಾಯಾಗ್ರಾಹಕರಿಗೆ ಒಂದು ವಿಶೇಷ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಏನಿದು ಆ ಮನವಿ... ಅದರ ಹಿಂದಿನ ಕಾರಣವಾದರೂ ಏನು? ನಾವು ನಿಮಗೆ ಹೇಳಲಿದ್ದೇವೆ

ಮಗಳು ಹುಟ್ಟುವುದಕ್ಕಿಂತ ಮೊದಲು ಪ್ರೆಗ್ನೆಂಟ್ ಆಗಿದ್ದ ಅನುಷ್ಕಾ ಶರ್ಮಾ ಅವರನ್ನು ಸತತವಾಗಿ ಹಿಂಬಾಲಿಸಿದ್ದ ಛಾಯಾಚಿತ್ರಗ್ರಾಹಕರಿಗೆ ವಿಶೇಷ ಮನವಿ ಮಾಡಿರುವ ವಿರಾಟ್-ಅನುಷ್ಕಾ, "ಇಷ್ಟೊಂದು ವರ್ಷಗಳವರೆಗೆ ನೀವು ನಮ್ಮಿಬ್ಬರಿಗೆ ತೋರಿದ  ಪ್ರೀತಿಗಾಗಿ ಎಲ್ಲರಿಗೂ ಕೃತಜ್ಞತೆಗಳು. ಆನಂದದ ಈ ಕ್ಷಣಗಳನ್ನು ನಿಮ್ಮೆಲ್ಲರ ಜೊತೆಗೆ ಆಚರಿಸಲು ನಮಗೂ ಕೂಡ ಖುಷಿಯಾಗುತ್ತಿದೆ. ಆದರೆ, ಪೋಷಕರಾಗಿ ನಾವು ನಿಮ್ಮ ಬಳಿ ತುಂಬಾ ಸರಳವಾಗಿರುವ ಒಂದು ಮನವಿಯನ್ನು ಮಾಡುತ್ತಿದ್ದು, ನಮ್ಮ ಮಗಳ ಖಾಸಗಿತನವನ್ನು ಸುನಿಶ್ಚಿತಗೊಳಿಸಲು ಬಯಸುತ್ತಿದ್ದೇವೆ. ಇದಕ್ಕಾಗಿ ನಿಮ್ಮ ನೆರವು ಮತ್ತು ಸಹಕಾರದ ಅಗತ್ಯತೆ ಇದೆ" ಎಂದಿದ್ದಾರೆ.

ಇದನ್ನು ಓದಿ- Virushka : ವೈರಲ್ ಆಯ್ತಾ ವಿರಾಟ್ ಅನುಷ್ಕಾ ಪುತ್ರಿಯ ಫೋಟೋ...?

ಈ ಕುರಿತು ಜಂಟಿ ಹೇಳಿಕೆ ಬಿಡುಗಡೆ ಮಾಡಿರುವ ವಿರಾಟ್-ಅನುಷ್ಕಾ, "ನಮ್ಮಿಬ್ಬರಿಗೆ ಸಂಬಂಧಿಸಿದ ಕಂಟೆಂಟ್ ನಿಮ್ಮ ಬಳಿ ತಲುಪುವುದನ್ನು ನಾವು ಸುನೀಸ್ಚಿತಗೊಳಿಸುತ್ತಿದ್ದೇವೆ. ಆದರೆ, ಆದರೆ, ನಾವಿಬ್ಬರು ನಿಮ್ಮ ಬಳಿ ವಿನಂತಿಸುವುದೆನೆಂದರೆ. ನಮ್ಮ ಮಗಳಿಗೆ ಸಂಬಂಧಿಸಿದ ಯಾವುದೇ ಕಂಟೆಂಟ್ ನೀವು ತೆಗೆದುಕೊಳ್ಳಬೇಡಿ. (ಛಾಯಾಚಿತ್ರ ಕ್ಲಿಕ್ಕಿಸಬೇಡಿ) ಹಾಗೂ ಅದರ ಪ್ರಸಾರ ಮಾಡಬೇಡಿ. ನಮ್ಮ ಭಾವನೆಗಳಿಗೆ ನೀವು ಬೆಲೆ ನೀಡುವಿರಿ ಎಂದು ನಿರೀಕ್ಷಿಸುತ್ತೇವೆ ಮತ್ತು ನಾವು ನಿಮಗೆ ಚಿರಋಣಿಯಾಗಲಿದ್ದೇವೆ" ಎಂದು ಹೇಳಿದ್ದಾರೆ.

ಇದನ್ನು ಓದಿ- ವಿರುಷ್ಕಾ ದಂಪತಿ ಪುತ್ರಿ 'AnVi' ನಿವಾಸ ಹೇಗಿದೆ ಗೊತ್ತಾ?

ಜನವರಿ 11 ರಂದು ವಿರುಷ್ಕಾ ಪುತ್ರಿ ಪ್ರಪಂಚಕ್ಕೆ ಕಾಲಿಡುತ್ತಿದ್ದಂತೆ, ಮುದ್ದಾದ ಚಿಕ್ಕ ಮಗುವಿನ ಛಾಯಾಚಿತ್ರ ಹಂಚಿಕೊಂಡಿದ್ದ ವಿರಾಟ್ ಸಹೋದರ ವಿಕಾಸ್, ವಿರಾಟ್-ಅನುಷ್ಕಾ ಪೋಷಕರಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದರು ಎಂಬುದು ಇಲ್ಲಿ ಉಲ್ಲೇಖನೀಯ. ಆದರೆ, ಬಳಿಕ ಸಾಮಾಜಿಕ ಮಾಧ್ಯಮಗಳಲ್ಲಿ ಈ ಕುರಿತು ಸ್ಪಷ್ಟನೆ ನೀಡಿದ್ದ ವಿಕಾಸ್,ತಾವು ಹಂಚಿಕೊಂಡಿರುವ ಛಾಯಾಚಿತ್ರ ವಿರಾಟ್-ಅನುಷ್ಕಾ ಅವರ ನಿಜವಾದ ಛಾಯಾಚಿತ್ರ ಅಲ್ಲ ಹಾಗೂ ಮಾಧ್ಯಮಗಳಲ್ಲಿ ಅದನ್ನು ಪ್ರಸಾರ ಮಾಡಬಾರದು ಎಂದು ಮನವಿ ಮಾಡಿದ್ದರು.

ಇದನ್ನು ಓದಿ- Virushka ಮಗಳಿಗೆ ನಾಮಕರಣ ಮಾಡುವ ಸಂತ ಇವರು..! ಆ ಸಿದ್ದಪುರುಷ ಯಾರು..?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News