Deepika Padukone:'ಪಿಕು' ನಂತರ ಮತ್ತೆ ಅಮಿತಾಬ್ ಬಚ್ಚನ್ ಜೊತೆ ದೀಪಿಕಾ ಪಡುಕೋಣೆ

Deepika Padukone And Amitabh Bachchan In The Film The Intern: ದೀಪಿಕಾ ಪಡುಕೋಣೆ ಅವರ ದಿ ಇಂಟರ್ನ್ ಚಿತ್ರದಲ್ಲಿ ರಿಷಿ ಕಪೂರ್ ಬದಲಿಗೆ ಅಮಿತಾಬ್ ಬಚ್ಚನ್ ಕಾಣಿಸಿಕೊಳ್ಳಲಿದ್ದಾರೆ.

Written by - Yashaswini V | Last Updated : Apr 6, 2021, 11:40 AM IST
  • ದೀಪಿಕಾ ಪಡುಕೋಣೆ ಅವರ ದಿ ಇಂಟರ್ನ್ ಚಿತ್ರದಲ್ಲಿ ರಿಷಿ ಕಪೂರ್ ಬದಲಿಗೆ ಅಮಿತಾಬ್ ಬಚ್ಚನ್
  • ಇದು ಹಾಲಿವುಡ್‌ನ ಪ್ರಸಿದ್ಧ ಚಿತ್ರ ದಿ ಇಂಟರ್ನ್‌ನ ರಿಮೇಕ್ ಆಗಿದೆ
  • ಚಿತ್ರದ ಫಸ್ಟ್ ಲುಕ್ ಅನ್ನು ದೀಪಿಕಾ ಪಡುಕೋಣೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ
Deepika Padukone:'ಪಿಕು' ನಂತರ ಮತ್ತೆ ಅಮಿತಾಬ್ ಬಚ್ಚನ್ ಜೊತೆ ದೀಪಿಕಾ ಪಡುಕೋಣೆ   title=
Deepika Padukone will be seen with Amitabh Bachchan

ಮುಂಬೈ: ದೀಪಿಕಾ ಪಡುಕೋಣೆ ಅವರ ದಿ ಇಂಟರ್ನ್ (The Intern)  ಚಿತ್ರದಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಕಾಣಿಸಿಕೊಳ್ಳಲಿದ್ದಾರೆ. ಬಿಗ್ ಬಿ ಮತ್ತು ದೀಪಿಕಾ ಪಡುಕೋಣೆ ಮತ್ತೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವುದು ಅವರ ಅಭಿಮಾನಿಗಳ ಸಂತಸವನ್ನು ಇಮ್ಮಡಿಗೊಳಿಸಿದೆ.

ವಾಸ್ತವವಾಗಿ ಕಳೆದ ವರ್ಷ ಜನವರಿಯಲ್ಲಿ ದೀಪಿಕಾ ಪಡುಕೋಣೆ ತಮ್ಮ ಎರಡನೇ ಹೋಂ ಪ್ರೊಡಕ್ಷನ್ ಚಿತ್ರವನ್ನು ಘೋಷಿಸಿದರು.  ಇದು ಹಾಲಿವುಡ್‌ನ ಪ್ರಸಿದ್ಧ ಚಿತ್ರ ದಿ ಇಂಟರ್ನ್‌ನ ರಿಮೇಕ್ ಆಗಿದೆ. ಮೊದಲಿಗೆ ಈ ಚಿತ್ರದಲ್ಲಿ ಪ್ರಮುಖ ಪಾತ್ರಕ್ಕಾಗಿ ರಿಷಿ ಕಪೂರ್ (Rishi Kapoor) ಅವರನ್ನು ಆಯ್ಕೆ ಮಾಡಲಾಗಿತ್ತು. ಅವರ ಮರಣದ ನಂತರ, ಅಮಿತಾಬ್ ಬಚ್ಚನ್ ಆ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂದು ಹೇಳಲಾಗುತ್ತಿತ್ತು.

ಇದನ್ನೂ ಓದಿ - ಪುತ್ರನ ಹೆಸರು ಬಹಿರಂಗಪಡಿಸಿದ ಕಾಮಿಡಿ ಕಿಂಗ್ Kapil Sharma,

ಇದೀಗ ಹೊಸ ಪೋಸ್ಟರ್ ಹಂಚಿಕೊಳ್ಳುವ ಮೂಲಕ  ಚಿತ್ರದಲ್ಲಿ ಬಿಗ್ ಬಿ ಪ್ರವೇಶದ ಅಧಿಕೃತ ಪ್ರಕಟಣೆ ಮಾಡಲಾಗಿದೆ. ಈ ಹೊಸ ಪೋಸ್ಟರ್‌ನಲ್ಲಿ ದೀಪಿಕಾ ಪಡುಕೋಣೆ ಮತ್ತು ಅಮಿತಾಬ್ ಬಚ್ಚನ್ (Amitabh Bachchan) ಅವರ ನೆರಳಿನ ಚಿತ್ರವನ್ನು ತೋರಿಸಲಾಗಿದೆ.

ಚಿತ್ರದ ಫಸ್ಟ್ ಲುಕ್ ಅನ್ನು ದೀಪಿಕಾ ಪಡುಕೋಣೆ (Deepika Padukone) ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಭಾವನಾತ್ಮಕ ಸಾಲುಗಳನ್ನು ಹಂಚಿಕೊಂಡಿರುವ ದೀಪಿಕಾ ಪಡುಕೋಣೆ, 'ನನ್ನ ಅತ್ಯಂತ ವಿಶೇಷ ಸಹನಟನೊಂದಿಗೆ ಮತ್ತೆ ಕಾಣಿಸಿಕೊಳ್ಳುತ್ತಿರುವುದು ಒಂದು ಭಾಗ್ಯ.  #TheIntern ನ ಭಾರತೀಯ ರೂಪಾಂತರಕ್ಕೆ @amitabhbachchan ಅವರನ್ನು ಸ್ವಾಗತಿಸುತ್ತೇವೆ ಎಂದು ಇನ್ಸ್ಟಾಗ್ರಾಮ್ನಲ್ಲಿ ಬರೆದಿದ್ದಾರೆ.

ಇದನ್ನೂ ಓದಿ - ನಡುರಾತ್ರಿ Aishwarya Rai ಮನೆಗೆ Salman Khan ಭೇಟಿ ನೀಡಿದ್ದಾಗ ನಡೆದಿದ್ದೇನು?

ಈ ಮೊದಲೂ ಕೂಡ ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ ಬೆಳ್ಳಿತೆರೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. 'ಪಿಕು'ನಂತಹ ಸೂಪರ್ಹಿಟ್ ಚಿತ್ರದಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ಇಬ್ಬರೂ ತಂದೆ ಮತ್ತು ಮಗಳ ಪಾತ್ರದಲ್ಲಿ ಅಭಿಮಾನಿಗಳ ಮನ ಗೆದ್ದಿದ್ದರು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News