ನವದೆಹಲಿ : ಮುಂಬೈ ಡ್ರಗ್ಸ್ ಪ್ರಕರಣದಲ್ಲಿ (Mumbai drug case) ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಗೆ ಬಿಗ್ ರಿಲೀಫ್ ಸಿಕ್ಕಿದೆ. ಇದೀಗ ಆರ್ಯನ್ ಖಾನ್‌ಗೆ (Aryan Khan) ಪ್ರತಿ ಶುಕ್ರವಾರ ಎನ್‌ಸಿಬಿ (NCB) ಕಚೇರಿಗೆ ಹಾಜರಾಗುವುದರಿಂದ ವಿನಾಯಿತಿ ನೀಡಲಾಗಿದೆ. ಈ ಸಂಬಂಧ ಆರ್ಯನ್ ಖಾನ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಆದೇಶ ನೀಡಿದೆ.


COMMERCIAL BREAK
SCROLL TO CONTINUE READING

 ಆರ್ಯನ್ ಗೆ ವಿನಾಯಿತಿ :
ಮುಂಬೈ ಡ್ರಗ್ಸ್ ಪ್ರಕರಣದಲ್ಲಿ (Mumbai drug case) ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಗೆ ಮುಂಬೈ ಹೈಕೋರ್ಟ್ (Mumbai high court) ರಿಲೀಫ್ ನೀಡಿದೆ. ಆರ್ಯನ್ ಖಾನ್ ಅವರನ್ನು ಅಕ್ಟೋಬರ್ 28 ರಂದು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಅದರ ನಂತರ, ಜಾಮೀನಿನ ಷರತ್ತಿನಂತೆ ಆರ್ಯನ್ ಖಾನ್ (Aryan Khan) ಪ್ರತಿ ಶುಕ್ರವಾರ ಎನ್‌ಸಿಬಿ ಕಚೇರಿಗೆ ಹಾಜರಾಗಬೇಕಾಗಿತ್ತು. ಇದೀಗ ಮುಂಬೈ ಹೈಕೋರ್ಟ್ ಆರ್ಯನ್ ಖಾನ್‌ಗೆ ಪ್ರತಿ ಶುಕ್ರವಾರ ಎನ್‌ಸಿಬಿ (NCB) ಕಚೇರಿಗೆ ಹಾಜರಾಗುವ ವಿಚಾರದಿಂದ ವಿನಾಯಿತಿ ನೀಡಿದೆ. ಈ ಸಂಬಂಧ ಆರ್ಯನ್ ಖಾನ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು ಎಂದು ಹೇಳೋಣ. ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಆದೇಶ ನೀಡಿದೆ.


ಇದನ್ನೂ ಓದಿ : Miss Universe 2021: ಸ್ಪರ್ಧೆಯಲ್ಲಿ ಹರ್ನಾಜ್ ಸಂಧು ತೊಟ್ಟ ಗೌನ್ ವಿನ್ಯಾಸಗೊಳಿಸಿದ್ದು ಒಬ್ಬ ತೃತೀಯ ಲಿಂಗಿ!


ಇನ್ನೂ ಈ ನಿಯಮಗಳನ್ನು ಅನುಸರಿಸಬೇಕು :
ಪ್ರತಿ ಶುಕ್ರವಾರ ಎನ್‌ಸಿಬಿ ಕಚೇರಿಗೆ ಹಾಜರಾಗುವ ನಿಯಮದಿಂದ ಆರ್ಯನ್ ಖಾನ್‌ಗೆ ವಿನಾಯಿತಿ ನೀಡಲಾಗಿದೆ. ಆದರೆ, ಪ್ರಕರಣದ ತನಿಖೆ ನಡೆಸುತ್ತಿರುವ ದೆಹಲಿ ಎಸ್‌ಐಟಿ (SIT) ಆರ್ಯನ್ ಖಾನ್‌ಗೆ ಸಮನ್ಸ್ ನೀಡಿದಾಗಲೆಲ್ಲಾ ಅವರು ವಿಚಾರಣೆಗೆ ಹಾಜರಾಗಬೇಕು ಎಂದು ನ್ಯಾಯಾಲಯ ಹೇಳಿದೆ. ಅಲ್ಲದೆ, ಆರ್ಯನ್ ಖಾನ್ ಮುಂಬೈ ತೊರೆಯಲು ಬಯಸಿದರೆ, ತನಿಖಾಧಿಕಾರಿಗಳಿಗೆ ತಿಳಿಸುವುದು ಕಡ್ಡಾಯವಾಗಿದೆ. 


ಈ ಹಿಂದೆ, ಎನ್‌ಸಿಬಿ ಕಚೇರಿಗೆ ಹೋಗುವ ವೇಳೆ, ಮಾಧ್ಯಮ ಸಿಬ್ಬಂದಿ ಸೇರಿದಂತೆ ಅಪಾರ ಸಂಖ್ಯೆಯ ಜನರು ಸೇರಿರುತ್ತಾರೆ   ಎಂದು ಆರ್ಯನ್ ಖಾನ್ ತಮ್ಮ ಅರ್ಜಿಯಲ್ಲಿ ದೂರಿದ್ದರು. ಇಂತಹ ಪರಿಸ್ಥಿತಿಯಲ್ಲಿ ಕಚೇರಿಯ ಒಳಗೆ ಮತ್ತು ಹೊರಗೆ ಹೋಗುವ ವೇಳೆ ತೊಂದರೆಯಾಗುತ್ತದೆ ಎಂದು ತಮ್ಮ ಸಮಸ್ಯೆಯನ್ನು ಅರ್ಜಿಯಲ್ಲಿ ಹೇಳಿಕೊಂಡಿದ್ದರು.  ಇದೀಗ ಇಂದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶಿಸಿದೆ.


ಇದನ್ನೂ ಓದಿ : Good News! ಇದ್ದಕ್ಕಿದ್ದಂತೆ ತನ್ನ ಪ್ಲಾನ್ ಗಳ ಬೆಲೆ ಇಳಿಕೆ ಮಾಡಿದ Netflix, ಇಲ್ಲಿದೆ Price List


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.