/kannada/photo-gallery/shukra-gochar-laxmi-narayana-yoga-bless-this-zodiac-signs-with-huge-wealth-and-success-221344 Laxmi Narayana Yoga: ಈ ರಾಶಿಯವರಿಗೆ ಭಾಗ್ಯೋದಯ, ಸಿಗಲಿದೆ ಅಪಾರ ಕೀರ್ತಿ ಯಶಸ್ಸು Laxmi Narayana Yoga: ಈ ರಾಶಿಯವರಿಗೆ ಭಾಗ್ಯೋದಯ, ಸಿಗಲಿದೆ ಅಪಾರ ಕೀರ್ತಿ ಯಶಸ್ಸು 221344

ನವದೆಹಲಿ: Netflix ಇದ್ದಕ್ಕಿದ್ದಂತೆ ಭಾರತದಲ್ಲಿ ತನ್ನ ಚಂದಾದಾರಿಕೆ ಬೆಲೆಗಳನ್ನು ಕಡಿತಗೊಳಿಸಿದೆ (Netflix Is Now Cheaper In India). ಕಂಪನಿಯು ದೇಶದಲ್ಲಿ ತನ್ನ ಹೊಸ ಬೆಲೆಗಳನ್ನು ಘೋಷಿಸಿದ್ದು, ಅದು ಇದೀಗ ತಿಂಗಳಿಗೆ 199 ರೂ ಬದಲಿಗೆ 149 ರೂ (Netflix Rs 149 Plan) ನಿಂದ ಪ್ರಾರಂಭವಾಗಲಿದೆ.  ಹೊಸ ಯೋಜನೆಗಳು ಎಲ್ಲಾ ಗ್ರಾಹಕರಿಗೆ ಅನ್ವಯಿಸಲಿವೆ. ದೇಶದಲ್ಲಿ ಹೆಚ್ಚಿನ ಚಂದಾದಾರರನ್ನು ಆಕರ್ಷಿಸಲು ನೆಟ್‌ಫ್ಲಿಕ್ಸ್ ಈ ಕ್ರಮ ಕೈಗೊಂಡಿದೆ. ಇದುವರೆಗೆ ಭಾರತೀಯ ಬಳಕೆದಾರರಿಗೆ ಇದು ಅತ್ಯಂತ ದುಬಾರಿ ಸ್ಟ್ರೀಮಿಂಗ್ ಸೇವೆಯಾಗಿತ್ತು. ಹೊಸ ಯೋಜನೆಗಳೊಂದಿಗೆ, ನೆಟ್‌ಫ್ಲಿಕ್ಸ್ ತನ್ನ ಯೋಜನೆಗಳನ್ನು ದೇಶದಲ್ಲಿ ಲಭ್ಯವಿರುವ ಇತರ ಸ್ಟ್ರೀಮಿಂಗ್ ಸೇವೆಗಳೊಂದಿಗೆ ವ್ಯಾಪಕ ಶ್ರೇಣಿಯಲ್ಲಿ ತರಲು ನಿರ್ಧರಿಸಿದೆ.

ರೂ.199 ಮೊಬೈಲ್ ಪ್ಲಾನ್ ಈಗ ರೂ.149ಕ್ಕೆ ಲಭ್ಯವಾಗಲಿದೆ. ಇದರ ಹೊರತಾಗಿ, ರೂ 499 ರ ಮೂಲ ಯೋಜನೆಯು ಈಗ ರೂ.199ಕ್ಕೆ ಸಿಗಲಿದೆ.ತಿಂಗಳಿಗೆ ರೂ.649ಕ್ಕೆ ಸಿಗುತ್ತಿದ್ದ ಪ್ಲಾನ್ (ಸ್ಟ್ಯಾಂಡರ್ಡ್) ಇನ್ಮುಂದೆ ರೂ.499 ಕ್ಕೆ ಮತ್ತು ರೂ.799 ಪ್ಲಾನ್ (ಪ್ರೀಮಿಯಂ) ಇನ್ನು ಮುಂದೆ ರೂ.649ಕ್ಕೆ ಸಿಗಲಿದೆ. ಹೊಸ ಬೆಲೆಯು ಈಗ ಅಮೆಜಾನ್ ಪ್ರೈಮ್ ವಿಡಿಯೋ, ಡಿಸ್ನಿ+ ಹಾಟ್‌ಸ್ಟಾರ್ ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ದೇಶದ ಇತರ ಸ್ಟ್ರೀಮಿಂಗ್ ಸೇವೆಗಳಿಗೆ ಉತ್ತಮ ಸ್ಪರ್ಧೆಯನ್ನು ನೀಡಲಿವೆ. 

ನೆಟ್‌ಫ್ಲಿಕ್ಸ್‌ನ ರೂ 149 ಯೋಜನೆ
ಈ ಯೋಜನೆಗಳ ಪ್ರಯೋಜನಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ನೆಟ್‌ಫ್ಲಿಕ್ಸ್ ಮೊಬೈಲ್ ಪ್ಲಾನ್ ಈಗ ರೂ 149 ರಿಂದ ಪ್ರಾರಂಭವಾಗುತ್ತದೆ - ಇದು 480p ರೆಸಲ್ಯೂಶನ್ ಹೊಂದಿರುವ ಮೊಬೈಲ್ ಅಥವಾ ಟ್ಯಾಬ್ಲೆಟ್‌ನಲ್ಲಿ ಮಾತ್ರ ನೆಟ್‌ಫ್ಲಿಕ್ಸ್ ಅನ್ನು ಪ್ಲೇ ಮಾಡುತ್ತದೆ. ಈ ಯೋಜನೆಯಲ್ಲಿ, ಖಾತೆಯನ್ನು ಒಂದು ಸಮಯದಲ್ಲಿ ಒಂದು ಸಾಧನದಿಂದ ಮಾತ್ರ ಪ್ರವೇಶಿಸಬಹುದು.

ನೆಟ್‌ಫ್ಲಿಕ್ಸ್‌ನ ರೂ 199 ಯೋಜನೆ
ರೂ 199 ಯೋಜನೆಯು 480p ರೆಸಲ್ಯೂಶನ್ ಅನ್ನು ಸಹ ಪಡೆಯುತ್ತದೆ, ಆದರೆ ಬಳಕೆದಾರರು ಕಂಪ್ಯೂಟರ್‌ಗಳು ಮತ್ತು ಟಿವಿಗಳಲ್ಲಿ ಖಾತೆಯನ್ನು ಬಳಸಬಹುದು. ಇದರಲ್ಲಿ, ಸಾಧನದ ಮಿತಿಯು ಒಂದೇ ಆಗಿರುತ್ತದೆ.

ಇದನ್ನೂ ಓದಿ-Young Sun Like Star: ಸೂರ್ಯನ ರೀತಿ ಇರುವ ಯುವ ತಾರೆಯ ಮೇಲ್ಮೈ ಮೇಲೆ ಭಾರಿ ಸ್ಫೋಟ, ಇದು ಭೂಮಿಗೆ ಎಚ್ಚರಿಕೆಯ ಕರೆಗಂಟೆಯೇ?

ನೆಟ್‌ಫ್ಲಿಕ್ಸ್‌ನ ರೂ 499 ಪ್ಲಾನ್
ಈ ಸ್ಟ್ಯಾಂಡರ್ಡ್ ಪ್ಲಾನ್ ಇದೀಗ ರೂ 499ಕ್ಕೆ ಸಿಗಲಿದೆ ಮತ್ತು 1080p ರೆಸಲ್ಯೂಶನ್‌ನೊಂದಿಗೆ ಒಂದು ಸಮಯದಲ್ಲಿ ಎರಡು ಸಾಧನಗಳಿಗೆ ಬೆಂಬಲದೊಂದಿಗೆ ಇದು ಬರುತ್ತದೆ. ಈ ಯೋಜನೆಯ ಗ್ರಾಹಕರು ಯಾವುದೇ ಸಾಧನದಲ್ಲಿ ವಿಷಯವನ್ನು ವೀಕ್ಷಿಸಬಹುದು, ಅದು ಮೊಬೈಲ್, ಟ್ಯಾಬ್ಲೆಟ್, ಕಂಪ್ಯೂಟರ್ ಅಥವಾ ಟಿವಿ.

ಇದನ್ನೂ ಓದಿ-BSNL ನ 599 ರೂ. ಪ್ಲಾನ್ ಗೆ ಸಾಟಿಯೇ ಇಲ್ಲ, 84 ದಿನಗಳವರೆಗೆ ನಿತ್ಯ ಸಿಗಲಿದೆ 5GB ಡಾಟಾ

ನೆಟ್‌ಫ್ಲಿಕ್ಸ್‌ನ ರೂ 649 ಪ್ಲಾನ್
ಪ್ರೀಮಿಯಂ ನೆಟ್‌ಫ್ಲಿಕ್ಸ್ ಯೋಜನೆಯು ಇದೀಗ ರೂ 649 ಸಿಗಲಿದೆ ಮತ್ತು ಒಂದು ಸಮಯದಲ್ಲಿ ನಾಲ್ಕು ಸಾಧನಗಳನ್ನು ಇದು ಬೆಂಬಲಿಸುತ್ತದೆ. ಈ ಯೋಜನೆಗೆ ಚಂದಾದಾರರು 4K ರೆಸಲ್ಯೂಶನ್ ವರೆಗೆ ಕಂಟೆಂಟ್ ಅನ್ನು ವೀಕ್ಷಿಸಬಹುದು ಮತ್ತು ಎಲ್ಲಾ ಸಾಧನಗಳನ್ನು ಬಳಸಬಹುದು - ಮೊಬೈಲ್, ಅಥವಾ ಟ್ಯಾಬ್ಲೆಟ್, ಅಥವಾ ಕಂಪ್ಯೂಟರ್, ಅಥವಾ ಟಿವಿ.

ಇದನ್ನೂ ಓದಿ-Flipkart Realme Festive Days: ಈ 5G Smartphone ಮೇಲೆ ಸಿಗಲಿದೆ 20 ಸಾವಿರಗಳ ರಿಯಾಯಿತಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Section: 
English Title: 
Good News! netflix india cuts prices across its streaming plans now start at 149 per month check full price list
News Source: 
Home Title: 

Good News! ಇದ್ದಕ್ಕಿದ್ದಂತೆ ತನ್ನ ಯೋಜನೆಗಳ ಬೆಲೆ ಇಳಿಕೆ ಮಾಡಿದ Netflix, ಇಲ್ಲಿದೆ Price List

Good News! ಇದ್ದಕ್ಕಿದ್ದಂತೆ ತನ್ನ ಪ್ಲಾನ್ ಗಳ ಬೆಲೆ ಇಳಿಕೆ ಮಾಡಿದ Netflix, ಇಲ್ಲಿದೆ Price List
Caption: 
Netflix Is Now Cheaper In India (File Photo)
Yes
Is Blog?: 
No
Tags: 
Facebook Instant Article: 
Yes
Highlights: 

ನೆಟ್‌ಫ್ಲಿಕ್ಸ್ ಭಾರತದಲ್ಲಿ ತನ್ನ ಚಂದಾದಾರಿಕೆ ಬೆಲೆಗಳನ್ನು ಕಡಿತಗೊಳಿಸಿದೆ.

ರೂ.199 ಪ್ಲಾನ್ ಇದೀಗ ರೂ.149ಕ್ಕೆ ಲಭ್ಯವಾಗಲಿದೆ.

ರೂ 799 ಪ್ಲಾನ್ (ಪ್ರೀಮಿಯಂ) ಇನ್ನು ಮುಂದೆ 649 ರೂ.ಗೆ ಸಿಗಲಿದೆ.

Mobile Title: 
Good News! ಇದ್ದಕ್ಕಿದ್ದಂತೆ ತನ್ನ ಯೋಜನೆಗಳ ಬೆಲೆ ಇಳಿಕೆ ಮಾಡಿದ Netflix, ಇಲ್ಲಿದೆ Price List
Nitin Tabib
Publish Later: 
No
Publish At: 
Tuesday, December 14, 2021 - 12:57
Created By: 
Nitin Tabib
Updated By: 
Nitin Tabib
Published By: 
Nitin Tabib
Request Count: 
1
Is Breaking News: 
No