ಬೆಂಗಳೂರು: ಏಪ್ರಿಲ್‌ 24ರಂದು ನಟ ಸಾರ್ವಭೌಮ ಡಾ. ರಾಜ್‌ ಕುಮಾರ್‌ ಜನ್ಮದಿನ. ಈ ಹಿನ್ನೆಲೆಯಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಶಾಲಾ ಮಕ್ಕಳಿಗೆ ಪುಸ್ತಕಗಳನ್ನು ವಿತರಿಸಿ ಸಾಮಾಜಿಕ ಕಾರ್ಯಗೈದಿದ್ದಾರೆ. ಭಾರತಿನಗರ ಸಿಟಿಜನ್ ಫೋರಂ ವತಿಯಿಂದ ಈ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದ್ದು, ನೂರಾರು ಮಕ್ಕಳಿಗೆ ಪುಸ್ತಕದ ಜೊತೆಗೆ ಸಿಹಿಯನ್ನು ಹಂಚಲಾಗಿದೆ. 


COMMERCIAL BREAK
SCROLL TO CONTINUE READING

ಇದನ್ನು ಓದಿ: ಈ ನಟಿ ಜೊತೆಗಿನ ರೋಮ್ಯಾನ್ಸ್ ವಿಚಾರದಲ್ಲಿ ಸುದ್ದಿಯಾದ ಹೃತಿಕ್ ರೋಶನ್...!


ಅಣ್ಣಾವ್ರ 94ನೇ ವರ್ಷದ ಹುಟ್ಟುಹಬ್ಬಕ್ಕೆ ವಿಶೇಷ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದ್ದು, ಒಂದು ದಿನ‌ ಮುಂಚಿತವಾಗಿ ಅಭಿಮಾನಿಗಳ ಜೊತೆ ಸೇರಿಕೊಂಡು ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅವರು ಪುಸ್ತಕ ವಿತರಣೆ ಮಾಡಿದ್ದಾರೆ. 


ಬಡ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ ಮಾಡುವ ಮೂಲಕ ಡಾ. ರಾಜ್‌ಕುಮಾರ್‌ ಅವರ ಹುಟ್ಟುಹಬ್ಬಕ್ಕೆ ಚಾಲನೆ ನೀಡಲಾಗಿದೆ. ಸದಾಶಿವನಗರದ ಪುನೀತ್ ನಿವಾಸದಲ್ಲಿ ಸಾಮಾಜಿಕ‌ ಕಾರ್ಯಕ್ಕೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಕೈ ಜೋಡಿಸಿದ್ದಾರೆ. 


ನಟ ಸಾರ್ವಭೌಮ ಡಾ. ರಾಜ್‌ಕುಮಾರ್ ಜನಿಸಿದ್ದು ಏಪ್ರಿಲ್ 24, 1929ರಲ್ಲಿ. ಕನ್ನಡ ಚಿತ್ರರಂಗದ ಧ್ರುವತಾರೆ ರಾಜ್‌ ಅವರು ಕನ್ನಡಿಗರು ಕಂಡ ಅಪ್ರತಿಮ ನಟ, ಗಾಯಕ. ಸುಮಾರು ಐದು ದಶಕಗಳ ಕಾಲ ಚಿತ್ರರಂಗವನ್ನಾಳಿದ ಡಾ. ರಾಜ್‌ ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ. ಜೊತೆಗೆ ಹಂಪಿ ವಿಶ್ವವಿದ್ಯಾಲಯದಿಂದ ನಾಡೋಜ ಪ್ರಶಸ್ತಿ, ಚಿತ್ರರಂಗದಲ್ಲಿನ ಜೀವಮಾನದ ಸಾಧನೆಗಾಗಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ, ಭಾರತ ಸರ್ಕಾರದ ಮಹೋನ್ನತ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಭೂಷಣ ಪ್ರಶಸ್ತಿಗಳು ರಾಜ್‌ ಅವರಿಗೆ ಸಂದಿವೆ. ಇನ್ನು ಕರ್ನಾಟಕ ಸರ್ಕಾರದಿಂದ ʼಕರ್ನಾಟಕ ರತ್ನʼ ಎಂಬ ಬಿರುದಿಗೆ ಭಾಜನರಾಗಿದ್ದರು. 


ಇದನ್ನು ಓದಿ: Malabar Gold: ಬಿಂದಿ ಇಲ್ಲದೆ ಕಾಣಿಸಿಕೊಂಡ ಕರೀನಾ, ಮಲಬಾರ್ ಗೋಲ್ಡ್ ಬಹಿಷ್ಕಾರಕ್ಕೆ ಆಗ್ರಹ


ಇನ್ನು 2006 ಏಪ್ರಿಲ್ 12 ರಂದು ಬೆಂಗಳೂರಿನಲ್ಲಿ ಹೃದಯಾಘಾತದಿಂದ ಮರಣ ಹೊಂದಿದ ಡಾ. ರಾಜ್‌ಕುಮಾರ್‌ ಅವರು ಕನ್ನಡ ನಾಡನ್ನು ತ್ಯಜಿಸಿ ಇಹಲೋಕ ಸೇರಿದರು.  


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.