ನವದೆಹಲಿ: ಅನೇಕ ಬ್ರಾಂಡ್‌ಗಳು ತಮ್ಮ ಜಾಹೀರಾತಿಗೆ ಸಂಬಂಧಿಸಿದಂತೆ ಆಗಾಗ್ಗೆ ವಿವಾದಕ್ಕೀಡಾಗುತ್ತವೆ. ಮಲಬಾರ್ ಗೋಲ್ಡ್ ಮತ್ತೊಮ್ಮೆ ಜಾಹೀರಾತು ಕಾರಣ ವಿವಾದಕ್ಕೆ ಗುರಿಯಾಗಿದೆ. ಅಕ್ಷಯ ತೃತೀಯಕ್ಕಾಗಿ ರೂಪಿಸಿರುವ ಮಲಬಾರ್ ಗೋಲ್ಡ್ ಹೊಸ ಜಾಹೀರಾತಿಗೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾದಲ್ಲಿ #NobindiNoBusiness ಮತ್ತು #BoycottMalabarGold ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಿವೆ. ಈ ಜಾಹೀರಾತಿನಿಂದಾಗಿ ಟ್ವಿಟರ್ ಬಳಕೆದಾರರು ಬಾಲಿವುಡ್ ನಟಿ ಕರೀನಾ ಕಪೂರ್ ಅವರನ್ನೂ ಟಾರ್ಗೆಟ್ ಮಾಡುತ್ತಿದ್ದಾರೆ.
ಏನಿದು ಮಲಬಾರ್ ಗೋಲ್ಡ್ ಜಾಹೀರಾತು ವಿವಾದ?
ಮಲಬಾರ್ ಗೋಲ್ಡ್ ಅಕ್ಷಯ ತೃತೀಯಕ್ಕೆ ಸಂಬಂಧಿಸಿದಂತೆ ಆಭರಣಗಳ ಹೊಸ ಜಾಹೀರಾತನ್ನು ಬಿಡುಗಡೆ ಮಾಡಿದೆ, ಇದರಲ್ಲಿ ಕರೀನಾ ಕಪೂರ್ ಕಾಣಿಸಿಕೊಂಡಿದ್ದಾರೆ. ಆದರೆ, ಕರೀನಾ ಈ ಜಾಹೀರಾತಿನಲ್ಲಿ ಬಿಂದಿ ಹಾಕಿಲ್ಲ ಎಂದು ಟ್ವಿಟರ್ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ವ್ಯಾಪಕ ಟೀಕಿಗೆ ಗುರಿಯಾಗಿದೆ. ಅನೇಕರು ಮಲಬಾರ್ ಗೋಲ್ಡ್ ಜಾಹೀರಾತನ್ನು ಟೀಕಿಸಿದ್ದು, ಇದು ಹಿಂದೂ ಸಂಪ್ರದಾಯ ಮತ್ತು ಹಬ್ಬಗಳನ್ನು ಕಡೆಗಣಿಸುವ ಪ್ರಯತ್ನವೆಂದು ಕಿಡಿಕಾರಿದ್ದಾರೆ. ಇದಲ್ಲದೇ ಮಲಬಾರ್ ಚಿನ್ನವನ್ನು ಬಹಿಷ್ಕರಿಸುವಂತೆ ಆಗ್ರಹಿಸಿದ್ದಾರೆ. ಈ ಜಾಹೀರಾತಿನಲ್ಲಿ ಕರೀನಾ ಏಕೆ ಬಿಂದಿಯನ್ನು ಧರಿಸಿಲ್ಲ? ಇದು ಹಿಂದೂ ಧರ್ಮಕ್ಕೆ ಮಾಡಿದ ಅವಮಾನ ಅಂತಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
#Boycott_MalabarGold
Being 100 crore #Hindus in India ?Why this companies have to be always insult the Religious sentiments ?
In this ad #KareenaKapoor is shown without a bindi #No_Bindi_No_Business pic.twitter.com/64CTHUXJ9M
— Saheel Bobde (@SaheelBobde) April 22, 2022
ಇದನ್ನೂ ಓದಿ: Upendra: ‘ಸಿನಿಮಾದಲ್ಲಿ ಸಿಗರೇಟ್ ಸೇವನೆ, ಜೂಜಿನ ಜಾಹೀರಾತು ತಪ್ಪು, ಸರ್ಕಾರದ ಅನುಮತಿ ಸರಿಯೇ..?’
ಮಲಬಾರ್ ಗೋಲ್ಡ್ ಬಹಿಷ್ಕಾರಕ್ಕೆ ಆಗ್ರಹ
ಅಕ್ಷಯ ತೃತೀಯದಂದು ಹಿಂದೂ ಸಮುದಾಯದವರು ಚಿನ್ನದ ಖರೀದಿಗೆ ಮಂಗಳಕರವೆಂದು ಪರಿಗಣಿಸಿದ್ದಾರೆ. ಈ ಜಾಹೀರಾತಿನಲ್ಲಿ ಕರೀನಾ ಗುಲಾಬಿ ಬಣ್ಣದ ಲೆಹಂಗಾ ಧರಿಸಿ, ವಿಸ್ತಾರವಾದ ಡೈಮಂಡ್ ನೆಕ್‌ಪೀಸ್, ಕಿವಿಯೋಲೆಗಳೊಂದಿಗೆ ಕಾಣಿಸಿಕೊಂಡಿದ್ದಾರೆ. ಆದರೆ ಹಣೆ ಮೇಲೆ ಬಿಂದಿ ಮಾತ್ರ ಇಲ್ಲ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
Bindi as believed by Hindus is more than just a red dot.
If brands like @Malabartweets do not try to understand or intentionally ignore it, then it is time that Hindus need to show them the door ! #Boycott_MalabarGold #No_Bindi_No_Business pic.twitter.com/wdanuIGkT1
— Sanatan Prabhat (Kannada) (@Sanatan_Prabhat) April 22, 2022
ಜಾಹೀರಾತಿನ ವಿಡಿಯೋ ಕಾಣಿಸಿಕೊಂಡ ನಂತರ ಟ್ವಿಟರ್ ಬಳಕೆದಾರರು ಮಲಬಾರ್ ಗೋಲ್ಡ್ ಅನ್ನು ಬಹಿಷ್ಕರಿಸಲು ಒತ್ತಾಯಿಸಿದ್ದಾರೆ. #Boycott_MalabarGold ಮತ್ತು #No_Bindi_No_Business ಎಂಬ ಹ್ಯಾಶ್‌ಟ್ಯಾಗ್‌ಗಳೊಂದಿಗೆ ಟ್ವೀಟ್ ಮಾಡಲು ಪ್ರಾರಂಭಿಸಿದ್ದಾರೆ. ‘ಮಲಬಾರ್ ಗೋಲ್ಡ್‌ನ ಹೊಸ ಜಾಹೀರಾತು ಹಿಂದೂ ಹಬ್ಬಗಳನ್ನು ಗೇಲಿ ಮಾಡುವುದಕ್ಕೆ ಹೊಸ ಉದಾಹರಣೆಯಾಗಿದೆ’ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಒಟಿಟಿಯಲ್ಲಿ ಯಾವಾಗ ಬರುತ್ತೆ ಕೆಜಿಎಫ್ ಚಾಪ್ಟರ್ 2..?
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.