ಕೆಜಿಎಫ್ 2 ಸಿನಿಮಾ ನೋಡಿ ಉಘೇ ಉಘೇ ಎಂದ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ..!

ವಿಶ್ವದಾದ್ಯಂತ ಕೆಜಿಎಫ್ 2 ಚಿತ್ರದ ಕುರಿತಾಗಿ ಹಾಗೂ ಭಾರತೀಯ ಸಿನಿ ರಂಗದ ನಟರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈಗ ಅಂತವರ ಸಾಲಿಗೆ ತೆಲುಗು ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಕೂಡ ಸೇರ್ಪಡೆಯಾಗಿದ್ದಾರೆ. ಈಗಾಗಲೇ ಬಾಕ್ಸ್ ಆಫೀಸ್ ನಲ್ಲಿ ಈ ಚಿತ್ರ ಸಾಕಷ್ಟು ಸದ್ದು ಮಾಡುತ್ತಿದೆ.ಅದರಲ್ಲೂ ಹಿಂದಿ ಆವೃತ್ತಿಯಲ್ಲಂತೂ ಈ ಚಿತ್ರವು ಎಲ್ಲಾ ದಾಖಲೆಗಳನ್ನು ಮುರಿಯುತ್ತಿದೆ.ಬಾಕ್ಸ್ ಆಫೀಸ್ ನಲ್ಲಿ ಇನ್ನೂ ಹಲವಾರು ವಾರಗಳ ಕಾಲ ಈ ಚಿತ್ರವು ಅಶ್ವಮೇಧ ಕುದುರೆಯಂತೆ ಬಾಕ್ಸ್ ಆಫೀಸ್ ನಲ್ಲಿ ಮುನ್ನುಗ್ಗಲಿದೆ.

Written by - Manjunath Naragund | Last Updated : Apr 22, 2022, 06:47 PM IST
  • ಹಿಂದಿ ಆವೃತ್ತಿಯಲ್ಲಂತೂ ಈ ಚಿತ್ರವು ಎಲ್ಲಾ ದಾಖಲೆಗಳನ್ನು ಮುರಿಯುತ್ತಿದೆ.
  • ಬಾಕ್ಸ್ ಆಫೀಸ್ ನಲ್ಲಿ ಇನ್ನೂ ಹಲವಾರು ವಾರಗಳ ಕಾಲ ಈ ಚಿತ್ರವು ಅಶ್ವಮೇಧ ಕುದುರೆಯಂತೆ ಬಾಕ್ಸ್ ಆಫೀಸ್ ನಲ್ಲಿ ಮುನ್ನುಗ್ಗಲಿದೆ.
ಕೆಜಿಎಫ್ 2 ಸಿನಿಮಾ ನೋಡಿ ಉಘೇ ಉಘೇ ಎಂದ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ..! title=

ಬೆಂಗಳೂರು: ವಿಶ್ವದಾದ್ಯಂತ ಕೆಜಿಎಫ್ 2 ಚಿತ್ರದ ಕುರಿತಾಗಿ ಹಾಗೂ ಭಾರತೀಯ ಸಿನಿ ರಂಗದ ನಟರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈಗ ಅಂತವರ ಸಾಲಿಗೆ ತೆಲುಗು ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಕೂಡ ಸೇರ್ಪಡೆಯಾಗಿದ್ದಾರೆ. ಈಗಾಗಲೇ ಬಾಕ್ಸ್ ಆಫೀಸ್ ನಲ್ಲಿ ಈ ಚಿತ್ರ ಸಾಕಷ್ಟು ಸದ್ದು ಮಾಡುತ್ತಿದೆ.ಅದರಲ್ಲೂ ಹಿಂದಿ ಆವೃತ್ತಿಯಲ್ಲಂತೂ ಈ ಚಿತ್ರವು ಎಲ್ಲಾ ದಾಖಲೆಗಳನ್ನು ಮುರಿಯುತ್ತಿದೆ.ಬಾಕ್ಸ್ ಆಫೀಸ್ ನಲ್ಲಿ ಇನ್ನೂ ಹಲವಾರು ವಾರಗಳ ಕಾಲ ಈ ಚಿತ್ರವು ಅಶ್ವಮೇಧ ಕುದುರೆಯಂತೆ ಬಾಕ್ಸ್ ಆಫೀಸ್ ನಲ್ಲಿ ಮುನ್ನುಗ್ಗಲಿದೆ.

ಇದನ್ನೂ ಓದಿ: ಬಾಕ್ಸ್ಆಫೀಸ್‌ನಲ್ಲಿ ಕೆಜಿಎಫ್-2 ತೂಫಾನ್: ಕೇವಲ 6 ದಿನಕ್ಕೆ 676 ಕೋಟಿ ರೂ. ಗಳಿಕೆ!

ಈ ಚಿತ್ರದ ಸಿನಿಮಾಟೋಗ್ರಾಫಿಯಿಂದ ಹಿಡಿದು ಮ್ಯೂಸಿಕ್ವರೆಗೆ ಚಿತ್ರದ ಶ್ರೀಮಂತಿಕೆ ತಾಂತ್ರಿಕವಾಗಿ ಉತ್ಕೃಷ್ಟ ಮಟ್ಟದಲ್ಲಿದ್ದರೆ ಇನ್ನೂ ನಟನೆಯಲ್ಲಿ ಯಶ್ ರಾಕಿ ಭಾಯ್ ಆಗಿ ಲೀಲಾಜಾಲವಾಗಿ ನಟಿಸಿದ್ದಾರೆ.ಚಿತ್ರದುದ್ದಕ್ಕೂ ಅವರ ಮ್ಯಾನರಿಸಂ ಹಾಗೂ ಡೈಲಾಗ್ ಡೆಲಿವರಿ ಮೂಲಕ ಗಮನ ಸೆಳೆಯುತ್ತಾರೆ.ಇನ್ನೊಂದೆಡೆಗೆ ಅಧೀರಾ ಪಾತ್ರವನ್ನು ನಿರ್ವಹಿಸಿರುವ ಸಂಜಯ್ ದತ್ ಹಾಲಿವುಡ್ ನಲ್ಲಿರುವ ಅವೆಂಜರ್ಸ್ ಎಂಡ್ ಗೇಮ್ ನಲ್ಲಿರುವ ಥೈನೋಸ್ ನ ಧೈತ್ಯ ಪಾತ್ರವನ್ನು ನೆನಪಿಸುತ್ತದೆ.ಪ್ರಧಾನ ಮಂತ್ರಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ರವೀನಾ ಟಂಡನ್ ಅವರನ್ನು ಇದುವರೆಗೆ ನೋಡಿರದ ಅವತಾರದಲ್ಲಿ ಈ ಚಿತ್ರದಲ್ಲಿ ಕಾಣುತ್ತೇವೆ.ಇನ್ನೂ ಶ್ರೀನಿಧಿ ಶೆಟ್ಟಿ ನಾಯಕ ನಟಿಯಾಗಿ ಇಷ್ಟವಾಗುತ್ತಾರೆ.No description available.

ಹೀಗೆ ಎಲ್ಲಾ ವಿಧದಲ್ಲೂ ಈ ಸಿನಿಮಾ ಸೈ ಎನಿಸಿಕೊಂಡಿದೆ.ಈಗ ತೆಲುಗು ನಟ ಅಲ್ಲು ಅರ್ಜುನ್ ಅವರು ಈಗ ಈ ಚಿತ್ರವನ್ನು ತೀವ್ರವಾಗಿ ಮೆಚ್ಚಿಕೊಂಡಿದ್ದಾರೆ.ಈ ಕುರಿತಾಗಿ ಅವರು ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿರುವ ಅವರು" ಕೆಜಿಎಫ್ 2 ಚಿತ್ರಕ್ಕೆ ಅಭಿನಂದನೆಗಳು, ಸ್ವಾಗ್ ನಿಂದ ಕೂಡಿರುವ ಯಶ್ ಅವರ ನಟನೆ ಮತ್ತು ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ ಅವರ ಮಾಂತ್ರಿಕ ಉಪಸ್ಥಿತಿಯನ್ನು ಇಲ್ಲಿ ನೋಡಬಹುದು.

ಇದನ್ನೂ ಓದಿ: ಗಲ್ಲಾಪೆಟ್ಟಿಗೆ ಕೊಳ್ಳೆಹೊಡೆದ KGF2.. 7 ದಿನಕ್ಕೆ 723.15 ಕೋಟಿ ವರ್ಲ್ಡ್ ವೈಡ್ ಕಲೆಕ್ಷನ್‌!

ರವಿ ಬಸರೂರ್ ಹಾಗೂ ಭುವನಗೌಡ ಅವರು ನೀಡಿರುವ ಹಿನ್ನಲೆಯ ಸಂಗೀತ ಹಾಗೂ ಅತ್ಯುತ್ತಮ ದೃಶ್ಯಗಳು ಗಮನ ಸೆಳೆಯುತ್ತವೆ.ಎಲ್ಲಾ ತಂತ್ರಜ್ಞರಿಗೆ ನನ್ನ ಗೌರವಪೂರಕ ವಂದನೆಗಳು.ಇದನ್ನು ಪ್ರಶಾಂತ್ ನೀಲ್ ಗಾರು ಅವರು ಬಿತ್ತರಿಸಿದ ಅದ್ಬುತ ಪ್ರದರ್ಶನವೆಂದು ಹೇಳಬಹುದು.ಅವರ ದೃಷ್ಟಿಕೋನ ಮತ್ತು ನಂಬಿಕೆಗೆ ನನ್ನ ಗೌರವಪೂರಕ ವಂದನೆಗಳು.ಅದ್ಬುತ ಸಿನಿಮೀಯ ಅನುಭವಕ್ಕಾಗಿ ಮತ್ತು ಭಾರತೀಯ ಚಿತ್ರರಂಗದ ಧ್ವಜವನ್ನು ಎತ್ತರಕ್ಕೆ ಹಾರಿಸಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು" ಎಂದು ಅಲ್ಲು ಅರ್ಜುನ್ ಅವರು ಕೆಜಿಎಫ್ 2 ಚಿತ್ರದ ಕುರಿತಾಗಿ ಕೊಂಡಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

 

Trending News