ನವದೆಹಲಿ: ಬಿಡುಗಡೆಯಾದ ದಿನದಿಂದಲೇ ‘ಪುಷ್ಪ’ ಸಿನಿಮಾ(Pushpa Film) ಸಖತ್ ಕ್ರೇಜ್ ಸೃಷ್ಟಿಸಿದೆ. ಭಾರತ ಮಾತ್ರವಲ್ಲದೇ ಪ್ರಪಂಚದಾದ್ಯಂತ ಈ ಸಿನಿಮಾದ ಹವಾ ಇದೆ. ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್(Allu Arjun) ಮತ್ತು ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ‘ಪುಷ್ಪ’ ಬಾಕ್ಸಾಫೀಸ್ ನಲ್ಲಿ ಸಖತ್ ಸೌಂಡ್ ಮಾಡಿದೆ.


COMMERCIAL BREAK
SCROLL TO CONTINUE READING

‘ಪುಷ್ಪ’ (Pushpa) ಸಿನಿಮಾ ಆಕ್ಷನ್ ಸೀನ್ ಮತ್ತು ಹಾಡುಗಳನ್ನು ಅನೇಕರು ಸೋಷಿಯಲ್ ಮೀಡಿಯಾ ರೀಲ್ಸ್ ಮಾಡುವ ಮೂಲಕ ಮಿಂಚುತ್ತಿದ್ದಾರೆ. ಸೆಲೆಬ್ರಿಟಿಗಳಿಂದ ಹಿಡಿದು ಲಕ್ಷಾಂತರ ಅಭಿಮಾನಿಗಳು ‘ಪುಷ್ಪ’ ಸಿನಿಮಾದ ಡೈಲಾಗ್ ಮತ್ತು ಹಾಡುಗಳಿಗೆ ಫಿದಾ ಆಗಿದ್ದಾರೆ. ಇನ್ ಸ್ಟಾಗ್ರಾಮ್, ಯೂಟ್ಯೂಬ್ ರೀಲ್ಸ್ ಮಾಡಿ ಮಿಂಚುತ್ತಿದ್ದಾರೆ. ಆಸ್ಟ್ರೇಲಿಯ(Australia)ದ ಸ್ಟಾರ್ ಕ್ರಿಕೆಟರ್ ಡೇವಿಡ್ ವಾರ್ನರ್ ತಮ್ಮ ಪತ್ನಿ ಮತ್ತು ಮಕ್ಕಳೊಂದಿಗೆ ‘ಪುಷ್ಪ’ ಸಿನಿಮಾ ರೀಲ್ಸ್ ಮಾಡಿ ಗಮನ ಸೆಳೆದಿದ್ದಾರೆ. ಚಿತ್ರದ ಸೂಪರ್ ಹಿಟ್ ಹಾಡುಗಳಿಗೆ ಡ್ಯಾನ್ಸ್ ಮಾಡಿರುವ ವಾರ್ನರ್ ಇದೀಗ ಮತ್ತೊಂದು ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.  


ಇದನ್ನೂ ಓದಿ: VIRAL VIDEO: Rashmika Mandanna ಗೆ ಊಟಕ್ಕಾಗಿ ದುಡ್ಡು ಕೇಳಿದ ಮಕ್ಕಳು, ನೀಡಿದ ರಿಯಾಕ್ಷನ್ ಗೆ ನೆಟಿಜ(ನ್)ರ ಪ್ರಶ್ನೆ


ಚಿತ್ರದ ಸಾಹಸ ದೃಶ್ಯದಲ್ಲಿ ವಾರ್ನರ್ ಮಿಂಚು!



ಇತ್ತೀಚೆಗಷ್ಟೇ ಅಪ್‌ಲೋಡ್ ಮಾಡಿರುವ ವಿಡಿಯೋದಲ್ಲಿ ‘ಪುಷ್ಪ’ ಚಿತ್ರ(Film Pushpa)ದ ಹಾಡಿಗೆ ಡ್ಯಾನ್ಸ್ ಮಾಡಿದ್ದ ವಾರ್ನರ್(David Warner) ಸಾಹಸ ದೃಶ್ಯದಲ್ಲಿ ನಟಿಸುವ ಪ್ರಯತ್ನ ಮಾಡಿದ್ದಾರೆ. ವಾರ್ನರ್ ಅತ್ಯುತ್ತಮ ಸಾಹಸ ದೃಶ್ಯಗಳನ್ನು ಆಯ್ಕೆ ಮಾಡಿಕೊಂಡಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಎಲ್ಲಾ ದೃಶ್ಯಗಳಲ್ಲೂ ಅಲ್ಲು ಅರ್ಜುನ್ ಮುಖದ ಮೇಲೆ ತಮ್ಮ ಮುಖವನ್ನು ಪೇಸ್ಟ್ ಮಾಡಿದ್ದಾರೆ. ಇದನ್ನು ಮುಖ ಸಮ್ಮಿಲನವೆಂದು ತೋರುವಷ್ಟು ಸೂಕ್ಷ್ಮವಾಗಿ ಮಾಡಲಾಗಿದೆ.


ವಿಡಿಯೋ ನೋಡಿದ್ರೆ ಚಿತ್ರದ ನಿಜವಾದ ಹೀರೋ ವಾರ್ನರ್ ಅಂತಾ ಅನಿಸುತ್ತೆ. ಡೇವಿಡ್ ವಾರ್ನರ್ ಅವರ ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ತುಂಬಾ ಇಷ್ಟಪಟ್ಟಿದ್ದಾರೆ. ವಿಡಿಯೋ(Viral Video)ವನ್ನು ಪೋಸ್ಟ್ ಮಾಡಿರುವ ಡೇವಿಡ್ ವಾರ್ನರ್, ‘ಅಲ್ಲು ಅರ್ಜುನ್ ನಟನೆಯನ್ನು ತುಂಬಾ ಸುಲಭಗೊಳಿಸಿದ್ದಾರೆ’ ಎಂದು ಕ್ಯಾಪ್ಶನ್ ಬರೆದಿದ್ದಾರೆ. ಈ ವಿಡಿಯೋವನ್ನು ಇಲ್ಲಿಯವರೆಗೆ 3 ಮಿಲಿಯನ್‌ಗಿಂತಲೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಅನೇಕರು ವಾರ್ನರ್ ಹಂಚಿಕೊಂಡಿರುವ ವಿಡಿಯೋಗೆ ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.  


ಇದನ್ನೂ ಓದಿ: 777 Charlie: ಶೀಘ್ರವೇ ‘777 ಚಾರ್ಲಿ’ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ


‘ಪುಷ್ಪ’ ಚಿತ್ರದ ರೀಲ್ಸ್ ಗಳಲ್ಲಿ ವಾರ್ನರ್ ಮಿಂಚಿಂಗ್!



ಡೇವಿಡ್ ವಾರ್ನರ್ ಈ ಮೊದಲು ‘ಪುಪ್ಪ’ ಚಿತ್ರದ ಹಾಡುಗಳ ಮೇಲೆ ಅನೇಕ ರೀಲ್ಸ್ ಗಳನ್ನು ಮಾಡಿದ್ದರು. ಇವು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಕೂಡ ಆಗಿದ್ದವು. ಚಿತ್ರದ ‘ಶ್ರೀವಲ್ಲಿ’, ‘ಏ ಬಿಡ್ಡಾ ಇದೀ ನಾ ಅಡ್ಡ’ ಮುಂತಾದ ಹಾಡುಗಳಿಗೆ ವಾರ್ನರ್ ಸಖತ್ ಡ್ಯಾನ್ಸ್ ಮಾಡಿದ್ದಾರೆ.  


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.