Riya Sen: ಅಶ್ಲೀಲ MMS ಈ ಸುಂದರ ನಟಿಯ ವೃತ್ತಿಜೀವನವನ್ನೇ ಹಾಳುಮಾಡಿತು..!

ಒಂದು ಕಾಲದಲ್ಲಿ ರಿಯಾ ಸೇನ್ ಬಾಲಿವುಡ್ ನ ಸುಂದರ ನಟಿಯಾಗಿದ್ದರು. ಅವರ ಅನೇಕ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಸದ್ದು ಮಾಡಿದ್ದವು. ಆದರೆ MMS ಸೋರಿಕೆಯಿಂದ ಅವರಿಗೆ ಬಾಲಿವುಡ್‌ನ ಬಾಗಿಲು ಶಾಶ್ವತವಾಗಿ ಮುಚ್ಚಿತು.

Written by - Puttaraj K Alur | Last Updated : Jan 24, 2022, 02:37 PM IST
  • 41ನೇ ವಸಂತಕ್ಕೆ ಕಾಲಿಟ್ಟ ರಿಯಾ ಸೇನ್ ಗೆ ಹುಟ್ಟುಹಬ್ಬದ ಸಂಭ್ರಮ
  • ಒಂದು ಕಾಲದಲ್ಲಿ ರಿಯಾ ಸೇನ್ ಬಾಲಿವುಡ್ ನ ಸುಂದರ ನಟಿಯಾಗಿದ್ದರು
  • ಅವರ MMS ಸೋರಿಕೆಯಿಂದ ಬಾಲಿವುಡ್‌ನ ಬಾಗಿಲು ಶಾಶ್ವತವಾಗಿ ಮುಚ್ಚಿತು
Riya Sen: ಅಶ್ಲೀಲ MMS ಈ ಸುಂದರ ನಟಿಯ ವೃತ್ತಿಜೀವನವನ್ನೇ ಹಾಳುಮಾಡಿತು..!  title=
ರಿಯಾ ಸೇನ್ ಗೆ ಹುಟ್ಟುಹಬ್ಬದ ಸಂಭ್ರಮ

ನವದೆಹಲಿ: ರಿಯಾ ಸೇನ್(Riya Sen)ಬಾಲಿವುಡ್ ನ ಸುಂದರ ನಟಿಯಾಗಿದ್ದರು. ಭವಿಷ್ಯದಲ್ಲಿ ಅವರು ಸಾಕಷ್ಟು ಹೆಸರು ಮಾಡುತ್ತಾರೆ ಅಂತಾ ಅನೇಕರು ಭಾವಿಸಿದ್ದರು. ರಿಯಾ ನೋಟದಲ್ಲಿ ಎಷ್ಟು ಸುಂದರಿಯಾಗಿದ್ದಳೋ, ನಟನೆಯಲ್ಲಿಯೂ ಅಷ್ಟೇ ಪರಿಪಕ್ವತೆಯನ್ನು ಹೊಂದಿದ್ದರು. ಆದರೆ ಒಂದೇ ಒಂದು MMS ಅವರ ಸಿನಿಮಾ ವೃತ್ತಿಜೀವನ(Riya Sen MMS Leak)ಕ್ಕೆ ಗ್ರಹಣ ಹಿಡಿಯುವಂತೆ ಮಾಡಿತು. ಇಂದು(ಜ.24) ರಿಯಾ ಸೇನ್ ಜನ್ಮದಿನವಾಗಿದ್ದು, ಅವರು 41ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ್ದ ರಿಯಾ

ರಿಯಾ ಸೇನ್ ಬಾಲಿವುಡ್(Riya Sen Bollywood Career)ನಲ್ಲಿ ತಮ್ಮದೇಯಾದ ಹೊಸ ಅಲೆ ಸೃಷ್ಟಿಸಿದ್ದ ನಟಿ. ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ್ದ ಈ ನಟಿಗೂ ವಿವಾದಗಳಿಗೆ ಒಂದು ರೀತಿ ನಂಟು ಇದ್ದೇ ಇದೆ. ರಿಯಾ ಸೇನ್ ಹಿಂದಿ ಮತ್ತು ಬಂಗಾಳಿ ಚಿತ್ರಗಳ ಪ್ರಸಿದ್ಧ ನಟಿ ಮುನ್ಮುನ್ ಸೇನ್(Moon Moon Sen)ಅವರ ಪುತ್ರಿ. ರಿಯಾ ಸೇನ್ ಅವರ ಹಿಟ್ ಚಿತ್ರಗಳಲ್ಲಿ ‘ಸ್ಟೈಲ್’, ‘ಝಂಕರ್ ಬೀಟ್ಸ್’, ‘ಅಪ್ನಾ ಸಪ್ನಾ ಮನಿ-ಮನಿ’ ಚಿತ್ರಗಳು ಮಾತ್ರ ನೆನಪಾಗುತ್ತವೆ. ಆದರೆ ಹೆಚ್ಚಿನ ಜನರು ಅವರಿಗೆ ಸಂಬಂಧಿಸಿದ ವಿವಾದವನ್ನು ನೆನಪಿಸಿಕೊಳ್ಳುತ್ತಾರೆ. ಇದು ಅವರ ಚಿತ್ರಜಗತ್ತನ್ನೇ ತಲೆಕೆಳಗಾಗಿ ಮಾಡಿದ ವಿವಾದ. ಅವರನ್ನು ಯಶಸ್ಸಿನ ಪ್ರಭೆಯಿಂದ ಕುಖ್ಯಾತಿಯ ಕತ್ತಲೆಗೆ ಕರೆತಂದ ವಿವಾದ.

 
 
 
 

 
 
 
 
 
 
 
 
 
 
 

A post shared by Riya sen (@riyasendv)

ಇದನ್ನೂ ಓದಿ: Amazon Prime Offer: ಪವರ್ ಸ್ಟಾರ್ ಪುನೀತ್ ಸ್ಮರಣೆಗಾಗಿ ಉಚಿತ ಸಿನಿಮಾ ನೋಡುವ ಅವಕಾಶ

ಬೋಲ್ಡ್ & ಹಾಟ್ ಸೀನ್ ಗಳ ಬಗ್ಗೆ ಚರ್ಚೆ

ರಿಯಾ ಸೇನ್ 1991ರಲ್ಲಿ ಬಾಲ ಕಲಾವಿದೆಯಾಗಿ(Riya Sen Movies) ತಮ್ಮ ನಟನಾ ವೃತ್ತಿ ಪ್ರಾರಂಭಿಸಿದರು. ಅವರು ನಟಿ ರೈಮಾ ಸೇನ್ ಅವರ ಕಿರಿಯ ಸಹೋದರಿಯೂ ಹೌದು. ರಿಯಾ ಸೇನ್ ತ್ರಿಪುರಾದ ರಾಜಮನೆತನಕ್ಕೆ ಸೇರಿದವರು. ಅವರ ತಂದೆ ಭರತ್ ದೇವ್ ವರ್ಮಾ(Bharat Dev Varma)ಕೂಚ್ ಬೆಹಾರ್ ರಾಣಿ ಇಲಾ ದೇವಿಯ ಮಗ. ಫಲ್ಗುಣಿ ಪಾಠಕ್ ಅವರ ‘ಚೂಡಿ ಜೋ ಖಾಂಕಿ ಹಾಥ್ ಮೇ’ ಹಾಡಿನಿಂದ ರಿಯಾಗೆ ಮೊದಲ ಜನಮನ್ನಣೆ ಸಿಕ್ಕಿತು. ಸ್ಟಾರ್ ಕಿಡ್ ಆದ ನಂತರವೂ ರಿಯಾ ಯಶಸ್ವಿ ನಟಿಯಾಗಿ ಗುರುತಿಸಿಕೊಳ್ಳಲು ಸಾಧ್ಯವಾಗಲಿಲ್ಲ. ರಿಯಾ ತನ್ನ ಚಿತ್ರಗಳಲ್ಲಿನ ಬೋಲ್ಡ್ ಮತ್ತು ಹಾಟ್ ದೃಶ್ಯಗಳ ಬಗ್ಗೆ ಯಾವಾಗಲೂ ಚರ್ಚೆಯಲ್ಲಿದ್ದಾಳೆ. ಅವರ ಬಗೆಗಿನ ಎಂದು ಹೇಳಲಾದ MMS(Riya Sen MMS) ಇಂಟರ್ನೆಟ್ ನಲ್ಲಿ ವೈರಲ್ ಆದ ಬಳಿಕ ರಿಯಾ ಸೈಲೆಂಟ್ ಆದರು. ಬಳಿಕ ಅವರು ಬಾಲಿವುಡ್ ಅನ್ನೇ ತೊರೆದರು.  

ರಿಯಾ ಸೇನ್ ಪ್ರೇಮ ಪುರಾಣ!

 
 
 
 

 
 
 
 
 
 
 
 
 
 
 

A post shared by Riya sen (@riyasendv)

ರಿಯಾ ಸೇನ್ ತಮ್ಮ ಸಂಬಂಧಗಳ ಬಗ್ಗೆ ಯಾವಾಗಲೂ ಚರ್ಚೆಯಲ್ಲಿದ್ದರು. ಗೆಳೆಯ ಅಕ್ಷಯ್ ಖನ್ನಾದಿಂದ ಬರಹಗಾರ ಸಲ್ಮಾನ್ ರಶ್ದಿಯವರ ಹೆಸರು ಕೂಡ ಇವರ ಹೆಸರಿನೊಂದಿಗೆ ತಳುಕು ಹಾಕಿಕೊಂಡಿತ್ತು. ರಶ್ದಿ ಅವರು ರಿಯಾಗಿಂತಲೂ ಎರಡು ಪಟ್ಟು ವಯಸ್ಸಾಗಿದ್ದರು. ಇಬ್ಬರೂ ತಮ್ಮ ಪ್ರೇಮ ಪುರಾಣವನ್ನು ಒಪ್ಪಿಕೊಳ್ಳಲಿಲ್ಲ, ಆದರೆ ಸ್ವಲ್ಪ ಸಮಯದವರೆಗೆ ಸಂಬಂಧದಲ್ಲಿದ್ದ ನಂತರ ಇಬ್ಬರೂ ಬೇರ್ಪಟ್ಟರು. 2011ರಲ್ಲಿ ರಿಯಾ ಕ್ರೀಡಾಂಗಣದಲ್ಲಿ ಹಲವಾರು ಬಾರಿ ಶ್ರೀಶಾಂತ್‌ಗೆ ಹುರಿದುಂಬಿಸುತ್ತಿದ್ದರು. ಹೀಗಾಗಿ ಶ್ರೀಶಾಂತ್ ಜೊತೆಗೆ ಅವರು ಡೇಟ್ ಮಾಡುತ್ತಿದ್ದಾರೆಂಬ ಗಾಳಿಸುದ್ದಿ ಹಬ್ಬಿತ್ತು. ರಿಯಾ ಸೇನ್ ತನ್ನ ಗೆಳೆಯ ಶಿವಂ ತಿವಾರಿ ಅವರನ್ನು 2017ರಲ್ಲಿ ಖಾಸಗಿ ಸಮಾರಂಭದಲ್ಲಿ ವಿವಾಹವಾದರು.

ಇದನ್ನೂ ಓದಿ: Puneeth Rajkumar : 'ಜೇಮ್ಸ್ ಸಿನಿಮಾ'ದ ಶೂಟಿಂಗ್ ಕಂಪ್ಲೀಟ್ ಮಾಡಿದ ಚಿತ್ರ ತಂಡ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News