ನವದೆಹಲಿ: ಇಡೀ ಭಾರತೀಯ ಚಿತ್ರರಂಗವೇ, ದಕ್ಷಿಣ ಸಿನಿ ಇಂಡಸ್ಟ್ರಿಯತ್ತ ತಿರುಗಿನೋಡುವಂತೆ ಎಸ್.ಎಸ್. ರಾಜಮೌಳಿ ನಿರ್ದೇಶನ ಮಾಡಿದ ಬಾಹುಬಲಿ-ದಿ ಬಿಗಿನ್ನಿಂಗ್ ಮತ್ತು ಪಾರ್ಟ್ -2  ಸಿನಿಮಾಗಳು ಮತ್ತೆ ಚಿತ್ರ ಮಂದಿರಗಳಿಗೆ ಲಗ್ಗೆ ಇಡುತ್ತಿವೆ. ಹೌದು 2015ರಲ್ಲಿ ತೆರೆಕಂಡಿದ್ದ ಬಾಹುಬಲಿ (Bahubali)-ದಿ ಬಿಗಿನ್ನಿಂಗ್ ಹಾಗೂ 2017ರಲ್ಲಿ ಅದರ ಮುಂದುವರಿದ ಭಾಗವಾಗಿ ಬಂದ ಬಾಹುಬಲಿ-2 ಸಿನಿಮಾ ಬ್ಲಾಕ್ಬಾಸ್ಟರ್ ಹಿಟ್ ಆಗಿದ್ದವು.


ಬಾಹುಬಲಿ ಪ್ರಭಾಸ್ ಗೆ ಫಿದಾ ಆದ ಹಾಲಿವುಡ್ ನ ಈ ನಟ ಯಾರು ಗೊತ್ತೇ? ಇದಕ್ಕೆ ಇಲ್ಲಿದೆ ಸಾಕ್ಷಿ


COMMERCIAL BREAK
SCROLL TO CONTINUE READING

ಇದೇ ತಿಂಗಳು ಅಂದರೆ ನವೆಂಬರ್ ನಲ್ಲಿ  ಬಾಹುಬಲಿ-1 ಹಾಗೂ 2 ಸಿನಿಮಾಗಳು ಥೀಯೇಟರ್‌ಗಳಲ್ಲಿ ರೀ ರಿಲೀಸ್ ಮಾಡಲಾಗುತ್ತಿದೆ. ಬಾಲಿವುಡ್ ಸಿನಿಮಾ ವಿಮರ್ಶಕ ತರಣ್ ಆದರ್ಶ್ ಅವರು ಈ ವಿಷಯವನ್ನ ತಮ್ಮ ಟ್ವಿಟರ್ನಲ್ಲಿ ತಿಳಿಸಿದ್ದಾರೆ. ಅವರು ಹಂಚಿಕೊಂಡಿರುವ ಪೋಸ್ಟರ್ಗಳ ಪ್ರಕಾರ ಬಾಹುಬಲಿ-1 ಸಿನಿಮಾ ನವೆಂಬರ್ 6ರಂದು ಅಂದ್ರೆ ಇದೇ ಶುಕ್ರವಾರ ಹಾಗೂ ಬಾಹುಬಲಿ-2 ನವೆಂಬರ್ 13ರಂದು (ಮುಂದಿನ ಶುಕ್ರವಾರ) ರೀ ರಿಲೀಸ್ ಆಗಲಿವೆ.


'ಬಾಹುಬಲಿ' ಪ್ರಭಾಸ್ ಇನ್ಸ್ಟಾಗ್ರಾಂ ಗೆ ಎಂಟ್ರಿ ಕೊಟ್ಟಿದ್ದು ಹೇಗೆ ಗೊತ್ತಾ?


ಪ್ರಭಾಸ್ (Prabhas), ರಾಣಾ ದಗ್ಗುಬಾಟಿ, ಅನುಷ್ಕಾ ಶೆಟ್ಟಿ (Anushka Shetty), ತಮನ್ನಾ ಭಾಟಿಯಾ, ರಮ್ಯಾ ಕೃಷ್ಣ ಮುಂತಾದ ಸ್ಟಾರ್ ನಟ ನಟಿಯರು ಅಭಿನಯಿಸಿದ್ದ ಬಾಹುಬಲಿ ಸಿನಿಮಾ ಭಾರತದಲ್ಲಷ್ಟೇ ಅಲ್ಲದೆ, ವಿದೇಶಗಳಲ್ಲೂ ತೆರೆ ಕಂಡು ಹಿಟ್ ಆಗಿತ್ತು. ಅಲ್ಲದೆ ಅಂತರಾಷ್ಟ್ರೀಯ ಫಿಲ್ಮ್ ಫೆಸ್ಟ್ಗಳಾದ ಬ್ರಿಟಿಷ್ ಫಿಲ್ಮ್ ಇನ್ಸ್ಟಿಟ್ಯೂಟ್ ಹಾಗೂ 39ನೇ ಮಸ್ಕೋ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ನಲ್ಲೂ ಉತ್ತಮ ಪ್ರದರ್ಶನ ಕಂಡಿತ್ತು. ಬಾಹುಬಲಿ-2 ಸಿನಿಮಾ ಮೂರು ನ್ಯಾಷನಲ್ ಅವಾರ್ಡ್  ಕೂಡ ಮುಡಿಗೇರಿಸಿಕೊಂಡಿದೆ. 


ರಿಯಲ್ ಆಗೂ ಕಪಲ್ಸ್ ಆಗಲಿದ್ದಾರೆಯೇ ಬಾಹುಬಲಿಯ ಈ ಜೋಡಿ: ಕಡೆಗೂ ಮೌನ ಮುರಿದ ಅನುಷ್ಕಾ ಶೆಟ್ಟಿ