ಬೆಂಗಳೂರು: ‘ಮಳೆಯಲಿ ಜೊತೆಯಲಿ’ ಜೊತೆಯಾಗಿದ್ದ ಗೋಲ್ಡನ್ ಸ್ಟಾರ್ ಗಣೇಶ್(Golden Star Ganesh) ಹಾಗೂ ಪ್ರೀತಂ ಗುಬ್ಬಿ ಜೋಡಿ ಈಗ ‘ಬಾನದಾರಿಯಲ್ಲಿ’ ಸಾಗಲಿದೆ. ಇವರಿಬ್ಬರ ಕಾಂಬಿನೇಶನಲ್ಲಿ ಬರುತ್ತಿರುವ ಈ ಚಿತ್ರಕ್ಕೆ ‘ಬಾನದಾರಿಯಲ್ಲಿ’ ಎಂದು ಹೆಸರಿಡಲಾಗಿದೆ. ಮೇ ತಿಂಗಳಿನಲ್ಲಿ ಈ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ.


COMMERCIAL BREAK
SCROLL TO CONTINUE READING

ಯುಗಾದಿ ಹಬ್ಬದ ಶುಭದಿನದಂದು ಪೋಸ್ಟರ್ ಬಿಡುಗಡೆ(Baanadaariyalli Poster Release)ಮಾಡಲಾಗಿದೆ. ಪ್ರೀತಂ ಗುಬ್ಬಿ(Preetham Gubbi)ನಿರ್ದೇಶನದಲ್ಲಿ ಗಣೇಶ್ ಈ ಹಿಂದೆ ‘ಮಳೆಯಲಿ ಜೊತೆಯಲಿ’ , ‘ದಿಲ್ ರಂಗೀಲಾ’ ಹಾಗೂ ‘99’ ಚಿತ್ರಗಳಲ್ಲಿ ನಟಿಸಿದ್ದರು. ಇದು ನಾಲ್ಕನೇ ಚಿತ್ರ. ‘ಬಾನದಾರಿಯಲ್ಲಿ’ಗೆ ‘ನೋಡು ಎಂಥಾ ಚೆಂದ!’ ಎಂಬ ಅಡಿಬರಹವಿದೆ.


Ashika Ranganath: ‘ಚುಟು ಚುಟು ಬೆಡಗಿ’ಯ ಈ ವಿಷಯ ಕೇಳಿದ್ರೆ ಶಾಕ್ ಆಗ್ತೀರಾ!


ವಿ.ಹರಿಕೃಷ್ಣ(V Harikrishna) ಸಂಗೀತ ನಿರ್ದೇಶನ, ಪ್ರೀತ ಜಯರಾಂ ಛಾಯಾಗ್ರಹಣ ಹಾಗೂ ದೀಪು ಎಸ್ ಕುಮಾರ್ ಅವರ ಸಂಕಲನ ಈ ಚಿತ್ರಕ್ಕಿದೆ. ನಾಯಕಿ ಸೇರಿದಂತೆ ಉಳಿದ ತಾರಾಬಳಗದ ಆಯ್ಕೆ ನಡೆಯುತ್ತಿದೆ.


ಡಾ.ಪುನೀತ್ ರಾಜಕುಮಾರ್(Dr. Puneeth Rajkumar) ಅವರು ಹಾಡಿದ್ದ ‘ಬಾನದಾರಿಯಲ್ಲಿ’ ಹಾಡು ಇಂದಿಗೂ, ಎಂದೆಂದಿಗೂ ಜನಪ್ರಿಯ.. ಆ ಹಾಡಿನ ಮೊದಲ ಪದವೇ‌ ಈ ಚಿತ್ರದ ಶೀರ್ಷಿಕೆಯಾಗಿದ್ದು, ಆ ಹಾಡಿನಷ್ಟೇ ಈ ಚಿತ್ರ ಕೂಡ ಯಶಸ್ವಿಯಾಗಲಿ.


ಇದನ್ನೂ ಓದಿ: ಹೋಂ ಮಿನಿಸ್ಟರ್‌ ಟೈಟಲ್‌ಗೂ ರಾಜಕೀಯಕ್ಕೂ ಏನಾದರೂ ಸಂಬಂಧ ಇದೆಯಾ? ಉಪ್ಪಿ ಹೇಳಿದ್ದೇನು?


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.