'ವಿಕ್ರಾಂತ್‌ ರೋಣ' ಟೀಸರ್‌ ನೋಡಿ ಯಾವ ಯಾವ ಸ್ಟಾರ್‌ ನಟರು ಹೇಗೆ ವಿಶ್‌ ಮಾಡಿದ್ರು..?

Written by - Malathesha M | Last Updated : Apr 2, 2022, 07:01 PM IST
  • ಟೀಸರ್‌ ಮೂಲಕವೇ ಇಷ್ಟೊಂದು ದೊಡ್ಡ ಮಟ್ಟಿಗೆ ಹವಾ ಎಬ್ಬಿಸಿರುವ 'ವಿಕ್ರಾಂತ್‌ ರೋಣ' ಜುಲೈ 28ಕ್ಕೆ ಸಿಲ್ವರ್‌ ಸ್ಕ್ರೀನ್‌ಗೆ ಲಗ್ಗೆ ಇಡಲಿದೆ.
  • ಹೀಗಾಗಿ ನಿರೀಕ್ಷೆಗಳ ಶಿಖರ ಮುಗಿಲು ಮುಟ್ಟಿದ್ದು, ಕಿಚ್ಚ ಸುದೀಪ್‌ ಅಭಿಮಾನಿಗಳ ಸಂಭ್ರಮ ಡಬಲ್‌ ಆಗಿದೆ.
'ವಿಕ್ರಾಂತ್‌ ರೋಣ' ಟೀಸರ್‌ ನೋಡಿ ಯಾವ ಯಾವ ಸ್ಟಾರ್‌ ನಟರು ಹೇಗೆ ವಿಶ್‌ ಮಾಡಿದ್ರು..? title=

ಒಂದ್ಕಡೆ 'ವಿಕ್ರಾಂತ್‌ ರೋಣ' ಸಿನಿಮಾ ಟೀಸರ್‌ ಧೂಳ್‌ ಎಬ್ಬಿಸಿದ್ರೆ, ಮತ್ತೊಂದು ಕಡೆ 'ವಿಕ್ರಾಂತ್‌ ರೋಣ' ಟೀಸರ್‌ ರಿಲೀಸ್‌ ಮಾಡಲು ಘಟಾನುಘಟಿ ನಟರೇ ಎಂಟ್ರಿಯಾಗಿದ್ದರು. ಹಿಂದಿ ಟೀಸರ್‌ಗೆ ಸಲ್ಮಾನ್‌ ಖಾನ್‌ ಸಾಥ್‌ ಕೊಟ್ಟಿದ್ದರೆ, 'ವಿಕ್ರಾಂತ್‌ ರೋಣ (Vikrant Rona)' ಸಿನಿಮಾದ ಮಲಯಾಳಂ ಟೀಸರ್‌ನ ಮೋಹನ್‌ ಲಾಲ್‌ ಅವರು ರಿಲೀಸ್‌ ಮಾಡಿದ್ರು. ಜೊತೆಗೆ ಟಾಲಿವುಡ್‌, ಕಾಲಿವುಡ್‌ ಹಾಗೂ ಹಾಲಿವುಡ್‌ನಲ್ಲೂ ಇಂತಹದ್ದೇ ಹವಾ ಇತ್ತು. ಅದರ ಕಂಪ್ಲೀಟ್‌ ರಿಪೋರ್ಟ್‌ ಮುಂದೆ ಓದೋಣ.

ಇದನ್ನೂ ಓದಿ: Girki: ‘ಗಿರ್ಕಿ’ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ ಸೆಂಚುರಿ ಸ್ಟಾರ್ ಶಿವಣ್ಣ

ಕನ್ನಡ ಸಿನಿಮಾ ರಂಗ ಜಗತ್ತಿನಾದ್ಯಂತ ನಕ್ಷತ್ರದಂತೆ ಮಿಂಚುತ್ತಿದೆ. ಸದ್ಯ ಸಾಲು ಸಾಲು ಪ್ಯಾನ್‌ ಇಂಡಿಯಾ ಸಿನಿಮಾಗಳು ಕನ್ನಡ ಚಿತ್ರರಂಗವನ್ನ ಬೇರೆ ಲೆವೆಲ್‌ಗೆ ಕೊಂಡೊಯ್ಯುತ್ತಿವೆ. ಇದೇ ರೀತಿ 'ವಿಕ್ರಾಂತ್‌ ರೋಣ' ಕೂಡ ಕನ್ನಡ ಚಿತ್ರರಂಗಕ್ಕೆ ಜಾಗತಿಕ ಮಾರುಕಟ್ಟೆ ದೊರಕಿಸಿಕೊಟ್ಟಿದೆ. ಇದೇ ಮೊದಲ ಬಾರಿಗೆ ಇಂಗ್ಲಿಷ್‌ ಭಾಷೆಯಲ್ಲೂ ರಿಲೀಸ್‌ ಆಗುವ ಮೂಲಕ, ಕನ್ನಡ ಚಿತ್ರ ಹೊಸ ದಾಖಲೆ ಬರೆಯುತ್ತಿದೆ. ಹೀಗಾಗಿಯೇ ಭಾರತ ಚಿತ್ರರಂಗದ ಸ್ಟಾರ್‌ ನಟರು ಇವತ್ತು ವಿಕ್ರಾಂತ್‌ ರೋಣನಿಗೆ ಸಾಥ್‌ ಕೊಟ್ಟಿದ್ದರು.‌ ಕನ್ನಡ ಟೀಸರ್‌ನ ಸ್ವತಃ ಕಿಚ್ಚ ಸುದೀಪ್‌ ಅವರೇ ರಿಲೀಸ್‌ ಮಾಡಿದ್ರು. ಇನ್ನು ಮಿಕ್ಕ 5 ಭಾಷೆಗಳ ಟೀಸರ್‌ಗೆ ಘಟಾನುಘಟಿ ಸ್ಟಾರ್‌ಗಳು ಸಾಥ್‌ ಕೊಟ್ಟಿದ್ದರು.

ಸಲ್ಮಾನ್‌ ಸಾಥ್..!
ಅಂದಹಾಗೆ 'ವಿಕ್ರಾಂತ್‌ ರೋಣ' ಸಿನಿಮಾದ ಹಿಂದಿ ವರ್ಷನ್‌ ಟೀಸರ್‌ (Vikrant Rona Release Teaser) ರಿಲೀಸ್‌ ಮಾಡಿದ ನಟ ಸಲ್ಮಾನ್‌ ಖಾನ್, ತಮ್ಮ ಟ್ವಿಟ್ಟರ್‌ ಅಕೌಂಟ್‌ನಲ್ಲಿ 'ವಿಕ್ರಾಂತ್‌ ರೋಣ' ಟೀಂಗೆ ವಿಶ್‌ ಮಾಡಿದ್ರು. 'The world will witness the glory of #VikrantRona in 3D on July 28, 2022. Looks out of the world
@KicchaSudeep wishing the best to the team.' ಅಂತಾ ಟ್ವೀಟ್‌ ಮಾಡಿದ್ರು.

ಇದನ್ನೂ ಓದಿ: Vikrant Rona: ಜುಲೈ 28ಕ್ಕೆ ಜಗತ್ತಿನಾದ್ಯಂತ ರಿಲೀಸ್ ಆಗಲಿದೆ ‘ವಿಕ್ರಾಂತ್ ರೋಣ’..!

 ಸೆಹ್ವಾಗ್‌ ಎಂಟ್ರಿ..!
ಮತ್ತೊಂದು ಕಡೆ 'ವಿಕ್ರಾಂತ್‌ ರೋಣ' ಸಿನಿಮಾದ ಇಂಗ್ಲಿಷ್‌ ವರ್ಷನ್‌ ಟೀಸರ್‌ ರಿಲೀಸ್‌ಗೆ ಭಾರತ ತಂಡ ಮಾಜಿ ಸ್ಟಾರ್‌ ಪ್ಲೇಯರ್‌ ವೀರೇಂದ್ರ ಸೆಹ್ವಾಗ್‌ ಸಾಥ್‌ ಕೊಟ್ಟಿದ್ದರು. ವಿಕ್ರಾಂತ್‌ ರೋಣ ಇಂಗ್ಲಿಷ್‌ ಟೀಸರ್‌ ರಿಲೀಸ್‌ ಮಾಡಿ, Blockbuster aa raha hai. Wah #VikrantRona Wah ! It doesn't get bigger than this, Get ready to be vowed by my friend @KicchaSudeep and his amazing charisma. #VikrantRonaJuly28 in Cinemas worldwide in 3D. ಅಂತಾ ಬರೆದುಕೊಂಡಿದ್ರು.

ಚಿರಂಜೀವಿ ವಿಶ್..!
ತೆಲುಗು ಟೀಸರ್‌ ರಿಲೀಸ್‌ ಮಾಡಿದ ನಟ ಚಿರಂಜೀವಿ, This looks Superb! @KicchaSudeep 's adventure-thriller release date teaser @anupsbhandari & entire team, BEST WISHES! ಎಂದು ಶುಭ ಹಾರೈಸಿದರು.

ಮೋಹನ್‌ ಲಾಲ್‌ ಸಾಥ್
ಮಲಯಾಳಂ ಚಿತ್ರರಂಗದ ದಿಗ್ಗಜ ನಟ ಮೋಹನ್‌ ಲಾಲ್ 'ವಿಕ್ರಾಂತ್‌ ರೋಣ' ಸಿನಿಮಾದ ಮಲಯಾಳಂ ವರ್ಷನ್‌ ರಿಲೀಸ್‌ ಮಾಡಿ, #VikrantRona is set for a  worldwide release in 3D on July 28th. Best wishes dear
@KicchaSudeep and the team behind this film. ಎಂದು ಟ್ವೀಟ್‌ ಮಾಡಿದ್ರು.

ಇದನ್ನೂ ಓದಿ: Vikrant Rona: ಜುಲೈ 28ಕ್ಕೆ ಜಗತ್ತಿನಾದ್ಯಂತ ರಿಲೀಸ್ ಆಗಲಿದೆ ‘ವಿಕ್ರಾಂತ್ ರೋಣ’..!

ಸಿಂಬು ಹೇಳಿದ್ದೇನು..?
ಇಷ್ಟೆಲ್ಲಾ ಸಂಭ್ರಮದ ನಡುವೆ 'ವಿಕ್ರಾಂತ್‌ ರೋಣ' ಸಿನಿಮಾದ ತಮಿಳು ಭಾಷೆಯ ಟೀಸರ್‌ಗೆ ನಟ ಸಿಂಬು ಗ್ರೀನ್‌ ಸಿಗ್ನಲ್‌ ನೀಡಿದ್ದರು. Looks MASSIVE! Congratulations @KicchaSudeep brother you look stunning! #VikrantRona is sure to rock the Indian Box Office ಅಂತಾ ಸಿಂಬು ಟ್ವೀಟ್‌ ಮಾಡಿದ್ರು.

ಒಟ್ಟಾರೆ ಹೇಳೋದಾದ್ರೆ 'ವಿಕ್ರಾಂತ್‌ ರೋಣ' ದೊಡ್ಡ ಹಿಟ್‌ ಆಗುವ ಎಲ್ಲಾ ಮುನ್ಸೂಚನೆ ನೀಡುತ್ತಿದೆ. ಟೀಸರ್‌ ಮೂಲಕವೇ ಇಷ್ಟೊಂದು ದೊಡ್ಡ ಮಟ್ಟಿಗೆ ಹವಾ ಎಬ್ಬಿಸಿರುವ 'ವಿಕ್ರಾಂತ್‌ ರೋಣ' ಜುಲೈ 28ಕ್ಕೆ ಸಿಲ್ವರ್‌ ಸ್ಕ್ರೀನ್‌ಗೆ ಲಗ್ಗೆ ಇಡಲಿದೆ. ಹೀಗಾಗಿ ನಿರೀಕ್ಷೆಗಳ ಶಿಖರ ಮುಗಿಲು ಮುಟ್ಟಿದ್ದು, ಕಿಚ್ಚ ಸುದೀಪ್‌ ಅಭಿಮಾನಿಗಳ ಸಂಭ್ರಮ ಡಬಲ್‌ ಆಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

 

Trending News