Ashika Ranganath: ‘ಚುಟು ಚುಟು ಬೆಡಗಿ’ಯ ಈ ವಿಷಯ ಕೇಳಿದ್ರೆ ಶಾಕ್ ಆಗ್ತೀರಾ!

ಆಶಿಕಾ ಮದುವೆ ಸುದ್ದಿ ಕೇಳಿ ಇದೀಗ ಅಭಿಮಾನಿಗಳು ಶಾಕ್‌ ಆಗಿದ್ದಾರೆ. ಅದರಲ್ಲೂ ಪಡ್ಡೆ ಹುಡುಗರಂತೂ ಆಶಿಕಾಗೆ ಮದ್ವೇನಾ..? ಈ ನೋವನ್ನು ಹೆಂಗಪ್ಪಾ ತಡ್ಕೊಳ್ಳೋದು ಅಂತಾ ಮನದಲ್ಲೇ ಮುನಿಸಿಕೊಳ್ಳುವಂತಾಗಿದೆ.

Written by - YASHODHA POOJARI | Edited by - Puttaraj K Alur | Last Updated : Apr 2, 2022, 07:17 PM IST
  • ಚುಟು ಚುಟು, ಚುಮು ಚುಮು ಬೆಡಗಿಗೆ ಕೂಡಿ ಬಂದ ಕಂಕಣ ಭಾಗ್ಯ?
  • ಆಶಿಕಾ ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆಂಬ ಮಾತುಗಳು ಹರಿದಾಡುತ್ತಿದೆ
  • ಉದ್ಯಮಿಯೊಬ್ಬರ ಜೊತೆಗೆ ಆಶಿಕಾ ಅರೇಂಜ್ಡ್‌ ಮ್ಯಾರೇಜ್ ಆಗಲಿದ್ದಾರಂತೆ
Ashika Ranganath: ‘ಚುಟು ಚುಟು ಬೆಡಗಿ’ಯ ಈ ವಿಷಯ ಕೇಳಿದ್ರೆ ಶಾಕ್ ಆಗ್ತೀರಾ! title=
ಚುಮು ಚುಮು ಬೆಡಗಿಗೆ ಕೂಡಿ ಬಂದ ಕಂಕಣ ಭಾಗ್ಯ?

ಬೆಂಗಳೂರು: ಚುಟು ಚುಟು, ಚುಮು ಚುಮು ಬೆಡಗಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಇದು ಪಡ್ಡೆ ಹುಡುಗರ ನೋವಿಗೆ ಕಾರಣವಾಗಿದೆ. ಯಾರಪ್ಪ ಆ ಚುಟುಚುಟು ಸುಂದರಿ ಅಂದ್ರೆ, ಅದುವೇ ಆಶಿಕಾ ರಂಗನಾಥ್(Ashika Ranganath) .‌ ಹಾಗಾದ್ರೆ ಎಂಗೇಜ್‌ ಆಗಿದ್ದಾರಾ ಆಶಿಕಾಅಂತ ನಿಮ್ಮ ತಲೆಯಲ್ಲಿ ಪ್ರಶ್ನೆ ಮೂಡಬಹುದು. ಅದಕ್ಕೆ ಉತ್ತರ ಇಲ್ಲಿದೆ ನೋಡಿ.

ಆಶಿಕಾ ರಂಗನಾಥ್‌ ಅಂದ್ರೆ ಕನ್ನಡದ ಬ್ಯೂಟಿಫುಲ್‌ ಸ್ಟಾರ್‌ ನಟಿ. 2016ರಲ್ಲಿ ‘ಕ್ರೇಜಿ ಬಾಯ್’(Crazy boy) ಚಿತ್ರದ ಮೂಲಕ ಸಿನಿ ಜರ್ನಿ ಆರಂಭಿಸಿದ ಚೆಲುವೆ ಆಶಿಕಾ ರಂಗನಾಥ್ ಕನ್ನಡಿಗರಿಗೆ ಚುಟು ಚುಟು ಹುಡುಗಿ. ಸುಮಾರು 14 ಸಿನಿಮಾಗಳಲ್ಲಿ ನಟಿಸಿರುವ ಅಶಿಕಾ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ

ಇದನ್ನೂ ಓದಿ: Girki: ‘ಗಿರ್ಕಿ’ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ ಸೆಂಚುರಿ ಸ್ಟಾರ್ ಶಿವಣ್ಣ

ಸೋಷಿಯಲ್ ಮೀಡಿಯಾ(Social Media)ದಲ್ಲಿ ಅಪ್ಲೋಡ್ ಮಾಡುವ ಇವರ ಸ್ಟೈಲಿಶ್ ಫೋಟೋಗಳು ಪಡ್ಡೆ ಹುಡುಗರ ನಿದ್ದೆಗೆಡಿಸಿವೆ ಎನ್ನಬಹುದು. ಕೈ ತುಂಬಾ ಸಿನಿಮಾಗಳನ್ನು ಇಟ್ಟುಕೊಂಡು ಸಖತ್ ಬ್ಯುಸಿಯಾಗಿರುವ ಆಶಿಕಾ, ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ ಎನ್ನುವ ಮಾತು ಗಾಂಧಿನಗರದಲ್ಲಿ ಹರಿದಾಡುತ್ತಿದೆ.

ಯಾವುದೇ ರೀತಿಯ ಗಾಸಿಪ್‌ಗಳಿಗೆ ಬಲಿಯಾಗದೇ ತಾನಾಯಿತು ತನ್ನ ಕೆಲಸವಾಯಿತು ಅಂತ ಇರೋ ಅದ್ಭುತ ಪ್ರತಿಭೆ ಆಶಿಕಾ ರಂಗನಾಥ್. ಆಶಿಕಾ ಪೋಷಕರು ಆಯ್ಕೆ ಮಾಡೋ ಹುಡುಗನನ್ನೇ ಮದುವೆ ಆಗಲು ಒಪ್ಪಿಕೊಂಡಿದ್ದಾರಂತೆ. ಇದು ಪಕ್ಕಾ ಅರೇಂಜ್ಡ್‌(Ashika Ranganath Marriage)ಮ್ಯಾರೇಜ್. ಹುಡುಗನ ಹೆಸರು ಏನು? ಎಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಏನೂ ಗೊತ್ತಿಲ್ಲ. ಹುಡುಗ ಉದ್ಯಮಿ(Businessman) ಆಗಿದ್ದು, ಕೋಟಿ ಕೋಟಿ ಆಸ್ತಿಯ ಒಡೆಯ ಅನ್ನೋ ಮಾಹಿತಿ ಇದೆ.

ಇದನ್ನೂ ಓದಿ: ಪ್ರಮೋದ್ ಈಗ 'ಬಾಂಡ್ ರವಿ'....ಯುಗಾದಿ ಹಬ್ಬಕ್ಕೆ 'ಬಾಂಡ್ ರವಿ' ಟೈಟಲ್ ಹಾಗೂ ಫಸ್ಟ್ ಲುಕ್ ರಿಲೀಸ್

ಬೆಂಗಳೂರಿನಲ್ಲೇ ತುಂಬಾ ಗ್ರ್ಯಾಂಡ್‌ ಆಗಿ ಎಂಗೇಜ್​ ಆಗಲಿದ್ದಾರೆ ಅನ್ನೋ ಮಾಹಿತಿ ಕೂಡ ಇದೆ. ಆಶಿಕಾ ಮದುವೆ ಎಂದು ಕೇಳುತ್ತಿದ್ದಂತೆ ಜನರಿಗೆ ಕ್ಯೂರಿಯಾಸಿಟಿ ಹೆಚ್ಚಾಗಿದೆ. ನೀವೇ ಇಷ್ಟೊಂದು ಬ್ಯೂಟಿಫುಲ್, ಇನ್ನು ನಿಮ್ಮ ಹುಡುಗ ಎಷ್ಟು ಹ್ಯಾಂಡ್ಸಂ ಇರಬಹುದು ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಆಶಿಕಾ ಸೋಷಿಯಲ್ ಮೀಡಿಯಾ(Social Media)ದಲ್ಲಿ ಹಂಚಿಕೊಳ್ಳುವ ಸೀರೆ ಲುಕ್‌ ನೋಡಿ ಅನೇಕರು ಪಕ್ಕಾ ಮನೆ ಮಗಳು, ನನ್ನ ಮದುವೆಯಾಗಿ ಎಂದು ನೇರವಾಗಿ ಪ್ರಪೋಸಲ್ ಇಡುತ್ತಿದ್ದರು.

ಆಶಿಕಾ(Ashika Ranganath) ಮದುವೆ ಸುದ್ದಿ ಕೇಳಿ ಇದೀಗ ಅಭಿಮಾನಿಗಳು ಶಾಕ್‌ ಆಗಿದ್ದಾರೆ. ಅದರಲ್ಲೂ ಪಡ್ಡೆ ಹುಡುಗರಂತೂ ಆಶಿಕಾಗೆ ಮದ್ವೇನಾ..? ಈ ನೋವನ್ನು ಹೆಂಗಪ್ಪಾ ತಡ್ಕೊಳ್ಳೋದು ಅಂತಾ  ಮನದಲ್ಲೇ ಮುನಿಸಿಕೊಳ್ಳುವಂತಾಗಿದೆ. ಆ ಲಕ್ಕಿ ಬಾಯ್‌ ಯಾರು ಅನ್ನೋದನ್ನು ಆಶಿಕಾ ಯಾವಾಗ ರಿವೀಲ್‌ ಮಾಡ್ತಾರೆ ಅಂತ ಕಾದು ನೋಡಬೇಕಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News