vaishnavi chaitanya: ಆನಂದ್ ದೇವರಕೊಂಡ ಮತ್ತು ವಿರಾಜ್ ಅಶ್ವಿನ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಬೇಬಿ ಚಿತ್ರದಲ್ಲಿ ವೈಷ್ಣವಿ ನಾಯಕಿಯಾಗಿ ನಟಿಸಿದ್ದಾರೆ. ಇಬ್ಬರು ಹುಡುಗರಿಗೆ ಮೋಸ ಮಾಡುವ ಹುಡುಗಿಯಾಗಿ ಅವರ ಅಭಿನಯವು ಅನೇಕ ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯವಂತೆ ಮಾಡಿತ್ತು.. ಈ ಸಿನಿಮಾದ ನಂತರ ವೈಷ್ಣವಿಗೆ ಸಾಲು ಸಾಲು ಅವಕಾಶಗಳು ಬಂದವು.


COMMERCIAL BREAK
SCROLL TO CONTINUE READING

 ದಿಲ್ ರಾಜ್ ಬ್ಯಾನರ್ ನಲ್ಲಿ ಆಶಿಶ್ ನಾಯಕನಾಗಿ ನಟಿಸಿದ ಲವ್ ಮಿ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಇತ್ತೀಚೆಗಷ್ಟೇ ತೆರೆಕಂಡ ಈ ಸಿನಿಮಾ ನಿರೀಕ್ಷಿತ ಫಲಿತಾಂಶ ಪಡೆಯದಿದ್ದರೂ ವೈಷ್ಣವಿ ಉತ್ತಮ ಕ್ರೇಜ್‌ ಗಳಿಸಿದ್ದಾರೆ.. ಲವ್ ಮಿ ಚಿತ್ರ ಬಿಡುಗಡೆಯಾಗಿ ಹತ್ತು ದಿನ ಕಳೆದಿದ್ದು ಇದೀಗ ಒಟಿಟಿ ಬಿಡುಗಡೆಗೆ ಸಿದ್ಧವಾಗಿದೆ.  


ಇದನ್ನೂ ಓದಿ-Puttakkana Makkalu Serial: ಪುಟ್ಟಕ್ಕನ ಮಗಳ ಪಾಲಿನ ವಿಲನ್ ರಾಧಾ ನಿಜ ಜೀವನದಲ್ಲಿ ಏನ್ ವೃತ್ತಿ ಮಾಡ್ತಾರೆ ಗೊತ್ತಾ?


 ಕೆಲವು ಸಿನಿಮಾಗಳು ಥಿಯೇಟರ್ ನಲ್ಲಿ ಹಿಟ್ ಆಗದಿದ್ದರೂ ಒಟಿಟಿಯಲ್ಲಿ ಹಿಟ್ ಆಗುತ್ತವೆ. ಹಾಗಾಗಿಯೇ ಈ ಚಿತ್ರತಂಡ ಪ್ರಚಾರ ಆರಂಭಿಸಿದೆ. ಇದರ ಅಂಗವಾಗಿ ಚಿತ್ರರಂದ ಪ್ರೋಮೋವೊಂದನ್ನು ಬಿಡುಗಡೆ ಮಾಡಿದೆ.


ಇದನ್ನೂ ಓದಿ-ಬಹುನಿರೀಕ್ಷಿತ 'ಕೋಟಿ' ಸಿನಿಮಾದ ಟ್ರೇಲರ್ ಬಿಡುಗಡೆ : ಜೂನ್ 14ಕ್ಕೆ ತೆರೆ ಬರಲಿದೆ ಸಿನಿಮಾ


 ಈ ಪ್ರೋಮೋದಲ್ಲಿ ಆಶಿಶ್ ವೈಷ್ಣವಿ ಬಗ್ಗೆ ಒಂದು ಇಂಟ್ರೆಸ್ಟಿಂಗ್ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಸದ್ಯದಲ್ಲೇ ಒಂದು ಗುಡ್ ನ್ಯೂಸ್ ಹೇಳಲಿದ್ದಾರೆ ಎಂದು ಸುಳಿವು ನೀಡಿದ್ದಾರೆ. ಇದರಿಂದಾಗಿ ಅಭಿಮಾನಿಗಳು ಶುಭ ಸುದ್ದಿಯ ಬಗ್ಗೆ ನಾನಾ ಊಹಾಪೋಹಗಳನ್ನು ಮಾಡುತ್ತಿದ್ದಾರೆ. ಆ ವಿಚಾರ ವೈಷ್ಣವಿ ಮದುವೆಯದಾಗಿದ್ದು, ಶೀಘ್ರದಲ್ಲೇ ಈ ಚೆಲುವೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಹಲವರು ಹೇಳುತ್ತಿದ್ದಾರೆ. ಇದೀಗ ಈ ಸುದ್ದಿ ವೈರಲ್ ಆಗಿದೆ.


ಸದ್ಯ ವೈಷ್ಣವಿ ಕೈಯಲ್ಲಿ ಎರಡ್ಮೂರು ಚಿತ್ರಗಳಿವೆ. ಅದರಲ್ಲಿ ಜೊನ್ನಲಗಡ್ಡ ಎದುರು ನಟಿಸುತ್ತಿರುವ ಚಿತ್ರ ಕೂಡ ಒಂದು... ಇನ್ನು ಈ ಸಿನಿಮಾಗಳ ಮೂಲಕ ಬೇಬಿ ಬ್ಯೂಟಿ ಯಾವ ರೀತಿಯ ಯಶಸ್ಸನ್ನು ಪಡೆಯುತ್ತಾರೋ ಕಾದು ನೋಡೋಣ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.