Bigg Boss New Segment: ಇನ್ನು ಮುಂದೆ ಪ್ರತಿ ಶುಕ್ರವಾರ ಬಿಗ್‌ಬಾಸ್‌ ಮನೆಯೊಳಗಿನ ಸ್ಪರ್ಧಿಗಳು ಫನ್‌ ಫ್ರೈಡೆ ಸೆಗ್ಮೆಂಟ್‌ನಲ್ಲಿ ಮೋಜಿನ ಆಟಗಳನ್ನು ಆಡಲಿದ್ದಾರೆ. ಆಟವೇನೋ ಮೋಜಿನದಿರುತ್ತದೆ, ಆದರೆ ಅದರ ಫಲಿತಾಂಶ ಬರೀ ಮೋಜಿಗೆ ಮಾತ್ರ ಸೀಮಿತವಾಗಿರುವುದಿಲ್ಲ. 


COMMERCIAL BREAK
SCROLL TO CONTINUE READING

ಅದು ಸ್ಪರ್ಧಿಗಳ ಕುರಿತು ಜನರಲ್ಲಿ ಅಭಿಪ್ರಾಯವನ್ನು ರೂಪಿಸುವಲ್ಲಿ ಮುಖ್ಯಪಾತ್ರ ವಹಿಸುತ್ತದೆ. ಈ ಆಟದಲ್ಲಿ ಗೆದ್ದ ಸ್ಪರ್ಧಿಗಳಿಗೆ ಬಿಗ್‌ಬಾಸ್‌ ಬಹುಮಾನವನ್ನೂ ಕೊಡಲಿದ್ದಾರೆ. 


ಇದನ್ನೂ ಓದಿ-WATCH: ಅನುಷ್ಕಾ ಶರ್ಮಾ ಬೇಬಿ ಬಂಪ್ ಕಂಡೇ ಬಿಡ್ತಾ.! ವಿರಾಟ್ ಜೊತೆಗಿನ ವಿಡಿಯೋ ವೈರಲ್‌


ಈ ವಾರದ ಫನ್‌ ಫ್ರೈಡೆ: ಈ ವಾರದ ‘ಫನ್‌ ಫ್ರೈಡೆ’ನಲ್ಲಿ ಮನೆಯೊಳಗಿನ ಸದಸ್ಯರು ‘ಮ್ಯೂಸಿಕಲ್ ಬಕೆಟ್ಸ್‌’ ಆಟ ಆಡಿದರು. ವೃತ್ತದೊಳಗೆ ಬಿಂದಿಗೆಗಳನ್ನು ಸಾಲಾಗಿ ಜೋಡಿಸಿಡಲಾಗಿತ್ತು. ವೃತ್ತದ ಹೊರಗೆ ಸ್ಪರ್ಧಿಗಳು ನಿಂತಿದ್ದರು. ಸಂಗೀತ ಶುರುವಾಗುತ್ತಿದ್ದಂತೆಯೇ ವೃತ್ತದ ಗುಂಟ ಅವರು ಓಡಬೇಕು. ಸಂಗೀತ ನಿಂತ ಹಾಗೆ ವೃತ್ತದೊಳಗೆ ಓಡಿ ಬಿಂದಿಗೆಯ ಮೇಲೆ ಹತ್ತಿ ನಿಂತುಕೊಳ್ಳಬೇಕು. ಯಾರು ನಿಲ್ಲಲು ಬಿಂದಿಗೆ ಸಿಗುವುದಿಲ್ಲವೋ, ಅವರು ಔಟ್‌! 


ಇದನ್ನೂ ಓದಿ-Drone Prathap: ಪ್ರತಾಪ್‌ ಬೆಂಬಲಕ್ಕೆ ನಿಂತ ಕರುನಾಡು..! ಬಿಗ್‌ಬಾಸ್‌ನಲ್ಲಿ ʼಡ್ರೋನ್‌ʼ ಗೆಲ್ಲೋದು ಪಕ್ಕಾ


ಇಂಥದೊಂದು ಮಜವಾದ ಆಟವನ್ನು ಸ್ಪರ್ಧಿಗಳು ಮಜವಾಗಿಯೇ ಆಡಿದರು. ಎಲ್ಲ ಸ್ಪರ್ಧಿಗಳನ್ನೂ ಹಿಮ್ಮೆಟ್ಟಿಸಿ ಕೊನೆಯ ಹಂತದಲ್ಲಿ ಸಿರಿ ಮತ್ತು ತನಿಷಾ ಅಂತಿಮವಾಗಿ ಉಳಿದಿದ್ದರು. ವೃತ್ತದೊಳಗೆ ಇರುವುದು ಒಂದೇ ಬಿಂದಿಗೆ. ಸಂಗೀತ ನಿಲ್ಲುತ್ತಿದ್ದಂತೆಯೇ ಇಬ್ಬರೂ ವೇಗವಾಗಿ ಬಿಂದಿಗೆಯ ಕಡೆಗೆ ಓಡಿದರೂ, ಬಿಂದಿಗೆಯನ್ನು ಮೊದಲು ತಲುಪಿ ಹತ್ತಿ ನಿಲ್ಲಲು ಸಾಧ್ಯವಾಗಿತ್ತು ತನಿಷಾಗೆ. ಹಾಗಾಗಿ ಈ ಸೀಸನ್‌ನ ಮೊದಲ ಫನ್ ಫ್ರೈಡೆನಲ್ಲಿ ತನಿಷಾ ಗೆದ್ದಿದ್ದಲ್ಲದೆ ಬಹುಮಾನವನ್ನೂ ತಮ್ಮದಾಗಿಸಿಕೊಂಡರು. 


ಈ ಆಟದ ರೋಚಕ ಗಳಿಗೆಗಳು, ಅದರ ಫಲಿತಾಂಶ ಎಲ್ಲವನ್ನೂ ಬಿಗ್‌ಬಾಸ್‌ ಕನ್ನಡದ ಉಚಿತ ನೇರಪ್ರಸಾರ ಮಾಡುತ್ತಿರುವ JioCinemaದ ‘ಫನ್ ಫ್ರೈಡೇ’ ಸೆಗ್ಮೆಂಟ್‌ನಲ್ಲಿ ಎಕ್ಸ್‌ಕ್ಲೂಸೀವ್ ಆಗಿ ನೋಡಬಹುದು. 


https://jiocinema.onelink.me/fRhd/z17wt8x0 
ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಿ.
ಶನಿವಾರ-ಭಾನುವಾರದ ವೀಕೆಂಡ್‌ ಎಪಿಸೋಡ್‌ಗಳನ್ನು Colors Kannada ವಾಹಿನಿಯಲ್ಲಿ ರಾತ್ರಿ 9ಕ್ಕೆ ವೀಕ್ಷಿಸಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.