ತಮಿಳು ನಟ ದಳಪತಿ ವಿಜಯ್‌ ಹಾಗೂ ಪೂಜಾ ಹೆಗ್ಡೆ ಅಭಿನಯದ ‘ಬೀಸ್ಟ್‌’ ಸಿನಿಮಾ ಇಂದು ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಬೀಸ್ಟ್ ಟ್ವಿಟರ್ ವಿಮರ್ಶೆ ನೋಡಿದರೆ ಚಿತ್ರದ ಬಗೆಗಿನ ನಿರೀಕ್ಷೆ ಹುಸಿಯಾಗಿದೆ ಎಂದು ಹೇಳಲಾಗ್ತಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಕನ್ನಡದ ಕೋಟ್ಯಾಧಿಪತಿ...ಅಪ್ಪು ಸ್ಥಾನ ತುಂಬ್ತಾರಾ ಕಿಚ್ಚ ಸುದೀಪ್‌..?


ಹಲವರಿಗೆ ಸಿನಿಮಾ ಇಷ್ಟವಾಗಿಲ್ಲ ಎಂದು ಹೇಳಿದ್ದಾರೆ. ಅನೇಕರು #BeastDisaster ಎಂಬ ಹ್ಯಾಷ್‌ಟ್ಯಾಗ್ ಉಲ್ಲೇಖಿಸಿ ಟ್ವೀಟ್ ಮಾಡಿದ್ದಾರೆ. ಭಾರಿ ನಿರೀಕ್ಷೆ ಸೃಷ್ಟಿ ಮಾಡಿದ್ದ ಬೀಸ್ಟ್​ ಬಿಡುಗಡೆ ಆಗಿದೆ. ಈ ಸಿನಿಮಾ ನೋಡಿ ಬಂದಿರುವ ಪ್ರೇಕ್ಷಕರು ಹಲವು ಬಗೆಯಲ್ಲಿ ತಮ್ಮ ಅನಿಸಿಕೆ ಹಂಚಿಕೊಳ್ಳುತ್ತಿದ್ದಾರೆ.


ಕೆಜಿಎಫ್ 2 ಗೆ ಸವಾಲು ನೀಡಲು ಬಂದಿರುವ ಈ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅದರಲ್ಲೂ #BeastDisaster ಎಂಬ ರೀತಿಯಲ್ಲಿ ರಿವೀವ್‌ ಸಿಕ್ಕಿರುವುದರಿಂದ ಗಲ್ಲಾ ಪೆಟ್ಟಿಗೆಯಲ್ಲಿ ಹಿನ್ನಡೆ ಆಗುವ ಸಾಧ್ಯತೆ ಹೆಚ್ಚಿದೆ ಎಂದೂ ಹೇಳಲಾಗುತ್ತಿದೆ. 


ಇದನ್ನೂ ಓದಿ: ಮೊದಲ ದಿನದಂದೇ ಆರ್ ಆರ್ ಆರ್ ದಾಖಲೆ ಧೂಳಿಪಟ ಮಾಡಲಿದೆ ಕೆಜಿಎಫ್ 2...!


ಹಲವು ವಿಚಾರಗಳಲ್ಲಿ ಸಿನಿಮಾ ಎಡವಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಬೀಸ್ಟ್​ ಚಿತ್ರಕ್ಕೆ ನೆಲ್ಸನ್​ ದಿಲೀಪ್​ ಕುಮಾರ್​ ನಿರ್ದೇಶನ ಮಾಡಿದ್ದಾರೆ. ಸನ್​ ಪಿಕ್ಚರ್ಸ್​ ಬ್ಯಾನರ್‌ ಅಡಿಯಲ್ಲಿ ಈ ಸಿನಿಮಾ ಮೂಡಿಬಂದಿದೆ. ಆ್ಯಕ್ಷನ್​ ಜೊತೆ ಕಾಮಿಡಿ ಮೂಲಕವೂ ರಂಜಿಸಲು ನಿರ್ದೇಶಕರು ಪ್ರಯತ್ನಿಸಿದ್ದಾರೆ. ಆದರೆ ಅದೇಕೋ ಪ್ರೇಕ್ಷಕರು ಮಾತ್ರ ನಿರಾಸೆ ವ್ಯಕ್ತಪಡಿಸುತ್ತಿದ್ದಾರೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.