ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಸಿನಿಮಾದ ಕ್ರೇಜ್ ಗೆ ಇಡೀ ಚಿತ್ರ ಜಗತ್ತೇ ಬೆರಗಾಗಿದೆ.ಹೌದು, ಈ ಸಿನಿಮಾ ಈಗ ಬಿಡುಗಡೆಗೂ ಮುನ್ನವೇ ಬಾಕ್ಸ್ ಆಫೀಸ್ ನಲ್ಲಿ ಭಾರಿ ಸದ್ದು ಮಾಡುತ್ತಿದೆ.
ಈ ಚಿತ್ರ ಮುಂಗಡ ಬುಕ್ಕಿಂಗ್ ಅಂತೂ ಚಿತ್ರಕ್ಕೆ ಇರುವ ಕ್ರೇಜ್ ನ್ನು ತೋರಿಸುತ್ತದೆ.ಚಿತ್ರವು ಮುಂಗಡ ಬುಕ್ಕಿಂಗ್ ನಿಂದ ಕನಿಷ್ಠ 25 ಕೋಟಿ ರೂಪಾಯಿಗಳನ್ನು ಸಂಗ್ರಹಿಸುವ ನಿರೀಕ್ಷೆಯಿದೆ ಮತ್ತು ಇದು ಮೊದಲ ದಿನವೇ ಕೆಜಿಎಫ್ 1 ಚಿತ್ರದ ಗಳಿಕೆಯನ್ನು ಮೀರಿಸುತ್ತದೆ ಎನ್ನಲಾಗುತ್ತಿದೆ.
ಸಿನಿಮಾ ಮಾರುಕಟ್ಟೆಯ ವಿಶ್ಲೇಷಕ ಸುಮಿತ್ ಕಡೆಲ್ ಅವರು ಕೆಜಿಎಫ್ 2 ಚಿತ್ರವು ಬಾಕ್ಸ್ ಆಫೀಸ್ ನಲ್ಲಿನ ಮೋಡಿಯ ಕುರಿತಾಗಿ ಟ್ವೀಟ್ ಮಾಡಿದ್ದಾರೆ."ಕೆಜಿಎಫ್ 2 ಚಿತ್ರ( ಹಿಂದಿ) ಮುಂಗಡ ಬುಕಿಂಗ್ ಆರಂಭಿಕ ದಿನಕ್ಕೆ 25 ಕೋಟಿ ರೂಪಾಯಿಗಳನ್ನು ದಾಟಿದೆ.ಬಾಹುಬಲಿ 2 ನಂತರ ಈ ಚಲನಚಿತ್ರವು ಸಾರ್ವಕಾಲಿಕ ಎರಡನೇ ಅತ್ಯಧಿಕ ಮುಂಗಡ ಬುಕ್ಕಿಂಗ್ ಅನ್ನು ದಾಖಲಿಸಿದೆ.ಮೊದಲನೇ ದಿನದ ಬಾಕ್ಸ್ ಆಫೀಸ್ ಗಳಿಕೆಯು 40 ಕೋಟಿ ನಿವ್ವಳ ಮಾರ್ಕ್ ಅನ್ನು ಮೀರಲಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಸೌತ್ ಇಂಡಿಯಾದಲ್ಲಿ ಹಿಂದಿ ಚಿತ್ರಗಳ ಹವಾ ಕಡಿಮೆಯಾಗಲು ಇದೇ ಮುಖ್ಯ ಕಾರಣ ಎಂದ ನಟ ಯಶ್!
#KGFChapter2 ( Hindi ) Advance Booking crosses ₹ 25 cr nett for the opening day.. Film has recorded second highest advance booking of all time after #Baahubali2 .. Day-1 collection is going to surpass ₹ 40 cr nett mark & will take a shot at ₹ 45-50 cr opening. #KGF2 #Yash pic.twitter.com/hjoTCSJ2j0
— Sumit Kadel (@SumitkadeI) April 13, 2022
ಇನ್ನೊಂದೆಡೆಗೆ ಇನ್ನೊಬ್ಬ ಸಿನಿಮಾ ಮಾರುಕಟ್ಟೆಯ ವಿಶ್ಲೇಷಕ ರಮೇಶ್ ಬಾಲಾ ಅವರು ಕೆಜಿಎಫ್ ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ ಬಗ್ಗೆ ಮಾತನಾಡುತ್ತಾ, ಇದು ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಹಿಂದಿ ಆವೃತ್ತಿಯ ಮೊದಲ ದಿನದ ಗಳಿಕೆಯನ್ನು ಮೀರಿಸುತ್ತದೆ ಎಂದು ಅವರು ಹೇಳಿದ್ದಾರೆ.ಕೆಜಿಎಫ್ 1 ಹಿಂದಿ ಆವೃತ್ತಿಯು ತನ್ನ ಜೀವಿತಾವಧಿಯಲ್ಲಿ 40-45 ಕೋಟಿಗಳನ್ನು ಸಂಗ್ರಹಿಸಿದೆ.ಈಗ ಮುಂಗಡ ಬುಕ್ಕಿಂಗ್ ದಾಖಲೆಗಳ ಮೂಲಕ ಕೆಜಿಎಫ್ 2 ಖಂಡಿತವಾಗಿಯೂ ಮೊದಲ ದಿನ ಕನಿಷ್ಠ 43-45 ಕೋಟಿ ರೂ.ಗಳನ್ನು ಆವೃತ್ತಿ ಮೂಲಕ ಕೆಜಿಎಫ್ 1 ಚಿತ್ರದ ಗಳಿಕೆಯನ್ನು ಹಿಂದಿಕ್ಕಲಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ತೂಫಾನ್ ಬಳಿಕ ಈಗ ಸುಲ್ತಾನ್ ಹವಾ.. ಬಿಡುಗಡೆಯಾದ ಒಂದೇ ಗಂಟೆಯಲ್ಲಿ ದಾಖಲೆ!!
ಕೆಜಿಎಫ್ 2 ಚಿತ್ರವು ಏಪ್ರಿಲ್ 14, 2022 ರಂದು ಕನ್ನಡ, ತೆಲುಗು, ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ದೇಶಾದ್ಯಂತ ಬಿಡುಗಡೆಯಾಗುತ್ತಿದೆ.