Beast Trailer: ‘ಬೀಸ್ಟ್’ ಟ್ರೇಲರ್ ರಿಲೀಸ್! ‘ಕೆಜಿಎಫ್-2’ಗೆ ಸವಾಲ್ ಹಾಕೋದು ಗ್ಯಾರಂಟಿ?

ಈ ಟ್ರೇಲರ್‌ನಲ್ಲಿ ವಿಜಯ್ ಸಖತ್​ ಮಾಸ್​ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೇಲರ್‌ ನೋಡಿದಾಗಲೇ ಇದೊಂದು ಕಂಪ್ಲೀಟ್‌ ಆಕ್ಷನ್‌ ಸಿನಿಮಾ ಎಂಬುದು ತಿಳಿದುಬರುತ್ತದೆ.

Written by - Chetana Devarmani | Last Updated : Apr 3, 2022, 12:28 PM IST
  • ತಮಿಳಿನ ಸ್ಟಾರ್ ನಟ ವಿಜಯ್ ನಟನೆಯ ‘ಬೀಸ್ಟ್’ ಸಿನಿಮಾ
  • ಬಿಡುಗಡೆ ಬಳಿಕ ಸಖತ್ ಸದ್ದು ಮಾಡುತ್ತಿರುವ ‘ಬೀಸ್ಟ್’ ಟ್ರೇಲರ್
  • ‘ಕೆಜಿಎಫ್‌- 2’ಗೂ ಒಂದು ದಿನ ಮುಂಚೆ ಬೀಸ್ಟ್‌ ಸಿನಿಮಾ ತೆರೆಗೆ
Beast Trailer: ‘ಬೀಸ್ಟ್’ ಟ್ರೇಲರ್ ರಿಲೀಸ್! ‘ಕೆಜಿಎಫ್-2’ಗೆ ಸವಾಲ್ ಹಾಕೋದು ಗ್ಯಾರಂಟಿ? title=
Beast vs KGF 2

ನವದೆಹಲಿ: ತಮಿಳಿನ ಸ್ಟಾರ್ ನಟ ವಿಜಯ್ (Vijay) ನಟನೆಯ 'ಬೀಸ್ಟ್' ಸಿನಿಮಾದ ಟ್ರೇಲರ್ (Beast Trailer) ಬಿಡುಗಡೆ ಆಗಿದೆ. ‘ಕೆಜಿಎಫ್‌- 2’ ರಿಲೀಸ್‌ಗೂ ಒಂದು ದಿನ ಮುಂಚೆ ಬೀಸ್ಟ್‌ (Beast) ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಇದು ‘ಕೆಜಿಎಫ್- 2’ಗೆ ಸವಾಲ್‌ ಹಾಕೋದು ಗ್ಯಾರಂಟಿ ಎಂದು ಹಲವರು ಮಾತನಾಡುತ್ತಿದ್ದಾರೆ.

ಸದ್ಯ ಎಲ್ಲೆಲ್ಲೂ ‘ಕೆಜಿಎಫ್‌ 2’ (KGF chapter 2) ಹವಾ ಬಲು ಜೋರಾಗಿದೆ. ಏಪ್ರಿಲ್‌ 14 ರಂದು ‘ಕೆಜಿಎಫ್‌ 2’ ಚಿತ್ರ ರಿಲೀಸ್‌ ಆಗುತ್ತಿದ್ದು, ಅಭಿಮಾನಿಗಳು ಕಾತುರರಾಗಿದ್ದಾರೆ. ಆದರೆ ವಿಷಯ ಅದಲ್ಲ, ಇದೀಗ ಏಪ್ರಿಲ್‌ 13 ರಂದು ಅಂದರೆ ‘ಕೆಜಿಎಫ್‌ 2’ ರಿಲೀಸ್‌ಗೂ ಒಂದು ದಿನ ಮುಂಚೆ ಬೀಸ್ಟ್‌ (Beast) ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ತಮಿಳಿನ ಈ ಸಿನಿಮಾ ಕನ್ನಡದ ‘ಕೆಜಿಎಫ್‌ 2’ಗೆ ಸವಾಲೆಸೆಯಲಿದೆ.

ಇದನ್ನೂ ಓದಿ: ಕಾರು ಅಪಘಾತ: ಬಾಲಿವುಡ್ ನಟಿ ಮಲೈಕಾ ಆರೋರಾ ಆಸ್ಪತ್ರೆಗೆ ದಾಖಲು

ತಮಿಳಿನ ಸ್ಟಾರ್ ನಟ ವಿಜಯ್ (Vijay) ನಟನೆಯ 'ಬೀಸ್ಟ್' ಸಿನಿಮಾದ ಟ್ರೇಲರ್ (Beast Trailer) ಸಿಕ್ಕಾಪಟ್ಟೆ ಆಕ್ಷನ್‌ನಿಂದ ಕೂಡಿದೆ. ಟ್ರೇಲರ್ ಕಂಡು ಸಿನಿಪ್ರಿಯರು ನಿಬ್ಬೆರಗಾಗಿದ್ದಾರೆ. ಈ ಸಿನಿಮಾವನ್ನು ನೆಲ್ಸನ್​ ದಿಲೀಪ್​ಕುಮಾರ್​ ನಿರ್ದೇಶನ ಮಾಡಿದ್ದು, ನಟಿ ಪೂಜಾ ಹೆಗ್ಡೆ (Pooja Hegde) ನಾಯಕಿಯಾಗಿದ್ದಾರೆ. ಇದೇ ಮೊದಲ ಬಾರಿಗೆ ವಿಜಯ್​ಗೆ ಜೊತೆಯಾಗಿ ಪೂಜಾ ಕಾಣಿಸಿಕೊಂಡಿದ್ದಾರೆ.

ಚೆನ್ನೈನ ಮಾಲ್​ ಒಂದನ್ನು ಹೈಜಾಕ್​ ಮಾಡಲಾಗುತ್ತದೆ. ಹೈಜಾಕರ್ಸ್​ ಒಂದಷ್ಟು ಜನರನ್ನು ಒತ್ತೆಯಾಳಾಗಿ ಇಟ್ಟುಕೊಂಡಿರುತ್ತಾರೆ. ಇದೇ ಮಾಲ್​ನಲ್ಲಿ ಮಾಜಿ ಸೈನಿಕ ವೀರರಾಘವನ್​ (ವಿಜಯ್​) ಕೂಡ ಇರುತ್ತಾರೆ. ಆತ ನಟೋರಿಯಸ್​ ಸ್ಪೈ ಆಗಿರುತ್ತಾರೆ. ಮಾಲ್​ನಿಂದ ವೀರರಾಘವನ್ ಜನರನ್ನು ಹೇಗೆ ಹೊರ ತರುತ್ತಾರೆ, ಆತನ ಹಿನ್ನೆಲೆ ಏನು ಎಂಬುದೇ ಚಿತ್ರದ ಕತೆಯಾಗಿದೆ ಎಂಬುದು ಟ್ರೇಲರ್​ನಿಂದ ತಿಳಿದು ಬಂದಿದೆ.

ಈ ಟ್ರೇಲರ್‌ನಲ್ಲಿ ವಿಜಯ್ ಸಖತ್​ ಮಾಸ್​ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೇಲರ್‌ ನೋಡಿದಾಗಲೇ ಇದೊಂದು ಕಂಪ್ಲೀಟ್‌ ಆಕ್ಷನ್‌ ಸಿನಿಮಾ ಎಂಬುದು ತಿಳಿದು ಬರುತ್ತದೆ. ಅದ್ಭುತ ಆಕ್ಷನ್ ದೃಶ್ಯಗಳು, ಗನ್ ಫೈಟ್‌ಗಳು ಚಿತ್ರದಲ್ಲಿವೆ. ಜೊತೆಗೆ ಒಂದಷ್ಟು ಹಾಸ್ಯವೂ ಸಿನಿಮಾದಲ್ಲಿರುವುದು ಟ್ರೇಲರ್‌ನಿಂದ ಗೊತ್ತಾಗುತ್ತದೆ.

ಇದನ್ನೂ ಓದಿ: Bharjari Gandu: ದೊಡ್ಡ ಮೊತ್ತಕ್ಕೆ ಸೇಲ್ ಆಯ್ತು ‘ಭರ್ಜರಿ ಗಂಡು’ ಹಿಂದಿ ಡಬ್ಬಿಂಗ್ ರೈಟ್ಸ್

'ಬೀಸ್ಟ್' (Beast vs KGF2) ಸಿನಿಮಾ ಕನ್ನಡದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ 'ಕೆಜಿಎಫ್ 2' ಬಿಡುಗಡೆಗೂ ಒಂದು ದಿನ ಮುಂಚೆ ಅಂದರೆ ಏಪ್ರಿಲ್ 13 ರಂದು ಬಿಡುಗಡೆ ಆಗುತ್ತಿದೆ. ಇದೀಗ ಬೀಸ್ಟ್‌ ಟ್ರೇಲರ್ ನೋಡಿದ ಜನ 'ಕೆಜಿಎಫ್ 2' ಎದುರು ಪ್ರಬಲ ಸ್ಪರ್ಧೆಯನ್ನೇ ಒಡ್ಡಲಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News