Kantara varaha roopam song : ಕಾಪಿರೈಟ್ ಕೇಸ್‌ ಎದುರಿಸುತ್ತಿದ್ದ ಕಾಂತಾರ ಚಿತ್ರತಂಡಕ್ಕೆ ಬಿಗ್‌ ರಿಲೀಫ್‌ ಸಿಕ್ಕಿದೆ. ವರಾಹ ರೂಪಂ ಹಾಡನ್ನು ಪ್ರಸಾರ ಮಾಡದಂತೆ ನೀಡಿದ್ದ ಅದೇಶವನ್ನು ನ್ಯಾಯಾಲಯ ರದ್ದುಗೊಳಿಸಿದೆ. ಇದರಿಂದ ಹೊಂಬಾಳೆ ಫಿಲಂಸ್‌ಗೆ ಗೆಲುವು ಲಭಿಸಿದಂತಾಗಿದೆ.


COMMERCIAL BREAK
SCROLL TO CONTINUE READING

ರಿಷಬ್‌ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಕಾಂತಾರ ಸಿನಿಮಾದ ಮೋಸ್ಟ್‌ ಫೇವರಿಟ್‌ ಹಾಡು, ʼವರಾಹ ರೂಪಂʼ ತೈಕ್ಕುಡಂ ಬ್ರಿಡ್ಜ್ ತಂಡದ ʼನವರಸಂ' ಹಾಡಿನ ಟ್ಯೂನ್‌ನನ್ನು ಕದ್ದು ರಚಿಸಲಾಗಿದೆ ಎಂಬ ಆರೋಪವನ್ನು ಕಾಂತಾರ ಚಿತ್ರತಂಡ ಎದುರಿಸುತ್ತಿತ್ತು. ಅಲ್ಲದೆ, ಈ ಕುರಿತು ತೈಕ್ಕುಡಂ ಬ್ರಿಡ್ಜ್ ತಂಡ ನ್ಯಾಯಾಲಯದ ಮೊರೆ ಹೋಗಿ ಹಾಡನ್ನು ಪ್ರಸಾರ ಮಾಡದಂತೆ ತಡೆಯಾಜ್ಞೆ ತಂದಿತ್ತು.


ಇದನ್ನೂ ಓದಿ: ಕನ್ನಡತಿ ರಶ್ಮಿಕಾಗೆ ಬ್ಯಾನ್‌ ಶಿಕ್ಷೆ.. ಇದು ನ್ಯಾಯವೇ. ಅಂತಹ ತಪ್ಪು ಅವರೇನು ಮಾಡಿದ್ರು..!


ಅಲ್ಲದೆ, ತಡೆಯಾಜ್ಞೆಯನ್ನು ರದ್ದುಗೊಳಿಸುವಂತೆ ಹೊಂಬಾಳೆ ಸಂಸ್ಥೆ ಕೇರಳ ಹೈಕೋರ್ಟ್‌ನ ಮೊರೆ ಹೋಗಿತ್ತು. ಇದೀಗ ಕೋಳಿಕ್ಕೊಡ್‌ ನ್ಯಾಯಾಲಯ ವರಾಹ ರೂಪಂ ಹಾಡಿಗೆ ನೀಡಿದ್ದ ತಡೆಯಾಜ್ಞೆಯನ್ನು ತೆರವುಗೊಳಿಸಿದೆ. ಪ್ರಕರಣವನ್ನು ಶಶಿರಾಜ್ ಕಾವೂರ್ ಅವರು ವಾದಿಸಿದ್ದಾರೆ. ಇವರು ಕಾಂತಾರ ಸಿನಿಮಾದಲ್ಲಿ ಮೂಡಿಬಂದಿರುವ ವರಾಹ ರೂಪಂ ಹಾಡನ್ನು ಬರೆದಿದ್ದಾರೆ. ಇದೀಗ ಅವರೇ ಸ್ವತಃ ಗೆಲುವಿನ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.


ಇನ್ನು ಅಮೆಜಾನ್ ಪ್ರೈಂನಲ್ಲಿ ಕಾಂತಾರ ಸಿನಿಮಾ ಬಿಡುಗಡೆಯಾಗಿದೆ. ಸಿನಿಮಾದಲ್ಲಿ ವರಾಹ ರೂಪಂ ಹಾಡಿನ ಹೊಸ ಟ್ಯೂನ್‌ನನ್ನು ಬಳಸಲಾಗಿತ್ತು. ಬಿಡುಗಡೆಯಾದ ದಿನದಿಂದಲೇ ಕಾಂತಾರಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ 50 ದಿನ ಮುಗಿಸಿರುವ ದಿ ಡಿವೈನ್‌ ಬ್ಲಾಕ್ಬಸ್ಟರ್‌ ಸಿನಿಮಾ 400 ಕೋಟಿಗೂ ಹೆಚ್ಚು ಹಣ ಗಳಿಕೆ ಮಾಡಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.