ಸನ್ನೆ ಮಾಡಿದ ಕನ್ನಡತಿ ರಶ್ಮಿಕಾ ಮಂದಣ್ಣಗೆ ಕನ್ನಡನಾಡಲ್ಲಿ ಬ್ಯಾನ್‌...!

ಕಿರಿಕ್‌ ಬೆಡಗಿ, ನ್ಯಾಷುನಲ್‌ ಕ್ರಷ್‌, ರಶ್ಮಿಕಾ ಮಂದಣ್ಣ ಅವರಿಗೆ ಕರುನಾಡಿನಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಕನ್ನಡನಾಡಿನಿಂದ ರಶ್ಮಿಕಾ ಅವರನ್ನು ಬ್ಯಾನ್‌ ಮಾಡಲಾಗಿದೆ ಎಂಬ ಸುದ್ದಿಯೊಂದು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅಲ್ಲದೆ, ʼರಶ್ಮಿಕಾ ಮಂದಣ್ಣ ಬ್ಯಾನ್‌ʼ, ʼರಶ್ಮಿಕಾ ಬಾಯ್ಕಾಟ್‌ʼ ಎಂಬ ಹ್ಯಾಷ್‌ ಟ್ಯಾಗ್‌ಗಳು ಕೂಡಾ ಟ್ರೇಡಿಂಗ್ ಆಗುತ್ತಿವೆ.

Written by - Krishna N K | Last Updated : Nov 25, 2022, 03:06 PM IST
  • ನ್ಯಾಷುನಲ್‌ ಕ್ರಷ್‌, ರಶ್ಮಿಕಾ ಮಂದಣ್ಣ ಅವರಿಗೆ ಕರುನಾಡಿನಲ್ಲಿ ವಿರೋಧ ವ್ಯಕ್ತವಾಗುತ್ತಿದೆ
  • ಕನ್ನಡನಾಡಿನಿಂದ ರಶ್ಮಿಕಾ ಅವರನ್ನು ಬ್ಯಾನ್‌ ಮಾಡಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ
  • ʼರಶ್ಮಿಕಾ ಮಂದಣ್ಣ ಬ್ಯಾನ್‌ʼ, ʼರಶ್ಮಿಕಾ ಬಾಯ್ಕಾಟ್‌ʼ ಎಂಬ ಹ್ಯಾಷ್‌ ಟ್ಯಾಗ್‌ಗಳು ಕೂಡಾ ಟ್ರೇಡಿಂಗ್ ಆಗುತ್ತಿವೆ.
ಸನ್ನೆ ಮಾಡಿದ ಕನ್ನಡತಿ ರಶ್ಮಿಕಾ ಮಂದಣ್ಣಗೆ ಕನ್ನಡನಾಡಲ್ಲಿ ಬ್ಯಾನ್‌...!

Rashmika Mandanna Ban : ಕಿರಿಕ್‌ ಬೆಡಗಿ, ನ್ಯಾಷುನಲ್‌ ಕ್ರಷ್‌, ರಶ್ಮಿಕಾ ಮಂದಣ್ಣ ಅವರಿಗೆ ಕರುನಾಡಿನಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಕನ್ನಡನಾಡಿನಿಂದ ರಶ್ಮಿಕಾ ಅವರನ್ನು ಬ್ಯಾನ್‌ ಮಾಡಲಾಗಿದೆ ಎಂಬ ಸುದ್ದಿಯೊಂದು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅಲ್ಲದೆ, ʼರಶ್ಮಿಕಾ ಮಂದಣ್ಣ ಬ್ಯಾನ್‌ʼ, ʼರಶ್ಮಿಕಾ ಬಾಯ್ಕಾಟ್‌ʼ ಎಂಬ ಹ್ಯಾಷ್‌ ಟ್ಯಾಗ್‌ಗಳು ಕೂಡಾ ಟ್ರೇಡಿಂಗ್ ಆಗುತ್ತಿವೆ.

ಟಾಲಿವುಡ್‌, ಕಾಲಿವುಡ್‌, ಬಾಲಿವುಡ್‌ ಸೇರಿದಂತೆ ಭಾರತೀಯ ಚಿತ್ರರಂಗದಲ್ಲಿ ರಶ್ಮಿಕಾ ಮಂದಣ್ಣ ಸಖತ್‌ ಬ್ಯುಸಿಯಾಗಿದ್ದಾರೆ. ಈ ನಡುವೆ ಕರುನಾಡಿನ ಸಿನಿ ಪ್ರೇಕ್ಷಕರು ರಶ್ಮಿಕಾ ವಿರುದ್ಧ ಸಿಡಿದೆದ್ದಿದ್ದಾರೆ. ಅಲ್ಲದೆ, ಅವರ ಸಿನಿಮಾಗಳನ್ನು ಕರ್ನಾಟಕದಲ್ಲಿ ಬ್ಯಾನ್‌ ಮಾಡ್ಬೇಕು ಎಂಬ ಮಾತುಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ. ʼರಶ್ಮಿಕಾ ಮಂದಣ್ಣ ಬ್ಯಾನ್‌ʼ ʼಬಾಯ್ಕಟ್‌ ರಶ್ಮಿಕಾʼ ಎಂಬ ಹ್ಯಾಷ್‌ ಟ್ಯಾಗ್ಸ್‌ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಸದ್ದು ಮಾಡುತ್ತಿವೆ.

ಇದನ್ನೂ ಓದಿ: ಬಿಗ್‌ಬಾಸ್‌ ಹೌಸ್‌ನಲ್ಲಿ ಕಿಸ್‌ ಸದ್ದು : ತುಟಿಗೆ ತುಟಿ ಒತ್ತಿದ್ಯಾರು..?

ಕನ್ನಡ ಸಿನಿ ಪ್ರೇಕ್ಷಕರು ರಶ್ಮಿಕಾ ವಿರುದ್ಧ ಈ ವಾರ್‌ ನಡೆಸಲು ರಶ್ಮಿಕಾ ಅವರ ಸಂದರ್ಶನವೊಂದರಲ್ಲಿ ಮಾಡಿದ ಸನ್ನೆ ಕಾರಣವಾಗಿದೆ ಎಂದು ಹೇಳಲಾಗಿದೆ. ಖಾಸಗಿ ವಾಹಿನಿ ಒಂದು ನಡೆಸಿದ ಸಂದರ್ಶನದಲ್ಲಿ ರಶ್ಮಿಕಾ ಅವರ ಸಿನಿ ಜರ್ನಿಯ ಕುರಿತು ನಿರೂಪಕಿ ಪ್ರಶ್ನೆ ಕೇಳಿದ್ದರು. ಅದ್ರಲ್ಲಿ ಅವರು, ತಮ್ಮ ಮೊದಲ ಸಿನಿಮಾ ಕಿರಿಕ್‌ ಪಾರ್ಟಿ ಹೆಸರು ತೆಗೆದು ಪರಮವಹ ಸ್ಟುಡಿಯೋಸ್‌ ಹೆಸರು ಹೇಳದೆ ಬರೀ ಸನ್ನೆ ಮಾಡುವ ಮೂಲಕ ಅವಮಾನ ಮಾಡಿದ್ದರು. ಅಲ್ಲದೆ, ತಮ್ಮನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗಿತ್ತು ಎಂದು ತಿಳಿಸುತ್ತಾರೆ. 

ಸಿನಿ ರಂಗಕ್ಕೆ ರಶ್ಮಿಕಾ ಪ್ರವೇಶಿಸಲು ಕಾರಣವಾದ ಪ್ರೋಡಕ್ಷನ್‌ ಹೌಸ್‌ ಹೆಸರು ಹೇಳದ ಕಾರಣ ಅಭಿಮಾನಿಗಳ ಮನಸ್ಸಿಗೆ ನೋವಾಗಿತ್ತು. ಅಲ್ಲದೆ, ರಿಷಬ್‌ ಶೆಟ್ಟಿಯವರು ಸಹ ಸಂದರ್ಶನವೊಂದರಲ್ಲಿ ರಶ್ಮಿಕಾ ಬಗ್ಗೆ ಕೇಳಿದ ಪ್ರಶ್ನೆಗೆ ರಶ್ಮಿಕಾ ಅವರಂತೆ ಸನ್ನೆ ಮಾಡಿ ಅವರ ಬಗ್ಗೆ ಮಾತನಾಡಲು ನಿರಾಕರಿಸುವ ಮೂಲಕ ಟಾಂಗ್‌ ನೀಡುತ್ತಾರೆ ಈ ಕುರಿತ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

More Stories

Trending News