ಕನ್ನಡತಿ ರಶ್ಮಿಕಾಗೆ ಬ್ಯಾನ್‌ ಶಿಕ್ಷೆ.. ಇದು ನ್ಯಾಯವೇ. ಅಂತಹ ತಪ್ಪು ಅವರೇನು ಮಾಡಿದ್ರು..!

ಭಾರತೀಯ ಸಿನಿರಂಗದ ಟಾಪ್‌ ನಟಿಯರಲ್ಲಿ ಒಬ್ಬರಾಗಿ ಮಿಂಚುತ್ತಿರುವ ನ್ಯಾಷುನಲ್‌ ಕ್ರಷ್‌, ರಶ್ಮಿಕಾ ಮಂದಣ್ಣ ಅವರಿಗೆ ಕರ್ನಾಟಕ ಸಿನಿ ಪ್ರೇಕ್ಷಕರು ಭಾರಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ, ʼರಶ್ಮಿಕಾ ಮಂದಣ್ಣ ಬ್ಯಾನ್‌ʼ, ʼರಶ್ಮಿಕಾ ಬಾಯ್ಕಾಟ್‌ʼ ಎಂಬ ಪದ ಬಳಕೆ ಮಾಡಲಾಗುತ್ತಿದೆ. ಅಷ್ಟಕ್ಕೂ ರಶ್ಮಿಕಾ ಮಾಡಿದ ತಪ್ಪೇನು ಎಂದು ಅವರ ಕಟ್ಟಾಭಿಮಾನಿಗಳು ಕೇಳುತ್ತಿದ್ದಾರೆ.

Written by - Krishna N K | Last Updated : Nov 25, 2022, 04:36 PM IST
  • ಭಾರತೀಯ ಸಿನಿರಂಗದ ಟಾಪ್‌ ನಟಿಯರಲ್ಲಿ ಒಬ್ಬರಾಗಿ ಮಿಂಚುತ್ತಿರುವ ನ್ಯಾಷುನಲ್‌ ಕ್ರಷ್‌, ರಶ್ಮಿಕಾ
  • ಕರುನಾಡಿನ ಸಿನಿ ಪ್ರೇಕ್ಷಕರು ರಶ್ಮಿಕಾ ವಿರುದ್ಧ ಸಿಡಿದೆದ್ದಿದ್ದಾರೆ
  • ಅವರ ಸಿನಿಮಾಗಳನ್ನು ಕರ್ನಾಟಕದಲ್ಲಿ ಬ್ಯಾನ್‌ ಮಾಡ್ಬೇಕು ಎಂಬ ಮಾತುಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ.
ಕನ್ನಡತಿ ರಶ್ಮಿಕಾಗೆ ಬ್ಯಾನ್‌ ಶಿಕ್ಷೆ.. ಇದು ನ್ಯಾಯವೇ. ಅಂತಹ ತಪ್ಪು ಅವರೇನು ಮಾಡಿದ್ರು..! title=

ಬೆಂಗಳೂರು : ಭಾರತೀಯ ಸಿನಿರಂಗದ ಟಾಪ್‌ ನಟಿಯರಲ್ಲಿ ಒಬ್ಬರಾಗಿ ಮಿಂಚುತ್ತಿರುವ ನ್ಯಾಷುನಲ್‌ ಕ್ರಷ್‌, ರಶ್ಮಿಕಾ ಮಂದಣ್ಣ ಅವರಿಗೆ ಕರ್ನಾಟಕ ಸಿನಿ ಪ್ರೇಕ್ಷಕರು ಭಾರಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ, ʼರಶ್ಮಿಕಾ ಮಂದಣ್ಣ ಬ್ಯಾನ್‌ʼ, ʼರಶ್ಮಿಕಾ ಬಾಯ್ಕಾಟ್‌ʼ ಎಂಬ ಪದ ಬಳಕೆ ಮಾಡಲಾಗುತ್ತಿದೆ. ಅಷ್ಟಕ್ಕೂ ರಶ್ಮಿಕಾ ಮಾಡಿದ ತಪ್ಪೇನು ಎಂದು ಅವರ ಕಟ್ಟಾಭಿಮಾನಿಗಳು ಕೇಳುತ್ತಿದ್ದಾರೆ.

ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ರಶ್ಮಿಕಾ ಮಂದಣ್ಣ ಸಖತ್‌ ಬ್ಯುಸಿಯಾಗಿದ್ದಾರೆ. ಈ ನಡುವೆ ಕರುನಾಡಿನ ಸಿನಿ ಪ್ರೇಕ್ಷಕರು ರಶ್ಮಿಕಾ ವಿರುದ್ಧ ಸಿಡಿದೆದ್ದಿದ್ದಾರೆ. ಅಲ್ಲದೆ, ಅವರ ಸಿನಿಮಾಗಳನ್ನು ಕರ್ನಾಟಕದಲ್ಲಿ ಬ್ಯಾನ್‌ ಮಾಡ್ಬೇಕು ಎಂಬ ಮಾತುಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇದಕ್ಕೆಲ್ಲ ಕಾರಣ ಏನು ಎಂದು ಹುಡುಕಿಕೊಂಡು ಹೋದಾಗ ಇತ್ತೀಚಿಗೆ ವೈರಲ್‌ ಆದ ವಿಡಿಯೋ ಉತ್ತರ ನೀಡುತ್ತದೆ. ಅಲ್ಲದೆ, ಸಾಲು ಸಾಲು ತಪ್ಪುಗಳು ಕನ್ನಡಿಗರನ್ನು ರಶ್ಮಿಕಾ ವಿರುದ್ಧ ಸಿಡಿದೇಳುವಂತೆ ಮಾಡಿವೆ.

ಇದನ್ನೂ ಓದಿ: ಸನ್ನೆ ಮಾಡಿದ ಕನ್ನಡತಿ ರಶ್ಮಿಕಾ ಮಂದಣ್ಣಗೆ ಕನ್ನಡನಾಡಲ್ಲಿ ಬ್ಯಾನ್‌...!

ಕಾರಣ ನಂ1 - ರಶ್ಮಿಕಾ ಅವರು ಸಂದರ್ಶನವೊಂದರಲ್ಲಿ ಅವರ ಸಿನಿ ಜರ್ನಿಯ ಕುರಿತು ಮಾತನಾಡುವಾಗ ಅವರು, ತಮ್ಮ ಮೊದಲ ಸಿನಿಮಾ ಕಿರಿಕ್‌ ಪಾರ್ಟಿ ಹೆಸರು ತೆಗೆದು ಪರಮವಹ ಸ್ಟುಡಿಯೋಸ್‌ ಹೆಸರು ಹೇಳದೆ ಬರೀ ಸನ್ನೆ ಮಾಡುವ ಮೂಲಕ ಅವಮಾನ ಮಾಡಿದ್ದರು. ಅಲ್ಲದೆ, ತಮ್ಮನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗಿತ್ತು ಎಂದು ಹೇಳಿದ್ದರು. ಇದು ಕನ್ನಡಿಗರ ಕೋಪಕ್ಕೆ ಕಾರಣವಾಗಿತ್ತು. ಸಿನಿ ರಂಗಕ್ಕೆ ರಶ್ಮಿಕಾ ಪ್ರವೇಶಿಸಲು ಕಾರಣವಾದ ಪ್ರೋಡಕ್ಷನ್‌ ಹೌಸ್‌ ಹೆಸರು ಹೇಳದ ಕಾರಣ ಅಭಿಮಾನಿಗಳ ಮನಸ್ಸಿಗೂ ನೋವಾಗಿತ್ತು. 

ಕಾರಣ ನಂ2- ಕನ್ನಡ ಭಾಷೆ ಬರಲ್ಲ ಎಂದು ಹೇಳುವ ಮೂಲಕ ಒಬ್ಬ ಕನ್ನಡತಿಯಾಗಿ ಕನ್ನಡದ ಸಿನಿರಂಗದಿಂದಲೇ ಬೆಳೆದು ಹಲವಾರು ಪ್ರತಿಷ್ಠಿತ ವೇದಿಕೆಯಲ್ಲಿ ಕನ್ನಡ ಮಾತನಾಡಿಲ್ಲ, ಮಾತನಾಡಲು ಪ್ರಯತ್ನಪಡಲಿಲ್ಲ. ಅಲ್ಲದೆ, ಕೆಲವು ಸಂದರ್ಶನಗಳಲ್ಲಿ ಕನ್ನಡ ಮಾತನಾಡಲು ಕಷ್ಟ ಎಂದು ಹೇಳಿದ್ದರು. ಇನ್ನು ತಮಿಳು ಖಾಸಗಿ ವಾಹಿನಿ ನಡೆಸಿದ ಸಂದರ್ಶನದಲ್ಲಿ ತಮಿಳು ಮಾತನಾಡುತ್ತ ಕನ್ನಡ ಭಾಷೆ ಮಾತನಾಡಲು ಕಷ್ಟ ಎಂದು ಹೇಳಿದ್ದರು. ಹೀಗೆ ಕನ್ನಡಾಭಿಮಾನ ಮೆರೆಯಬೇಕಿದ್ದ ಕನ್ನಡತಿ ತೆಲುಗು, ತಮಿಳು ಭಾಷೆಯ ಮೇಲೆ ಒಲವು ತೋರಿದ್ದು ಕನ್ನಡಿಗರ ಕೋಪಕ್ಕೆ ಕಾರಣವಾಗಿತ್ತು.

ಕಾರಣ ನಂ3- ನಟ ರಕ್ಷಿತ್‌ ಶೆಟ್ಟಿಯವರನ್ನು ಬಿಟ್ಟ ನಂತರ ವಿಜಯ್‌ ದೇವರಕೊಂಡ ಜೊತೆ ಲವ್‌ನಲ್ಲಿ ರಶ್ಮಿಕಾ ಬ್ಯುಸಿಯಾಗಿದ್ದಾರೆ ಎನ್ನುವಂತೆ ಮಾಡಿದ್ದು, ಗೀತಗೋವಿಂದಂ ಸಿನಿಮಾದ ವೈರಲ್‌ ಆದ ಲಿಪ್‌ಲಾಕ್‌ ಸೀನ್‌. ಇಷ್ಟು ದಿನ ಸಾನ್ವಿಯಂತೆ ನೋಡಿದ್ದ ಅಭಿಮಾನಿಗಳು ಒಮ್ಮೇಲೆ ಅಂತಹ ಹಸಿಬಿಸಿ ದೃಶ್ಯವನ್ನು ಕಂಡು ಕಕ್ಕಾಬಿಕ್ಕಿಯಾಗಿದ್ದರು. ರಕ್ಷಿತ್‌ ಶೆಟ್ಟಿ ಅಭಿಮಾನಿಗಳಿಗೆ ಇದು ಬೇಸರ ತರಿಸಿತ್ತು. 

ಕಾರಣ ನಂ4- ಬಹುಮುಖ್ಯವಾಗಿ ಕನ್ನಡಿಗರು ರಶ್ಮಿಕಾ ವಿರುದ್ದ ಸಿಡಿದೇಳಲು ಕಾರಣವಾಗಿದ್ದು, ಭಾಷಾಭಿಮಾನ. ತೆಲುಗು, ತಮಿಳು ಭಾಷೆಯನ್ನು ಮಾತನಾಡುವ ರಶ್ಮಿಕಾ ಕನ್ನಡ ಕಷ್ಟವೆಂಬಂತೆ ವರ್ತಿಸಿದ್ದು, ಕನ್ನಡಾಭಿಮಾನಿಗಳಲ್ಲಿ ಅಸಮಾಧಾನ ತರಿಸಿತ್ತು. ಅನೇಕ ವೇದಿಕೆಯಲ್ಲಿ ತೆಲುಗು ಕಲಿತು ಮಾತನಾಡಿದೆ ಎಂದು ಹೇಳಿದ ರಶ್ಮಿಕಾ ಕನ್ನಡ ಕಲಿಯುತ್ತೇನೆ ಎನ್ನಲಿಲ್ಲ ಅಲ್ಲದೆ, ಕನ್ನಡ ಭಾಷಾಭಿಮಾನವನ್ನೂ ಸಹ ಪ್ರದರ್ಶಿಸಲಿಲ್ಲ. ಇನ್ನು ವೇದಿಕೆಯೊಂದರ ಮೇಲೆ ಸಾಲು ಮರದ ತಿಮ್ಮಕ್ಕನವರ ಬಗ್ಗೆ ಹೇಳಲು ರಶ್ಮಿಕಾ ತಡವರಿಸಿದ್ದರು, ಆಗ ತಮಿಳು ಖ್ಯಾತ ನಟ ವಿವೇಕ್‌ ಅವರು ತಿಮ್ಮಕ್ಕನವರ ಬಗ್ಗೆ ಹೇಳಿ ಕನ್ನಡಿಗರ ಮೆಚ್ಚುಗೆಗೆ ಪಾತ್ರರಾಗಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News