Ashok Kumar Movies : ಅಶೋಕ್ ಕುಮಾರ್ ತಮ್ಮ ನಟನೆಯ ಮೂಲಕವೇ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದ್ದಾರೆ. ಆದರೆ, ಸಿನಿಮಾದಲ್ಲಿ ನಟನೆ ಎನ್ನುವ ಕಾರಣಕ್ಕೆ ಅವರ ವೈಯಕ್ತಿಕ ಬದುಕು ಸಮಸ್ಯೆಯ ಗೂಡಾಗಿತ್ತು ಎನ್ನಲಾಗಿದೆ. ಹೌದು, ಈ ವಿಷಯವನ್ನು ಸ್ವತಃ ಅಶೋಕ್ ಕುಮಾರ್ ಸಂದರ್ಶನವೊಂದರಲ್ಲಿ ಹೇಳಿದ್ದರು. ಅವರು ಚಲನಚಿತ್ರ ಜಗತ್ತಿಗೆ ಪ್ರವೇಶಿಸಿದಾಗ, ಈ ಉದ್ಯಮದ ಬಗ್ಗೆ ಜನರಿಗೆ ಅಂಥಹ ಒಳ್ಳೆಯ ಅಭಿಪ್ರಾಯ ಇರಲಿಲ್ಲ. ಹಾಗಾಗಿ ಇವರು ಸಿನಿಮಾ ರಂಗ ಪ್ರವೇಶಿಸುವುದು ಇವರ ಕುಟುಂಬಕ್ಕೂ ಇಷ್ಟವಿರಲಿಲ್ಲವಂತೆ. 


COMMERCIAL BREAK
SCROLL TO CONTINUE READING

ಮುರಿದು ಬಿತ್ತು ಅಶೋಕ್ ಕುಮಾರ್ ಮದುವೆ : 
ವರದಿಗಳ ಪ್ರಕಾರ, ಹಿರಿಯ ನಟ ಅಶೋಕ್ ಕುಮಾರ್ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವುದು ಅವರ ಕುಟುಂಬಕ್ಕೆ ಇಷ್ಟವಿರಲಿಲ್ಲವಂತೆ. ಮೊದಲ ಚಿತ್ರದ ನಂತರ, ಮನೆಯಲ್ಲಿ ಭಾರೀ ದೊಡ್ಡ ಗಲಾಟೆಯೇ ನಡೆದಿತ್ತಂತೆ. ತಾಯಿ ಅಳಲು ಪ್ರಾರಂಭಿಸಿದ್ದರಂತೆ. ಈ ಹಿನ್ನೆಲೆಯಲ್ಲಿ ಸಿನಿಮಾದಿಂದ ದೂರ ಉಳಿಯುವಂತೆ ಮಗನ ಮನಸ್ಸನ್ನು ಬದಲಿಸಲು ತಂದೆ ಕೂಡಾ ಬಹಳ ಪ್ರಯತ್ನ ಪಟ್ಟಿದ್ದರಂತೆ. ಆದರೆ ಅಶೋಕ್ ಕುಮಾರ ಭವಿಷ್ಯವನ್ನು ವಿಧಿ ಮೊದಲೇ ನಿರ್ಧರಿಸಿ ಆಗಿತ್ತು.  ಅಶೋಕ್ ಕುಮಾರ್ ಹೀರೋ ಎನ್ನುವ ಕಾರಣಕ್ಕೆ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡು ಮದುವೆಯಾಗಬೇಕಿದ್ದ ಹುಡುಗಿ ಕೂಡಾ ಮದುವೆಯಿಂದ ದೂರ  ಸರಿದಿದ್ದರಂತೆ. 


ಇದನ್ನೂ ಓದಿ : BBK 10: ಬಿಗ್‌ಬಾಸ್‌ನಲ್ಲಿ ಗ್ಯಾಂಗ್‌ ಕಟ್ಟಿಕೊಂಡು ಗೆಲ್ತೀವಿಯೆಂದ ಟೀಂ; ಅದೇ ಗುಂಪಿನಿಂದ ಒಬ್ಬೊಬ್ಬರೇ ಔಟ್!


ಕೋಟಿ ಗಳಿಸಿದ ಮೊದಲ ಹಿಂದಿ ಚಿತ್ರ : 
ಅಶೋಕ್ ಕುಮಾರ್ 1936 ರಲ್ಲಿ 'ಜೀವನ್ ನಯ್ಯಾ' ಮೂಲಕ ಬಾಲಿವುಡ್ ಪ್ರವೇಶಿಸಿದರು. ಇದರ ನಂತರ ಅವರು ಅನೇಕ ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರಗಳನ್ನು ನೀಡಿದರು. ಆದರೆ, 1943 ರಲ್ಲಿ ಬಿಡುಗಡೆಯಾದ ಪಂಡು ಸಿನಿಮಾ ಗಲ್ಲ ಪೆಟ್ಟಿಗೆಯ ವಿಚಾರದಲ್ಲಿ ಬಿರುಗಾಳಿ ಎಬ್ಬಿಸಿತ್ತು. ವರದಿಯ ಪ್ರಕಾರ 1943 ರಲ್ಲಿ ಬಿಡುಗಡೆಯಾದ 'ಕಿಸ್ಮತ್' ಚಿತ್ರವು ಆ ಅವಧಿಯಲ್ಲಿಯೇ 1 ಕೋಟಿ ರೂ. ಗಳಿಸಿತ್ತಂತೆ. ಅಶೋಕ್ ಕುಮಾರ್ ಅವರ ಈ ಚಿತ್ರ ಕೋಟ್ಯಂತರ ರೂಪಾಯಿ ಗಳಿಸಿದ ಮೊದಲ ಹಿಂದಿ ಚಿತ್ರ ಎನ್ನಲಾಗಿದೆ. ಅಶೋಕ್ ಕುಮಾರ್ ಅವರು 'ಕಿಸ್ಮತ್' ಚಿತ್ರದಲ್ಲಿ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.  


ಇದನ್ನೂ ಓದಿ : Bigg Boss: ಬಿಗ್‌ ಬಾಸ್‌ ಇತಿಹಾಸದಲ್ಲೇ ಇದೇ ಮೊದಲು.. ಖ್ಯಾತ ಸ್ಪರ್ಧಿಗೆ ಸಾರ್ವಜನಿಕವಾಗಿ ಕಹಿ ಅನುಭವ...! ವಿಡಿಯೋ ವೈರಲ್‌


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ