ಒಂದಾಗ್ತಾರಾ ಸುದೀಪ್, ಯಶ್, ದರ್ಶನ್..? `ಕೆಜಿಎಫ್-2` & `ವಿಕ್ರಾಂತ್ ರೋಣ` ಒಟ್ಟಿಗೆ ರಿಲೀಸ್..?
ಯಶ್ ಹಾಗೂ ಸುದೀಪ್ ನಡುವೆ ಮುನಿಸು ಇದೆ ಅನ್ನೋ ಗಾಸಿಪ್ ಓಡಾಡುತ್ತಲೇ ಇದೆ. ವಿಡಿಯೋದಲ್ಲಿ ನಟ ಸುದೀಪ್ ಅವರನ್ನ ಏಕವಚನದಲ್ಲಿ ಕರೆದರು ಎಂದು ಸುದೀಪ್ ಫ್ಯಾನ್ಸ್ ಸಿಟ್ಟಾಗಿದ್ದರು. ಅಂದಿನಿಂದ ಇಂದಿನವರೆಗೆ ಕಿಚ್ಚ ಸುದೀಪ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ನಡುವೆ ಈ ವಿಚಾರಕ್ಕೆ ತಿಕ್ಕಾಟ ನಡೆಯುತ್ತಾ ಬಂದಿದೆ.
ಬೆಂಗಳೂರು : ಜಗತ್ತಿನಾದ್ಯಂತ ಕನ್ನಡ ಚಿತ್ರರಂಗದ್ದೇ ಸದ್ದು. ಯಾಕಂದ್ರೆ ಕನ್ನಡದಲ್ಲಿ ಒಂದಾದ ಬಳಿಕ ಒಂದು ಪ್ಯಾನ್ ಇಂಡಿಯಾ ಸಿನಿಮಾಗಳು ಸದ್ದು ಮಾಡುತ್ತಿವೆ. ಅದರಲ್ಲೂ ಯಶ್ (Yash) ಅಭಿನಯದ 'ಕೆಜಿಎಫ್-2'(KGF 2) ಹಾಗೂ ಸುದೀಪ್ ಅಭಿನಯದ (Kichcha Sudeep) 'ವಿಕ್ರಾಂತ್ ರೋಣ' ಸಿನಿಮಾಗಳು (Vikrant Rona Film) ಕನ್ನಡ ಚಿತ್ರರಂಗವನ್ನು ಎಲ್ಲೆಲ್ಲೂ ಮಿಂಚುವಂತೆ ಮಾಡಿವೆ. ಹೀಗಿರುವಾಗಲೇ ಸುದೀಪ್ ಮತ್ತು ಯಶ್ ಒಂದಾಗ್ತಾರೆ ಅನ್ನೋ ಸುದ್ದಿಯೊಂದು ಹೊರಬಿದ್ದಿದೆ.
ಹೌದು, ಯಶ್ (Yash) ಹಾಗೂ ಸುದೀಪ್ (Sudeep) ನಡುವೆ ಮುನಿಸು ಇದೆ ಅನ್ನೋ ಗಾಸಿಪ್ ಓಡಾಡುತ್ತಲೇ ಇದೆ. 2019ರಲ್ಲಿ ನಟ ಕಿಚ್ಚ ಸುದೀಪ್ (Kichcha Sudeep)ಅವರು ರಾಕಿಂಗ್ ಸ್ಟಾರ್ ಯಶ್‌ಗೆ (Rocking Star Yash) ವರ್ಕೌಟ್ ಚಾಲೆಂಜ್ ನೀಡಿದ್ದರು. ಅಂದಿನ ಸಮಯದಲ್ಲಿ ವರ್ಕೌಟ್ ಚಾಲೆಂಜ್ ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. ಇನ್ನು ಸುದೀಪ್ ಅವರು ನೀಡಿದ್ದ ಚಾಲೆಂಜ್ ಸ್ವೀಕರಿಸಿದ್ದ ನಟ ಯಶ್ ವಿಡಿಯೋ (Yash Workout Video)ಮಾಡಿದ್ದರು. ಇದೇ ವೀಡಿಯೋ ದೊಡ್ಡ ವಿವಾದ ಎಬ್ಬಿಸಿತ್ತು.
ಇದನ್ನೂ ಓದಿ : Katrina Kaif: ಅತ್ತೆಯೊಂದಿಗೆ ನಟಿ ಕತ್ರಿನಾ ಕೈಫ್ ಬಾಂಧವ್ಯ ಹೇಗಿದೆ..?
ಸ್ಟಾರ್ ವಾರ್..!
ಏನಪ್ಪ ಆ ಕಾಂಟ್ರವರ್ಸಿ ಅಂದ್ರೆ ನಟ ಯಶ್ ತಾವೇ ವರ್ಕೌಟ್ ಚಾಲೆಂಜ್ ಸ್ವೀಕರಿಸಿದ್ದರು ಕೂಡ ಬೇರೆಯವರಿಂದ ವರ್ಕೌಟ್ ಮಾಡಿಸಿದ್ದರು. ಅಲ್ಲದೆ ಆ ವಿಡಿಯೋದಲ್ಲಿ ನಟ ಸುದೀಪ್ ಅವರನ್ನ ಏಕವಚನದಲ್ಲಿ ಕರೆದರು ಎಂದು ಸುದೀಪ್ ಫ್ಯಾನ್ಸ್ (Suddep Fans) ಸಿಟ್ಟಾಗಿದ್ದರು. ಅಂದಿನಿಂದ ಇಂದಿನವರೆಗೆ ಕಿಚ್ಚ ಸುದೀಪ್ ಹಾಗೂ ರಾಕಿಂಗ್ ಸ್ಟಾರ್ ಯಶ್ (Rocking Star Yash) ಅಭಿಮಾನಿಗಳ ನಡುವೆ ಈ ವಿಚಾರಕ್ಕೆ ತಿಕ್ಕಾಟ ನಡೆಯುತ್ತಾ ಬಂದಿದೆ. ಆದರೆ ವಿಷಯ ಅದಲ್ಲ, ಇದೀಗ ಕಿಚ್ಚ ಸುದೀಪ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಒಂದಾಗ್ತಾರೆ ಅನ್ನೋ ಮಾತುಗಳು ಚಂದನವನದ ಗಲ್ಲಿಯಲ್ಲಿ ಹರಿದಾಡುತ್ತಿದೆ.
ಕಿಚ್ಚ ಸುದೀಪ್ ಮತ್ತು ಯಶ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾಗಳು ತೆರೆಗೆ ಬರಲು ಸಜ್ಜಾಗಿವೆ. ಹೀಗಾಗಿ ಮಾಸ್ಟರ್ ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. ಅದೇನೆಂದರೆ ಕೆಜಿಎಫ್-2 (KGF 2) ಜೊತೆಗೆ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಟೀಸರ್ ರಿಲೀಸ್ ಮಾಡಲು ಪ್ಲ್ಯಾನ್ ಮಾಡಲಾಗಿದೆಯಂತೆ (Vikrant Rona teaser release). ಅಂದರೆ 'ಕೆಜಿಎಫ್-2' ಸಿನಿಮಾ ಪ್ರದರ್ಶನದ ವೇಳೆ 'ವಿಕ್ರಾಂತ್ ರೋಣ' ಟೀಸರ್ ಬಿಗ್ ಸ್ಕ್ರೀನ್ ನಲ್ಲಿ ಮೂಡಿ ಬರಲಿದೆ ಎನ್ನಲಾಗುತ್ತಿದೆ. ಮತ್ತೊಂದೆಡೆ ಇದೇ ಶುಭ ಘಳಿಗೆಯಲ್ಲಿ ನಟ ಸುದೀಪ್, ಯಶ್ ಹಾಗೂ ದರ್ಶನ್ ಒಂದಾಗಲಿ ಅನ್ನೋದು ಕೋಟಿ ಕೋಟಿ ಅಭಿಮಾನಿಗಳ ಬಯಕೆ.
ಇದನ್ನೂ ಓದಿ : ನಿವೇದಿತಾ ಜೈನ್ ಸಾವಿನ ರಹಸ್ಯ! ಆಗಿನ ಸಿಎಂಗೂ ಈ ನಟಿಗೂ ಇದ್ದ ನಂಟೇನು?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.