ಜಗತ್ತಿನ ಅತೀ ಎತ್ತರದ ಕಟ್ಟಡ 'ಬುರ್ಜ್ ಖಲೀಫಾ' ಮೇಲೆ ಕನ್ನಡದ ಕೀರ್ತಿ ಪತಾಕೆ..!

ಕಿಚ್ಚ ಸುದೀಪ್ ಅವರ ಬಹುನಿರೀಕ್ಷಿತ ಬಹುಭಾಷಾ ಚಿತ್ರ ವಿಕ್ರಾಂತ್ ರೋಣ ಶೀರ್ಷಿಕೆ ಲೋಗೋ ಮತ್ತು ಟೀಸರ್ ನ್ನು ದುಬೈನ ಬುರ್ಜ್ ಖಲೀಫಾದಲ್ಲಿ ಬಿಡುಗಡೆ ಮಾಡಲಾಗಿದೆ.ಆ ಮೂಲಕ ವಿಶ್ವದಲ್ಲೇ ಈ ಸಾಧನೆ ಮಾಡಿರುವ ಮೊದಲ ಚಿತ್ರ ಹಾಗೂ ನಟ ಎನ್ನುವ ಹೆಗ್ಗಳಿಕೆಗೆ ಸುದೀಪ್ ಹಾಗೂ ಅವರ ಚಿತ್ರ ಪಾತ್ರವಾಗಿದೆ.

Last Updated : Feb 1, 2021, 05:10 PM IST
ಜಗತ್ತಿನ ಅತೀ ಎತ್ತರದ ಕಟ್ಟಡ 'ಬುರ್ಜ್ ಖಲೀಫಾ' ಮೇಲೆ ಕನ್ನಡದ ಕೀರ್ತಿ ಪತಾಕೆ..! title=
Photo Courtesy: Twitter

ಬೆಂಗಳೂರು: ಕಿಚ್ಚ ಸುದೀಪ್ ಅವರ ಬಹುನಿರೀಕ್ಷಿತ ಬಹುಭಾಷಾ ಚಿತ್ರ ವಿಕ್ರಾಂತ್ ರೋಣ ಶೀರ್ಷಿಕೆ ಲೋಗೋ ಮತ್ತು ಟೀಸರ್ ನ್ನು ದುಬೈನ ಬುರ್ಜ್ ಖಲೀಫಾದಲ್ಲಿ ಬಿಡುಗಡೆ ಮಾಡಲಾಗಿದೆ.ಆ ಮೂಲಕ ವಿಶ್ವದಲ್ಲೇ ಈ ಸಾಧನೆ ಮಾಡಿರುವ ಮೊದಲ ಚಿತ್ರ ಹಾಗೂ ನಟ ಎನ್ನುವ ಹೆಗ್ಗಳಿಕೆಗೆ ಸುದೀಪ್ ಹಾಗೂ ಅವರ ಚಿತ್ರ ಪಾತ್ರವಾಗಿದೆ.

ಭಾರಿ ಬಜೆಟ್ ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರ ವಿಶ್ವದಾದ್ಯಂತ ಸುಮಾರು 50ಕ್ಕೂ ಅಧಿಕ ದೇಶಗಳೂ ಹಾಗೂ ಸುಮಾರು 10 ಭಾಷೆಗಳಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ ಎನ್ನಲಾಗುತ್ತಿದೆ. ಈ ಹಿಂದೆ ಈ ಚಿತ್ರಕ್ಕೆ 'ಫ್ಯಾಂಟಮ್' ಎಂದು ಹೆಸರಿಡಲಾಗಿತ್ತು. ಈಗ ಮತ್ತೆ ವಿಕ್ರಾಂತ್ ರೋಣ ಎಂದು ಮರು ನಾಮಕರಣ ಮಾಡಲಾಗಿದೆ ಈ ಚಿತ್ರವನ್ನು ಅನುಪ್ ಭಂಡಾರಿ ನಿರ್ದೇಶಿಸಿದ್ದಾರೆ ಮತ್ತು ಈ ಸಿನಿಮಾ ಆಕ್ಷನ್-ಥ್ರಿಲ್ಲರ್ ಆಗಿರುತ್ತದೆ ಎನ್ನಲಾಗಿದೆ.

ಇದನ್ನೂ ಓದಿ: IFFI 2021: ಗೋವಾ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಕನ್ನಡದಲ್ಲಿ ಸುದೀಪ್ ಭಾಷಣ...!

ಈಗ ಚಿತ್ರದ ಲೋಗೋ ಬುರ್ಜ್ ಕಲಿಫಾ ಮೇಲೆ ಬಿತ್ತರಿಸಿರುವ ವೀಡಿಯೋವನ್ನು ಕಿಚ್ಚ ಸುದೀಪ್ (kichcha sudeep) ತಮ್ಮ ಸಾಮಾಜಿಕ ಮಾಧ್ಯಮಗಳ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ "ಈ ವೀಡಿಯೊವನ್ನು ವೈಯಕ್ತಿಕವಾಗಿ ನನಗೆ ಕಳುಹಿಸಿದ್ದಕ್ಕಾಗಿ ಧನ್ಯವಾದಗಳು ಬುರ್ಜ್ ಖಲೀಫಾ. ನಮಗೆ ತುಂಬಾ ಚೆನ್ನಾಗಿ ಆತಿಥ್ಯ ನೀಡಿದ್ದಕ್ಕಾಗಿ ಧನ್ಯವಾದಗಳು ದುಬೈ. ತುಂಬಾ ಇಷ್ಟವಾಯಿತು. ಅದೇ ರೀತಿಯ ಎಚ್ಡಿ ವಿಡಿಯೋವನ್ನು ನಾಳೆ ಪೋಸ್ಟ್ ಮಾಡಲಾಗುವುದು, ಎಲ್ಲರಿಗೂ ಧನ್ಯವಾದಗಳು' ಎಂದು ಅವರು ಬರೆದುಕೊಂಡಿದ್ದಾರೆ.

ಈ ಚಿತ್ರದ ಲಾಂಚ್ ಬಗ್ಗೆ ಮಾತನಾಡಿರುವ ನಿರ್ದೇಶಕ ಅನೂಪ್ ಬಂಡಾರಿ "ಚಲನಚಿತ್ರ ನಿರ್ಮಾಪಕರಾಗಿ, ಚಿತ್ರಮಂದಿರಗಳಿಗೆ ಹಿಂತಿರುಗುವಲ್ಲಿ ಪ್ರೇಕ್ಷಕರ ವಿಶ್ವಾಸವನ್ನು ಪುನಃಸ್ಥಾಪಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ನಾನು ಭಾವಿಸುತ್ತೇನೆ. ನಾವು ವಿಕ್ರಾಂತ್ ರೋಣವನ್ನು ಹೆಚ್ಚಿನ ಪ್ರಮಾಣದ ಶ್ರಮದಿಂದ ಜೋಡಿಸಿದ್ದೇವೆ ಮತ್ತು ನಾವು "ಅದಕ್ಕಾಗಿ 2020 ರ ಎಲ್ಲಾ ವಿಲಕ್ಷಣಗಳನ್ನು ನಾವು ಸಂತೋಷದಿಂದ ತಡೆದುಕೊಂಡಿದ್ದೇವೆ. ಅದರ ಶೀರ್ಷಿಕೆ ಲೋಗೊ ಮತ್ತು ಸ್ನೀಕ್ ಪೀಕ್ ಅನ್ನು ಇಷ್ಟು ದೊಡ್ಡ ರೀತಿಯಲ್ಲಿ ಬಹಿರಂಗಪಡಿಸುವುದಕ್ಕೆ ನನಗೆ ಖುಷಿಯಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: COVID-19 ಹಿನ್ನಲೆಯಲ್ಲಿ ಸಿಂಪಲ್ ಹುಟ್ಟುಹಬ್ಬ ಆಚರಿಸಿಕೊಳ್ಳಲು ಕಿಚ್ಚ ಸುದೀಪ್ ನಿರ್ಧಾರ, ಅಭಿಮಾನಿಗಳಿಗೂ ಮನವಿ

ಇನ್ನೊಂದೆಡೆಗೆ ಕಿಚ್ಚ ಸುದೀಪ್ ಮಾತನಾಡಿ "ಈ ಚಿತ್ರವನ್ನು ಸಿನಿಮೀಯವಾಗಿ ಸದಭಿರುಚಿಯ ರೀತಿಯಲ್ಲಿ ಕ್ಯಾನ್ವಾಸ್ ಮಾಡುವ ಬೃಹತ್ ಕಾರ್ಯಕ್ಕೆ ಚಿತ್ರದ ನಿರ್ಮಾಪಕರು ಮುಂದಾಗಿದ್ದಾರೆ ಎಂಬುದು ನಂಬಲಾಗದ ಸಂಗತಿ. ಭಾರತೀಯ ಚಲನಚಿತ್ರವೊಂದು ವಿಶ್ವಾದ್ಯಂತ ಇಂತಹ ಅಭೂತಪೂರ್ವ ಗೋಚರತೆಯನ್ನು ಪಡೆಯುವ ಸಾಕ್ಷಿಯ ಬಗ್ಗೆ ನಾನು ತುಂಬಾ ಉತ್ಸುಕನಾಗಿದ್ದೇನೆ" ಎಂದು ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News