ಖ್ಯಾತ ನಟರ ಜೊತೆ ನಟಿಸಿದ್ದ, ಮಹೇಶ್ ಬಾಬು ಪತ್ನಿಯ ಸಹೋದರಿಗೆ ದಪ್ಪಗಿದ್ದಕ್ಕೆ ಸಿನಿಮಾ ಆಫರ್ಗಳೇ ಸಿಗಲಿಲ್ಲ..!
Shilpa Shirodkar : ಈಕೆ 90 ರ ದಶಕದ ಹೆಸರಾಂತ ನಟಿ, ತಮ್ಮ ವೃತ್ತಿಜೀವನ ಉತ್ತುಂಗದ ಹಂತದಲ್ಲಿದ್ದಾಗ, ಸಿನಿಮಾಗಳಿಂದ ದೂರ ಉಳಿದು, ಸಂಸಾರೀಕ ಜೀವನ ನಡೆಸುತ್ತಿದ್ದಾರೆ. ಬಿಟೌನ್ ಸ್ಟಾರ್ ನಟರಾದ, ಸಲ್ಮಾನ್ ಖಾನ್, ಮಿಥುನ್ ಚಕ್ರವರ್ತಿ, ಗೋವಿಂದ ಸೇರಿದಂತೆ ಹಲವು ದಿಗ್ಗಜ ನಟರೊಂದಿಗೆ ಇವರು ನಟಿಸಿ ಸೈ ಎನಿಸಿಕೊಂಡಿದ್ದರು.. ಆದರೆ...
Shilpa Shirodkar life : 1990 ರ ದಶಕದ ಈ ನಟಿ ಹಲವಾರು ಹಿಟ್ ಚಲನಚಿತ್ರಗಳನ್ನು ನೀಡುವ ಮೂಲಕ ಸ್ಟಾರ್‌ಪಟ್ಟ ಗಿಟ್ಟಿಸಿಕೊಂಡಿದ್ದರು.. ಯಶಸ್ವಿ ವೃತ್ತಿಜೀವನವನ್ನು ನಡೆಸುತ್ತಿದ್ದರು.. ಮಿಥುನ್ ಚಕ್ರವರ್ತಿ ಅವರೊಂದಿಗೆ ಹಿಂದಿ ಚಲನಚಿತ್ರಕ್ಕೆ ಪಾದಾರ್ಪಣೆ ಮಾಡಿದ ಈ ಸುಂದರಿ, ತೂಕದ ಕಾರಣದಿಂದಾಗಿ ಸಾಕಷ್ಟು ಆಫರ್‌ಗಳನ್ನು ಕಳೆದುಕೊಂಡು ಅವಮಾನ ಎದುರಿಸಬೇಕಾಯಿತು..
ಈಕೆ ಖ್ಯಾತ ನಟಿ ನಮ್ರತಾ ಶಿರೋಡ್ಕರ್ ಅವರ ಸಹೋದರಿ, ಮಹೇಶ್ ಬಾಬು ಇವರ ಸೋದರ ಮಾವ. ಅಷ್ಟೇ ಅಲ್ಲ, ಬಾಲಿವುಡ್‌ನ ಪ್ರತಿಭಾವಂತ ನಟಿ ಮೀನಾಕ್ಷಿ ಶಿರೋಡ್ಕರ್ ಅವರ ಮೊಮ್ಮಗಳು.. ಅವರು ಬೇರೆ ಯಾರು ಅಲ್ಲ, 1989 ರಲ್ಲಿ ʼಭ್ರಷ್ಟಾಚಾರ್ʼ ಸಿನಿಮಾದಲ್ಲಿ ಮಿಥುನ್ ಚಕ್ರವರ್ತಿ ಮತ್ತು ರೇಖಾ ಜೊತೆ ತೆರೆ ಹಂಚಿಕೊಂಡಿದ್ದ "ನಟಿ ಶಿಲ್ಪಾ ಶಿರೋಡ್ಕರ್".
ಇದನ್ನೂ ಓದಿ:ಮುಖೇಶ್ ನಿತಾ ಅಂಬಾನಿ ಅಂಟಿಲಿಯಾ ನಿವಾಸದಲ್ಲಿ ಎಲ್ಲಿ ಇರ್ತಾರೆ ಗೊತ್ತೆ..!
ಶಿಲ್ಪಾ ಶಿರೋಡ್ಕರ್ ಅವರು 1990 ರ ಕಿಶನ್ ಕನ್ಹಯ್ಯಾ ಸಿನಿಮಾದಲ್ಲಿ ಅನಿಲ್ ಕಪೂರ್ ಜೊತೆಗೆ ನಟಿಸಿದರು. ಈ ಸಿನಿಮಾ ಉತ್ತರ ಯಶಸ್ಸು ಗಳಿಸಿತು. ಅದರ ನಂತರ, ಶಿಲ್ಪಾ ಮೃತ್ಯುದಂಡ್ , ಜಿ ಓಪಿ ಕಿಶನ್ , ತ್ರಿನೇತ್ರ , ಹಮ್ , ಖುದಾ ಗವಾ , ಆಂಖೇನ್ ಮತ್ತು ಪೆಹಚಾನ್ ಸೇರಿದಂತೆ ಹಲವಾರು ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ವಾಸ್ತವಾಗಿ ಶಿಲ್ಪಾ ಶಿರೋಡ್ಕರ್ ಅವರು ಶಾರುಖ್ ಖಾನ್ ನಟನೆಯ 1988 ರಲ್ಲಿ ಬಿಡುಗಡೆಯಾದ ದಿಲ್ ಸೇ ಸಿನಿಮಾದ ಚೈಯಾ ಚೈಯಾ ಹಾಡಿನಲ್ಲಿ ಕುಣಿಯುವ ಅವಕಾಶ ಬಂದಿತ್ತು.. ಆದರೆ, ನಿರ್ಮಾಪಕರು ಸ್ವಲ್ಪ ಹೆಚ್ಚು ತೂಕ ಹೊಂದಿದ್ದಾರೆಂದು ಮಲೈಕಾ ಅರೋರಾರನ್ನ ಸಲೆಕ್ಟ್ ಮಾಡಿದರಂತೆ..
ಇದನ್ನೂ ಓದಿ: ಹೆಣ್ಣಿಗೆ ಸೀರೆ ಯಾಕೆ ಅಂದ... ಅಂತ ನಿಮ್ಗೆ ಕೇತಿಕಾ ನೋಡಿದ್ರೆ ಗೊತ್ತಾಗುತ್ತೆ..! ಫೋಟೋಸ್ ಇಲ್ಲಿವೆ..
ಬ್ರಿಟಿಷ್ ಬ್ಯಾಂಕರ್ ಅಪರೇಶ್ ರಂಜಿತ್ ಅವರನ್ನು ಮದುವೆಯಾದ ನಂತರ ಶಿಲ್ಪಾ ಸಿನಿರಂಗವನ್ನು ತೊರೆಯಲು ನಿರ್ಧರಿಸಿದರು. 13 ವರ್ಷಗಳ ವಿರಾಮದ ನಂತರ ಸಧ್ಯ ಕಿರುತೆರೆಗೆ ಮರಳಿದರು. ಸಿಲ್ಸಿಲಾ ಪ್ಯಾರ್ ಕಾ ಮತ್ತು ಏಕ್ ಮುತ್ತಿ ಆಸ್ಮಾನ್ ಸೇರಿದಂತೆ ಹಲವಾರು ಸಿರೀಯಲ್‌ನಲ್ಲಿ ನಟಿಸಿದ್ದಾರೆ.. ಪ್ರಸ್ತುತ ಬಿಗ್ ಬಾಸ್ 18 ರಲ್ಲಿ ಭಾಗವಹಿಸಿದ್ದು, ವಾರಕ್ಕೆ 2.5 ಲಕ್ಷ ರೂಪಾಯಿ ಗಳಿಸುತ್ತಿದ್ದಾರೆ ಎಂದು ವರದಿಯಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.