BBK9 : ಬಿಗ್‌ ಬಾಸ್‌ ಮೇಲೆ ಆರ್ಯವರ್ಧನ್ ಗುರೂಜಿ ಮ್ಯಾಚ್ ಫಿಕ್ಸಿಂಗ್ ಆರೋಪ ಮಾಡಿದ ನಂತರ ಕಿಚ್ಚ ಸುದೀಪ್ ಅವರು ವೇದಿಕೆಯ ಮೇಲೆಯೇ ಖಡಕ್ ವಾರ್ನಿಂಗ್ ನೀಡಿದ್ದರು. ಸದ್ಯ ಬಿಗ್‌ಬಾಸ್‌ ಕಾರ್ಯಕ್ರಮಕ್ಕೆ ಸುದೀಪ್‌ ಗೈರಾಗಿರುವ ಹಿನ್ನೆಲೆ, ಸುದೀಪ್‌ ಸರ್‌.. ಐ ಲವ್‌ ಯೂ, ಬೇಗ ಬನ್ನಿ ಎಂದು ಗುರೂಜಿ ಕಿಚ್ಚನಲ್ಲಿ ಕೇಳಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಎಲಿಮಿನೆಟ್‌ಗೆ ನಾಮಿನೆಟ್‌ ಆಗಿದ್ದ ಗುರೂಜಿ ಕೊನೆಗೆ ಮಾತನಾಡಿ, ಐ ಲವ್‌ ಯೂ ಬಿಗ್‌ಬಾಸ್‌, ಸುದೀಪ್‌ ಸರ್‌ ನೀವು ಬರದೇ ಬೇಜಾರಾಗಿದೆ. ಸಂಕಟ ಆಗುತ್ತಿದೆ. ನೀವು ಇಲ್ಲದ್ದಕ್ಕೆ ಅರ್ಧ ನನಗೆ ಆಚೆ ಹೋಗ್ಬೇಕು ಅಂತ ಅನಿಸ್ತಿದೆ. ನೀವು ಇಲ್ಲಾ ಅಂದ್ರೆ ಬಿಗ್‌ಬಾಸ್‌ ಬೀಕೋ ಎನಿಸುತ್ತಿದೆ. ಎನೇ ತಪ್ಪುಗಳನ್ನ ಮಾಡಿದ್ರು ನೀವು ತಿದ್ದುತ್ತಿರಾ ಮುಂದಿನವಾರ ನೀವು ಬಂದು ನಮ್ಮನ್ನೆಲ್ಲವರನ್ನು ಮಾತನಾಡಿಸಬೇಕು ಅಂತ ಆಸೆ ಇದೆ ಎಂದರು.


ಇದನ್ನೂ ಓದಿ: ಮೆಗಾಸ್ಟಾರ್‌ ಫ್ಯಾನ್ಸ್‌ಗೆ ದೀಪಾವಳಿ ಗಿಫ್ಟ್‌ : ಚಿರಂಜೀವಿ 154ನೇ ಸಿನಿಮಾ ಟೀಸರ್‌ ರಿಲೀಸ್‌


ಅಲ್ಲದೆ, ಇಷ್ಟು ದಿನ ಬಿಗ್‌ಬಾಸ್‌ನಲ್ಲಿ ಇರೋದಿಕ್ಕೆ ಕರ್ನಾಟಕದ ಜನತೆ ಸರ್ಪೋಟ್‌ ಮಾಡಿದಿರಾ. ನನ್ನ ಮಗಳು ಆಹಲ್ಯಾ ಬಿದಾ.. ಐ ಲವ್‌ ಯೂ ಮಗಳೇ ಇಲ್ಲಿ ಇರೋಕೆ ಎಷ್ಟು ಆಸೆ ಇದ್ಯೋ ಅಷ್ಟೆ ಆಸೆ ನಿನ್ನ ನೋಡ್ಬೇಕು ಅಂತ ಇದೆ ಎಂದು ಮಗಳನ್ನು ನೆನೆದರು. ಆದ್ರೆ ಗುರೂಜಿ ಲಕ್‌ ಚನ್ನಾಗಿತ್ತು ಅನಿಸುತ್ತೆ ಮನೆಯಿಂದ ಮಯೂರಿ ಕ್ಯಾತರಿ ಎಲಿಮಿನೆಟ್‌ ಆದರು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ