BBK9 : ಬಿಗ್‌ಬಾಸ್‌ ಪ್ಯಾಮಿಲಿ ವೀಕ್‌ ಪ್ರಭಾವದಿಂದ ರೂಪೇಶ್‌ ರಾಜಣ್ಣ ಅವರ ಬಹುದಿನದ ಆಸೆ ಈಡೇರಿದೆ. ಬಿಗ್‌ಬಾಸ್‌ ಮನೆಯ ಕ್ಯಾಪ್ಟನ್‌ ಆಗಿ ಕನ್ನಡಪರ ಹೋರಾಟಗಾರ ರಾಜಣ್ಣ ಆಯ್ಕೆಯಾಗಿದ್ದಾರೆ. ಟಾಸ್ಕ್‌ ವಿಚಾರ ಸೇರಿದಂತೆ ಮನೆ ಮಂದಿ ಜೊತೆ ಸದಾ ಜಗಳವಾಡುತ್ತಿದ್ದ ರೂಪೇಶ್‌ ರಾಜಣ್ಣ ಅಸಲಿ ಆಟ ಈಗ ಶುರುವಾಗಿದೆ ಎಂದು ನೆಟಿಜನ್ಸ್‌ ಹೇಳುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಬಿಗ್​​ಬಾಸ್​​ ಸೀಸನ್​​ 9 ಯಶಸ್ವಿಯಾಗಿ 10ನೇ ವಾರಕ್ಕೆ ಕಾಲಿಟ್ಟಿದೆ. ಬಿಗ್‌ ಟಾಸ್ಕ್‌ಗಳ ಟೆನ್ಷನ್‌ಗೆ ದೊಡ್ಮನೆ ಮಂದಿ ಸುಸ್ತಾಗಿ ಹೋಗಿದ್ದಾರೆ. ಇನ್ನು ಇತ್ತೀಚೆಗೆ ಬಿಗ್‌ಬಾಸ್‌ ಫ್ಯಾಮಿಲಿ ವೀಕ್‌ ಜಾರಿಯಲ್ಲಿತ್ತು. ಸ್ಪರ್ಧಿಗಳ ಕುಟುಂಬಸ್ಥರು ಬಿಗ್‌ಬಾಸ್‌ ಮನೆಗೆ ಭೇಟಿ ಕೊಟ್ಟಿದ್ದರು. ಕೊನೆಗೆ ಹೋಗುವಾಗ ಮುಂದಿನ ಕ್ಯಾಪ್ಟನ್‌ ಯಾರಾಗಬೇಕು ಎಂದು ಬಿಗ್‌ಬಾಸ್‌ ಸ್ಪರ್ಧಿಗಳ ಕುಟುಂಬಸ್ಥರ ಅಭಿಪ್ರಾಯವನ್ನು ಕೇಳಲಾಗಿತ್ತು.


ಇದನ್ನೂ ಓದಿ: ಹೊಂಬಾಳೆ ಹೊಸ ಸಿನಿಮಾ ಅನೌನ್ಸ್‌ : ಶಾರುಖ್‌ ಖಾನ್‌ ಜೊತೆ ರಿಷಬ್‌, ರಕ್ಷಿತ್‌ ಶೆಟ್ಟಿ ನಟನೆ


ಹೆಚ್ಚಾಗಿ ರೂಪೇಶ್‌ ರಾಜಣ್ಣ ಹೆಸರು ಕೇಳಿ ಬಂದ ಹಿನ್ನೆಲೆ ಅವರನ್ನು ಕ್ಯಾಪ್ಟನ್‌ ಎಂದು ಘೋಷಿಸಲಾಗಿದೆ. ರೂಪೇಶ್​​ ರಾಜಣ್ಣ ಕ್ಯಾಪ್ಟನ್​​ ಆಗುವ ಆಸೆಯನ್ನು ಕೊನೆಗೂ ಈಡೇರಿಸಿಕೊಂಡಿದ್ದಾರೆ. ಬಿಗ್‌ಬಾಸ್‌ ಮೆನೆಗೆ ಬಂದಿದ್ದ ಹೆಂಡತಿಯ ಕಾಲಿಗೆ ಬಿದ್ದ ಪರಿಣಾಮ ರಾಜಣ್ಣನಿಗೆ ಕ್ಯಾಪ್ಟನ್‌ ಆಗುವ ಭಾಗ್ಯ ಸಿಕ್ಕಿದೆ ಎಂದು ನೆಟ್ಟಗರು ಮಾತನಾಡಿಕೊಳ್ಳುತ್ತಿದ್ದಾರೆ. ಅಲ್ಲದೆ, ರಾಜಣ್ಣನನ್ನು ದೂರುತಿದ್ದ ಸ್ಪರ್ಧಿಗಳಿಗೆ ತಕ್ಕ ಶಾಸ್ತಿ ಕಾದಿದೆ ಎಂದು ರೂಪೇಶ್‌ ರಾಜಣ್ಣ ಫ್ಯಾನ್ಸ್‌ ಮಾತನಾಡಿಕೊಳ್ಳುತ್ತಿದ್ದಾರೆ.


ಒಟ್ಟಾರೆಯಾಗಿ ದಿನದಿಂದ ದಿನಕ್ಕೆ ಬಿಗ್‌ಬಾಸ್‌ ಆಟ ಜೋರಾಗುತ್ತಿದೆ. ಕಳಪೆಯಾಗಿದ್ದ ಸ್ಪರ್ಧಿಗಳು ಮನೆಯ ಆಡಳಿತದ ಚುಕ್ಕಾಣಿ ಹಿಡಿಯುತ್ತಿದ್ದಾರೆ. ಇದರಿಂದ ಪ್ರೇಕ್ಷಕರಿಗೆ ಊಹೆ ಮಾಡಲು ಸಹ ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಗೆಲ್ಲುತ್ತಾನೆ ಎನ್ನುವ ಸ್ಪರ್ಧಿಗಳು ಇಂದು ಎಲಿಮಿನೆಟ್‌ ಆಗುವ ಸಂಭವವೂ ಸಹ ಇದೆ. ಇನ್ನು ಈವಾರದ ಯಾರೂ ಮನೆ ಬಿಡುತ್ತಾರೆ. ಯಾರಿಗೆ ಉತ್ತಮ, ಕಳಪೆ ಪಟ್ಟ ಸಿಗುತ್ತೆ ಅಂತ ಕಾಯ್ದು ನೋಡಬೇಕಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.