ಹೊಂಬಾಳೆ ಹೊಸ ಸಿನಿಮಾ ಅನೌನ್ಸ್‌ : ಶಾರುಖ್‌ ಖಾನ್‌ ಜೊತೆ ರಿಷಬ್‌, ರಕ್ಷಿತ್‌ ಶೆಟ್ಟಿ ನಟನೆ

ಸ್ಯಾಂಡಲ್‌ವುಡ್‌ನಲ್ಲಿ ಅತ್ಯದ್ಭುತ ಸಿನಿಮಾಗಳನ್ನು ನೀಡಿ ಭಾರತೀಯ ಸಿನಿರಂಗದಲ್ಲಿ ಪ್ರಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆಯಾಗಿ ಹೊರಹೊಮ್ಮಿರುವ ಹೊಂಬಾಳೆ ಫಿಲಂಸ್‌ ಸದ್ಯ ಬಾಲಿವುಡ್‌ ಅಂಗಳಕ್ಕೆ ಕಾಲಿಟ್ಟಿದ್ದು, ಬಾಲಿವುಡ್‌ ಬಾದ್‌ ಷಾ ಶಾರುಖ್‌ ಖಾನ್‌ ಜೊತೆ ಸಿನಿಮಾ ಮಾಡಲು ಕನ್ನಡದ ಹೊಂಬಾಳೆ ಫಿಲಂಸ್‌ ಮುಂದಾಗಿದೆ.

Written by - Krishna N K | Last Updated : Dec 3, 2022, 01:06 PM IST
  • ಹೊಂಬಾಳೆ ಫಿಲಂಸ್‌ ಸದ್ಯ ಬಾಲಿವುಡ್‌ ಅಂಗಳಕ್ಕೆ ಕಾಲಿಟ್ಟಿದೆ
  • ಬಾಲಿವುಡ್‌ ಬಾದ್‌ ಷಾ ಶಾರುಖ್‌ ಖಾನ್‌ ಜೊತೆ ಸಿನಿಮಾ ಮಾಡಲು ಹೊಂಬಾಳೆ ಮುಂದಾಗಿದೆ
  • ಶಾರುಖ್‌ ಖಾನ್‌ ಜೊತೆ ರಿಷಬ್‌ ಶೆಟ್ಟಿ, ರಕ್ಷಿತ್‌ ಶೆಟ್ಟಿ ನಟಿಸಲಿದ್ದಾರೆ
ಹೊಂಬಾಳೆ ಹೊಸ ಸಿನಿಮಾ ಅನೌನ್ಸ್‌ : ಶಾರುಖ್‌ ಖಾನ್‌ ಜೊತೆ ರಿಷಬ್‌, ರಕ್ಷಿತ್‌ ಶೆಟ್ಟಿ ನಟನೆ title=

ಬೆಂಗಳೂರು : ಸ್ಯಾಂಡಲ್‌ವುಡ್‌ನಲ್ಲಿ ಅತ್ಯದ್ಭುತ ಸಿನಿಮಾಗಳನ್ನು ನೀಡಿ ಭಾರತೀಯ ಸಿನಿರಂಗದಲ್ಲಿ ಪ್ರಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆಯಾಗಿ ಹೊರಹೊಮ್ಮಿರುವ ಹೊಂಬಾಳೆ ಫಿಲಂಸ್‌ ಸದ್ಯ ಬಾಲಿವುಡ್‌ ಅಂಗಳಕ್ಕೆ ಕಾಲಿಟ್ಟಿದ್ದು, ಬಾಲಿವುಡ್‌ ಬಾದ್‌ ಷಾ ಶಾರುಖ್‌ ಖಾನ್‌ ಜೊತೆ ಸಿನಿಮಾ ಮಾಡಲು ಕನ್ನಡದ ಹೊಂಬಾಳೆ ಫಿಲಂಸ್‌ ಮುಂದಾಗಿದೆ.

ಭಾರತೀಯ ಸಿನಿರಂಗಕ್ಕೆ ಕೆಜಿಎಫ್‌, ಕಾಂತಾರದಂತಹ ಬ್ಲಾಕ್ಬಸ್ಟರ್‌ ಸಿನಿಮಾಗಳನ್ನು ನೀಡುವ ಮೂಲಕ ಗಮನಸೆಳೆದಿರುವ ಹೊಂಬಾಳೆ ಇದೀಗ ಶಾರುಖ್‌ ಜೊತೆ ಸಿನಿಮಾ ಮಾಡಲು ಸಿದ್ಧವಾಗಿದೆ. ಇನ್ನೊಂದು ವಿಶೇಷ ಅಂದ್ರೆ ಹೊಂಬಾಳೆ ಬ್ಯಾನರ್‌ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಹಿಂದಿ ಸಿನಿಮಾಗೆ ಖ್ಯಾತ ನಿರ್ದೇಶಕ ರೋಹಿತ್‌ ಶೆಟ್ಟಿ ಆಕ್ಷನ್‌ ಕಟ್‌ ಹೇಳಲಿದ್ದಾರೆ ಎಂದು ತಿಳಿದು ಬಂದಿದೆ. 

ಇದನ್ನೂ ಓದಿ: ಇದು ಇಡಿ ದೇಶವೇ ಖುಷಿ ಪಡುವ ಸುದ್ದಿ : ಸ್ಟಾರ್‌ ಡೈರೆಕ್ಟರ್‌ ರಾಜಮೌಳಿಗೆ ಆಸ್ಕರ್‌ ಫಿಕ್ಸ್‌..!

ಕುತೂಹಲ ಎಂಬಂತೆ ಶಾರುಖಾನ್‌ ಜೊತೆ ರಕ್ಷಿತ್‌ ಶೆಟ್ಟಿ ಮತ್ತು ರಿಷಬ್‌ ಶೆಟ್ಟಿ ನಟಿಸಲಿದ್ದಾರೆ ಎಂದು ಹೇಳಲಾಗಿದೆ. ಈಗಾಗಲೇ ಕಿಂಗ್‌ ಖಾನ್‌ ಸಿನಿಮಾದಲ್ಲಿ ರಿಷಬ್‌ ಮತ್ತು ರಕ್ಷಿತ್‌ ಎಂಟ್ರಿಗೆ ರೋಹಿತ್‌ ಶೆಟ್ಟಿ ಅವರು ಸ್ಪೇಷಲ್‌ ಪಾತ್ರಗಳನ್ನು ಕ್ರಿಯೇಟ್‌ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಕೆಲವೇ ದಿನಗಳಲ್ಲಿ ಈ ಮೆಗಾ ಪ್ರಾಜೆಕ್ಟ್ ಅನ್ನು ಹೊಂಬಾಳೆ ಅನೌನ್ಸ್ ಮಾಡಲಿದೆ.

ಇನ್ನು ಹೊಂಬಾಳೆ ನಿರ್ಮಾಣದ ಬಿಗ್‌ ಬಜೆಟ್‌ ಸಲಾರ್‌ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಇದರ ಬೆನ್ನಲ್ಲೆ ಶಾರುಖ್ ಖಾನ್ ಜೊತೆ ಬಿಗ್‌ ಸಿನಿಮಾ ಮಾಡಲು ಹೊಂಬಾಳೆ ಫಿಲಂಸ್ ಮುಂದಾಗಿದ್ದು ಕುತೂಹಲ ಕೆರಳಿಸಿದೆ. ಈ ಕುರಿತಾಗಿ ಶಾರುಖ್ ಖಾನ್ ಜೊತೆ ಹೊಂಬಾಳೆ ಫಿಲಂಸ್ ಮಾತುಕತೆ ಮುಗಿಸಿದೆ. ಅಲ್ಲದೆ, ಚಾರ್ಲಿ777 ಸಿನಿಮಾದಿಂದ ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿ ಮಿಂಚುತ್ತಿರುವ ರಕ್ಷಿತ್ ಶೆಟ್ಟಿ ಹಾಗೂ ಕಾಂತಾರ ಫೇಮ್‌ ರಿಷಬ್ ಶೆಟ್ಟಿ ಕೂಡ ಶಾರುಖ್ ಚಿತ್ರದಲ್ಲಿ ನಟಿಸೊಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News