ಇದು ಇಡಿ ದೇಶವೇ ಖುಷಿ ಪಡುವ ಸುದ್ದಿ : ಸ್ಟಾರ್‌ ಡೈರೆಕ್ಟರ್‌ ರಾಜಮೌಳಿಗೆ ಆಸ್ಕರ್‌ ಫಿಕ್ಸ್‌..!

ಟಾಲಿವುಡ್‌ ಸ್ಟಾರ್‌ ನಿರ್ದೇಶಕ, ಕನ್ನಡಿಗ ರಾಜಮೌಳಿ RRR ಚಲನಚಿತ್ರವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಆಸ್ಕರ್‌ ಭೇಟೆ ಆರಂಭಿಸಿರುವ ಜಕ್ಕಣ್ಣ, ವಿದೇಶದಲ್ಲಿ ತಮ್ಮದೇ ಶೈಲಿಯಲ್ಲಿ ಆರ್‌ಆರ್‌ಆರ್‌ ಸಿನಿಮಾವನ್ನು ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಜಪಾನ್‌ನಲ್ಲೂ ರಾಜಮೌಳಿ ಶಕ್ತಿ ಪ್ರದರ್ಶನ ತೋರಿ ಸಿನಿ ಪ್ರೇಕ್ಷಕರ ಮನ ಗೆದ್ದಿದ್ದರು.

Written by - Krishna N K | Last Updated : Dec 3, 2022, 12:09 PM IST
  • ರಾಜಮೌಳಿ RRR ಚಲನಚಿತ್ರವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಮಾಡುತ್ತಿದ್ದಾರೆ
  • ಕಳೆದ ಕೆಲವು ವರ್ಷಗಳಿಂದ ನ್ಯೂಯಾರ್ಕ್ ಚಿತ್ರ ವಿಮರ್ಶಕ ವಲಯದಲ್ಲಿ ಕೇಳಿ ಬರುವ ಉತ್ತಮ ನಿರ್ದೇಶಕರಿಗೆ ಆಸ್ಕರ್‌ ಪ್ರಶಸ್ತಿ ಲಭಿಸುತ್ತಿದೆ
  • ಇದೀಗ ನ್ಯೂಯಾರ್ಕ್‌ ಫಿಲ್ಮ್‌ ಕ್ರಿಟಿಕ್ಸ್‌ ಸರ್ಕಲ್‌ ಸಂಸ್ಥೆ ರಾಜಮೌಳಿ ಅವರನ್ನು ಅತ್ಯುತ್ತಮ ನಿರ್ದೇಶಕ ಎಂದು ಹೇಳಿಕೊಂಡಿದೆ
ಇದು ಇಡಿ ದೇಶವೇ ಖುಷಿ ಪಡುವ ಸುದ್ದಿ : ಸ್ಟಾರ್‌ ಡೈರೆಕ್ಟರ್‌ ರಾಜಮೌಳಿಗೆ ಆಸ್ಕರ್‌ ಫಿಕ್ಸ್‌..! title=

New York Film Critics Circle Best Director Rajamouli : ಟಾಲಿವುಡ್‌ ಸ್ಟಾರ್‌ ನಿರ್ದೇಶಕ, ಕನ್ನಡಿಗ ರಾಜಮೌಳಿ RRR ಚಲನಚಿತ್ರವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಆಸ್ಕರ್‌ ಭೇಟೆ ಆರಂಭಿಸಿರುವ ಜಕ್ಕಣ್ಣ, ವಿದೇಶದಲ್ಲಿ ತಮ್ಮದೇ ಶೈಲಿಯಲ್ಲಿ ಆರ್‌ಆರ್‌ಆರ್‌ ಸಿನಿಮಾವನ್ನು ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಜಪಾನ್‌ನಲ್ಲೂ ರಾಜಮೌಳಿ ಶಕ್ತಿ ಪ್ರದರ್ಶನ ತೋರಿ ಸಿನಿ ಪ್ರೇಕ್ಷಕರ ಮನ ಗೆದ್ದಿದ್ದರು.

ಅಲ್ಲದೆ, ಆಸ್ಕರ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಆರ್‌ಆರ್‌ಆರ್ ಚಿತ್ರತಂಡ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರಕ್ಕಾಗಿ ಸುಮಾರು ಐವತ್ತು ಕೋಟಿ ರೂ. ಖರ್ಚು ಮಾಡಿದ್ದಾರೆ ಎಂಬುವುದಾಗಿ ವರದಿಗಳಾಗಿವೆ. ಆರ್‌ಆರ್‌ಆರ್‌ ಸಿನಿಮಾಗೆ ಪಾಸಿಟಿವ್‌ ಇಮೇಜ್‌ ಸಿಕ್ಕಿದಷ್ಟೇ ನೆಗೆಟಿವ್‌ ಕಾಮೆಂಟ್‌ಗಳೂ ಸಹ ಬಂದಿದ್ದವು. ಇದೀಗ ರಾಜಮೌಳಿ ಪಾಶ್ಚಿಮಾತ್ಯ ದೇಶಗಳಲ್ಲಿ ಅಬ್ಬರದಿಂದ ಆರ್‌ಆರ್‌ಆರ್‌ ಸಿನಿಮಾ ಪ್ರಚಾರ ಮಾಡುತ್ತಿದ್ದಾರೆ.

ಇದನ್ನೂ ಓದಿ: ಮಹೇಶ್‌ ಬಾಬು ಪುತ್ರಿಯ ಇನ್‌ಸ್ಟಾ ಫಾಲೋವರ್ಸ್‌ ಸಂಖ್ಯೆ ನೋಡಿದ್ರೆ ಶಾಕ್‌ ಆಗ್ತೀರಾ..!

ಹೌದು... ಭಾರತದಿಂದ ರಾಜಮೌಳಿ ದೃಶ್ಯಕಾವ್ಯ ಆರ್‌ಆರ್‌ಆರ್‌ ಸಿನಿಮಾ ಅಧಿಕೃತವಾಗಿ ಆಸ್ಕರ್‌ಗೆ ಎಂಟ್ರಿ ಕೊಡದಿದ್ದರೂ ಸಹ ತಮ್ಮದೇ ಶೈಲಿಯಲ್ಲಿ ಆಸ್ಕರ್‌ ಅಂಗಳಕ್ಕೆ ಜಕ್ಕಣ್ಣ ಕಾಲಿಟ್ಟಿದ್ದಾರೆ. ಅಲ್ಲದೆ, ಕಳೆದ ಕೆಲವು ವರ್ಷಗಳಿಂದ ನ್ಯೂಯಾರ್ಕ್ ಚಿತ್ರ ವಿಮರ್ಶಕ (New York Film Critics Circle) ವಲಯದಲ್ಲಿ ಕೇಳಿ ಬರುವ ಉತ್ತಮ ನಿರ್ದೇಶಕರಿಗೆ ಆಸ್ಕರ್‌ ಪ್ರಶಸ್ತಿ ಲಭಿಸುತ್ತಿದೆ. ಇದೀಗ ನ್ಯೂಯಾರ್ಕ್‌ ಫಿಲ್ಮ್‌ ಕ್ರಿಟಿಕ್ಸ್‌ ಸರ್ಕಲ್‌ ಸಂಸ್ಥೆ ರಾಜಮೌಳಿ ಅವರನ್ನು ಅತ್ಯುತ್ತಮ ನಿರ್ದೇಶಕ ಎಂದು ಹೇಳಿಕೊಂಡಿದೆ. ಇದರೊಂದಿಗೆ ರಾಜಮೌಳಿಗೆ ಅತ್ಯುತ್ತಮ ನಿರ್ದೇಶಕ ವಿಭಾಗದಲ್ಲಿ ಆಸ್ಕರ್ ಸಿಗುವುದು ಫಿಕ್ಸ್ ಆಗಿದೆ.

ನಿನ್ನೆ ರಾಷ್ಟ್ರೀಯ ಮಾಧ್ಯಮಗಳು ರಾಮ್ ಚರಣ್ ಅವರಿಗೂ ಇದೇ ಪ್ರಶ್ನೆ ಕೇಳಿದ್ದವು. ಅದಕ್ಕೆ ಅವರು, ಸಿಗದಿದ್ದರೂ ಪರವಾಗಿಲ್ಲ.. ಆದ್ರೆ ರಾಜಮೌಳಿ ಅವರಿಗೆ ಸಿಗಬೇಕು. ಅದಕ್ಕೆ ಅವರು ಅರ್ಹರು ಎಂದು ಟಾಲಿವುಡ್‌ ಸ್ಟಾರ್‌ ರಾಮ್ ಚರಣ್ ತಮ್ಮ ಮನದಾಳದ ಮಾತನ್ನು ಹೇಳಿದ್ದರು. ಈ ಬಾರಿಯ ಆಸ್ಕರ್‌ನಲ್ಲಿ ಯಾವ ರೀತಿಯ ಪವಾಡಗಳು ನಡೆಯಲಿವೆ ಎಂದು ಕಾಯ್ದು ನೋಡಬೇಕಿದೆ. ಆರ್‌ಆರ್‌ಆರ್‌ ಸಿನಿಮಾ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಭಾವ ಬೀರಲಿದೆಯೇ? ರಾಜಮೌಳಿಗೆ ಆಸ್ಕರ್‌ ಲಭಿಸಲಿದೆಯಾ..? ಎಂದು ಇಡೀ ದೇಶವೇ ಕುತೂಹಲದಿಂದ ನೋಡುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News