Bigg Boss Kannada Season 9 : ಬಿಗ್‌ ಬಾಸ್‌ ಕನ್ನಡ ಓಟಿಟಿ ಮುಕ್ತಾಯವಾಯಿತು. ಇನ್ನೇನು ಕೆಲವೇ ದಿನಗಳಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 9 ಕೂಡ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 9 ಸೆಪ್ಟೆಂಬರ್ 24 ರಂದು ಆರಂಭವಾಗಲಿದೆ. ಅದ್ದೂರಿಯಾಗಿ ಓಪನಿಂಗ್ ಆಗಲಿರುವ ಈ ಶೋನಲ್ಲಿ ಎಷ್ಟು ಸ್ಪರ್ಧಿಗಳಿರಲಿದ್ದಾರೆ? ಯಾರೆಲ್ಲ ದೊಡ್ಮನೆ ಸೇರಲಿದ್ದಾರೆ ಎಂಬ ಕುತೂಹಲ ಜನರಲ್ಲಿ ಹೆಚ್ಚಾಗಿದೆ. ಬಿಗ್ ಬಾಸ್ ಕನ್ನಡ ಓಟಿಟಿ ಶೋ ಫಿನಾಲೆ ಮುಗಿಯಿತು, ಅಲ್ಲಿನ ಟಾಪ್ 4 ಸ್ಪರ್ಧಿಗಳು ಟಿವಿ ಸೀಸನ್‌ಗೆ ಎಂಟ್ರಿ ಆಗಿದ್ದೂ ಆಯಿತು. 


COMMERCIAL BREAK
SCROLL TO CONTINUE READING

ಇದನ್ನೂ ಓದಿ : Kabza Teaser Released : ಹೇಗಿದೆ ನೋಡಿ ಕಬ್ಜ ಟೀಸರ್! ಉಪ್ಪಿ - ಕಿಚ್ಚನ ಲುಕ್‌ಗೆ ಫ್ಯಾನ್ಸ್‌ ಫಿದಾ


ಬಿಗ್ ಬಾಸ್ ಕನ್ನಡ ಸೀಸನ್ 9ರಲ್ಲಿ ಯಾರೆಲ್ಲ ಭಾಗವಹಿಸಲಿದ್ದಾರೆ ಎಂಬ ಕುತೂಹಲ ಮೂಡಿದೆ. ಒಟ್ಟು 18 ಸ್ಪರ್ಧಿಗಳು ದೊಡ್ಮನೆ ಸೇರಲಿದ್ದು, ವಿಶೇಷ ಎಂದರೆ ಈ ಬಾರಿ ಹಳೆಯ ಸೀಸನ್‌ಗಳ ಸ್ಪರ್ಧಿಗಳು ಕೂಡ ಭಾಗಿಯಾಗಲಿದ್ದಾರೆ. ಸೀನಿಯರ್ಸ್‌ ಜೊತೆ ಹೊಸಬರ ಹಣಾಹಣಿಯೇ ಈ ಬಾರಿಯ ಬಿಗ್‌ ಬಾಸ್‌ ಕನ್ನಡ ಸೀಸನ್‌ 9 ರ ವಿಶೇಷತೆಯಾಗಿದೆ. ಬಿಗ್ ಬಾಸ್ ಕನ್ನಡ ಓಟಿಟಿಯಿಂದ 4 ಸ್ಪರ್ಧಿಗಳು, ಕಳೆದ 8 ಸೀಸನ್‌ಗಳಲ್ಲಿ ಭಾಗವಹಿಸಿದವರಲ್ಲಿ 5 ಸ್ಪರ್ಧಿಗಳು ಇವರ ಜೊತೆಗೆ 9 ಹೊಸ ಸ್ಪರ್ಧಿಗಳು ಈ ಶೋನಲ್ಲಿ ಭಾಗಿಯಾಗಲಿದ್ದಾರೆ. 


ಹಿಂದಿ ಬಿಗ್‌ ಬಾಸ್‌ನಲ್ಲಿ ಈ ಮಾದರಿಯನ್ನು ಅನುಸರಿಸುತ್ತಾರೆ. ಹಾಗೆಯೇ ಕನ್ನಡದಲ್ಲಿಯೂ ಹಳೆಯ ಸೀಸನ್‌ಗಳಲ್ಲಿ ಭಾಗವಹಿಸಿದ್ದವರು ಬಿಗ್ ಬಾಸ್ ಮನೆ ಪ್ರವೇಶ ಮಾಡಲಿದ್ದಾರೆ. ಬಿಗ್ ಬಾಸ್ ಕನ್ನಡ ಓಟಿಟಿಯಿಂದ ಸೆಲೆಕ್ಟ್‌ ಆದ ಆರ್ಯವರ್ಧನ್ ಗುರೂಜಿ, ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ಸಾನ್ಯಾ ಅಯ್ಯರ್ ಬಿಗ್ ಬಾಸ್ ಕನ್ನಡ ಸೀಸನ್ 9 ರಲ್ಲಿ ಇರಲಿದ್ದಾರೆ. ಆದರೆ ಈಗ ಕುತೂಹಲ ಇರುವುದು ಹಳೆಯ ಸೀಸನ್‌ನ ಯಾವ ಸ್ಪರ್ಧಿಗಳು ಬಿಗ್‌ಬಾಸ್‌ಗೆ ಬರಲಿದ್ದಾರೆ ಎಂಬುದು. ಇತ್ತೀಚೆಗೆ ಹೊರ ಬಂದ ಪ್ರೋಮೋದಲ್ಲಿ ಅನುಪಮಾ ಗೌಡ, ವೈಷ್ಣವಿ ಗೌಡ, ದೀಪಿಕಾ ದಾಸ್, ಪ್ರಶಾಂತ್ ಸಂಬರಗಿ ಕಾಣಿಸಿಕೊಂಡಿದ್ದರು. ಇದನ್ನು ನೋಡಿದ ಮೇಲೆ ಈ ಮಾಜಿ ಕಂಟೆಸ್ಟಂಟ್‌ಗಳು ದೊಡ್ಮನೆಗೆ ಹೋಗ್ತಾರಾ ಅಥವಾ ಬೇರೆ 5 ಹಳೆಯ ಸ್ಪರ್ಧಿಗಳು ಬಿಗ್‌ ಬಾ ಮನೆ ಸೇರಲಿದ್ದಾರಾ? ಎಂಬ ಪ್ರಶ್ನೆ ಮೂಡಿದೆ. ಇನ್ನೂ ಇವರ ಜೊತೆ ಬರುವ  9 ಹೊಸ ಸ್ಪರ್ಧಿಗಳು ಯಾರು ಎಂಬ ಕಾತುರ ಸಹ ಹೆಚ್ಚಾಗಿದೆ. ಆದರೆ ಈ ಎಲ್ಲದಕ್ಕೂ ಸೆ. 24 ರ ಸಂಜೆ ಉತ್ತರ ಸಿಗಲಿದೆ. 


ಇದನ್ನೂ ಓದಿ : Comedy Khiladigalu 4 : ಕಾಮಿಡಿ ಕಿಲಾಡಿಗಳು ಸೀಸನ್ - 4 ಶುರು.. ವೀಕೆಂಡ್ ನಲ್ಲಿ ನಗುವಿನ ಹಬ್ಬ ಫಿಕ್ಸ್!


ಈ ಹಿಂದಿನ ಬಿಗ್ ಬಾಸ್ ಶೋಗಳಿಗಿಂತ ಈ ಬಾರಿಯ ಸೀಸನ್‌ ವಿಶೇಷವಾಗಿರುವುದೇನೂ ಸತ್ಯ. ಅದರೆ ಜೊತೆ ಮಸಾಲಾದಾರ್‌ ಎಪಿಸೋಡ್‌ಗಳು ವೀಕ್ಷರಿಗೆ ಸಿಗುವುದು ಪಕ್ಕಾ ಆಗಿದೆ. ಹಳಬರ ಜೊತೆ ಹೊಸಬರ ಮಿಲನ ಹೇಗಿರಲಿದೆ ಎಂಬುದನ್ನು ನೋಡಲು ಎಲ್ಲ ಬಿಗ್‌ ಬಾಸ್‌ ಫ್ಯಾನ್ಸ್‌ಗಳು ಕಾಯುತ್ತಿದ್ದಾರೆ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.