Comedy Khiladigalu 4 : ಕಾಮಿಡಿ ಕಿಲಾಡಿಗಳು ಸೀಸನ್ - 4 ಶುರು.. ವೀಕೆಂಡ್ ನಲ್ಲಿ ನಗುವಿನ ಹಬ್ಬ ಫಿಕ್ಸ್!

Comedy Khiladigalu season 4 : ನಗಿಸಲು ಮತ್ತೇ ಬಂದಿದ್ದಾರೆ ಕಾಮಿಡಿ ಕಿಲಾಡಿಗಳು ಹೌದು ಕಾಮಿಡಿ ಕಿಲಾಡಿಗಳು ಸೀಸನ್-4 ಶುರುವಾಗಿದೆ.

Written by - K Karthik Rao | Edited by - Chetana Devarmani | Last Updated : Sep 17, 2022, 05:35 PM IST
  • ಕಾಮಿಡಿ ಕಿಲಾಡಿಗಳು ಸೀಸನ್ - 4 ಶುರು
  • ವೀಕೆಂಡ್ ನಲ್ಲಿ ನಗುವಿನ ಹಬ್ಬ ಫಿಕ್ಸ್!
Comedy Khiladigalu 4 : ಕಾಮಿಡಿ ಕಿಲಾಡಿಗಳು ಸೀಸನ್ - 4 ಶುರು.. ವೀಕೆಂಡ್ ನಲ್ಲಿ ನಗುವಿನ ಹಬ್ಬ ಫಿಕ್ಸ್! title=
ಕಾಮಿಡಿ ಕಿಲಾಡಿಗಳು

Comedy Khiladigalu season 4 : ನಗಿಸಲು ಮತ್ತೇ ಬಂದಿದ್ದಾರೆ ಕಾಮಿಡಿ ಕಿಲಾಡಿಗಳು ಹೌದು ಕಾಮಿಡಿ ಕಿಲಾಡಿಗಳು ಸೀಸನ್-4 ಶುರುವಾಗಿದೆ. ಕನ್ನಡ ಟೆಲಿವಿಷನ್ ನಲ್ಲಿ ತನ್ನದೇ ಛಾಪು ಮೂಡಿಸಿರುವ ಜೀ ಕನ್ನಡ ಮನರಂಜನೆ ಮನೆಮಾತಾಗಿರು ವಾಹಿನಿ. ವಾರಾಂತ್ಯ ಬಂತು ಅಂದ್ರೆ ಕರುನಾಡಿನ ಜನತೆ ಮಿಸ್ ಮಾಡ್ದೇ ಜೀ ಕನ್ನಡ ವಾಹಿನಿಯನ್ನ ವೀಕ್ಷಿಸುತ್ತಾರೆ ಕಾರಣ ಮನರಂಜನೆ. ವಾರದ ದಿನಗಳಲ್ಲಿ ಕೆಲಸದ ಜಂಜಾಟ, ಆಯಾಸ, ಟೆನ್ಷನ್ ಹೀಗೆ ಹಲವು ಕಾರಣಗಳಿಂದ ಜನ ಬೇಸತ್ತು ವಾರಂತ್ಯ ಬಂದ್ರೆ ಸಾಕಪ್ಪಾ ಅಂತಾ ಕಾದಿರುತ್ತಾರೆ, ವಾರಾಂತ್ಯದಲ್ಲಿ ಸ್ವಲ್ಪ ಮೋಜು ಮಸ್ತಿ ಮಾಡಿ ವಿಶ್ರಾಂತಿಸಿ ತಮ್ಮ ಟೆನ್ಷನ್ ಅನ್ನು ಕಳೆಯೊ ಮಂದಿಗೆ ಇದೀಗ ಜೀ ಕನ್ನಡ ಕಾಮಿಡಿ ಕಿಲಾಡಿಗಳು ಸೀಸನ್-4 ಅನ್ನು ಪ್ರಸ್ತುತ ಪಡಿಸುತ್ತಿದೆ.

ಇದನ್ನೂ ಓದಿ : Bigg Boss Kannada OTT Grand Finale: 9 ನೇ ಆವೃತ್ತಿಗೆ ಬಡ್ತಿ ಪಡೆದವರು ಯಾರು ಗೊತ್ತೇ?

ಶನಿವಾರ ಮತ್ತು ಭಾನುವಾರ ರಾತ್ರಿ 9ಕ್ಕೆ ಪ್ರಸಾರ ವಾಗುವ ಈ ಕಾರ್ಯಕ್ರಮ ಇದೇ ಸೆಪ್ಟೆಂಬರ್ 17 ರಿಂದ ಶುರುವಾಗುದೆ. ಇಷ್ಟು ದಿನ ಪ್ರೋಮೊ ಗಳಿಂದ ಕ್ಯುರ್ಯಾಸಿಟಿ ಹುಟ್ಟಿಸಿದ್ದ ಕಾಮಿಡಿ ಕಿಲಾಡಿಗಳು-4 ಇನ್ಮುಂದೆ ಪ್ರತೀ ಮನೆ ಮನೆಗಳಲ್ಲಿ ಪ್ರಸಾರವಾಗಲಿದೆ.

ಇನ್ನೂ ಜಡ್ಜಸ್ ಯಾರೆಂಬ ಪ್ರಶ್ನೆ ಎಲ್ಲರಲ್ಲೂ ಮೂಡಿರುತ್ತೆ , ಪ್ರತೀ ಭಾರಿಯಂತೆ ಈ ಭಾರಿಯೂ ಕೂಡ ಜಡ್ಜಸ್ ಗಳಾಗಿ ನವರಸ ನಾಯಕ ಜಗ್ಗೇಶ್, ವಿಕಟ ಕವಿ ಯೋಗರಾಜ್ ಬಟ್ರು ಹಾಗೂ ಕ್ರೇಜಿ ಕ್ವಿನ್ ರಕ್ಷಿತಾ ಕಾರ್ಯಕ್ರಮದಲ್ಲಿ ಮೆರುಗು ತುಂಬಲಿದ್ದಾರೆ. ಇನ್ನೂ ನಿರೂಪಣೆ ಯನ್ನ ಮಾಸ್ಟರ್ ಆನಂದ್ ನಿಭಾಯಿಸಲಿದ್ದಾರೆ. 

ಇದನ್ನೂ ಓದಿ : Kabza Teaser: 5 ಭಾಷೆಗಳಲ್ಲಿ ರಿಲೀಸ್‌ ಆಗಲಿದೆ ಕಬ್ಜ ಟೀಸರ್​! ರಾಣಾ, ಶಿವಣ್ಣ ಸ್ಪೆಷಲ್​ ಗೆಸ್ಟ್​

ಈ ಸೀಸನ್ ಕಿಲಾಡಿಗಳು ಒಬ್ಬಬ್ಬರದ್ದು ಒಂದೊಂದು ವೈಶಿಷ್ಟ್ಯವನ್ನು ಹೊಂದಿರುವಂತಹ ಪ್ರತಿಭೆಗಳು, ನಿಮ್ಮನ್ನ ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸೋದ್ರಲ್ಲಿ ಡೌಟೇ ಇಲ್ಲ. ಒಟ್ಟಿನಲ್ಲಿ ಇನ್ಮುಂದೆ ಜೀ ಕನ್ನಡ ವಾಹಿನಿಯಲ್ಲಿ ವಾರಾಂತ್ಯದ ಮನರಂಜನೆ ಪಕ್ಕಾ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News